ಆಲ್ಟೋ ಕಾರಿಗಿಂತಲೂ ಜೋಡೆತ್ತುಗಳ ಧಾರ್ರಣೆ ದುಬಾರಿ!
ಕ.ಪ್ರ.ವಾರ್ತೆ , ರಾಮನಗರ , ನ.13
ಮಾರುತಿ 800 ಅಷ್ಟೇ ಅಲ್ಲ, ಆಲ್ಟೋ ಕಾರಿಗಿಂತಲೂ ದುಬಾರಿ ಆಗಿದೆ ಜೋಡೆತ್ತುಗಳ ಧಾರಣೆ
ಹೌದು, ಇದು ಆಶ್ಚರ್ಯವಾದರೂ ಸತ್ಯ. ಜೋಡೆತ್ತುಗಳ ಬೆಲೆ ಮಧ್ಯಮ ವರ್ಗದವರಿಗೆಂದೇ ಬಿಡಲಾದ ಕಾರುಗಳ ಧಾರಣೆಯನ್ನೂ ಮೀರಿಸಿದೆ.
ಹೀಗೆ ಲಕ್ಷಗಟ್ಟಲೆ ಕೊಟ್ಟು ಖರೀದಿಸಿದ ಜೋಡೆತ್ತುಗಳು ಕನಕಪುರದಲ್ಲಿ ನಡೆದ ಕೃಷಿ ಉತ್ಸವದಲ್ಲಿ ಗಮನ ಸೆಳೆದಿವೆ. ಒಂದಕ್ಕೊಂದು ಮೀರಿಸುವಂತಹ ಎತ್ತುಗಳನ್ನು ಮೇಳದಲ್ಲಿ ಸ್ಪರ್ಧೆಗಾಗಿ ಕಟ್ಟಲಾಗಿತ್ತು.
ಎತ್ತುಗಳ ಬೆಲೆ ಕೇಳಿ ಕೃಷಿ ಮತ್ತು ಜಾನುವಾರುಗಳ ಸಾಕಾಣಿಕೆಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲದವರು ಬೇಸ್ತುಬಿದ್ದರು. ಮಾಗಡಿ ತಾಲೂಕಿನ ಜುಟ್ಟನಹಳ್ಳಿಯ ಜಯರಾಮ್ ಅವರು ಕಟ್ಟಿದ್ದ ಜೋಡೆತ್ತುಗಳ ಬೆಲೆ ರು.3.50 ಆಗಿದೆ.
ಅದೇ ರೀತಿ ಕನಕಪುರದ ಕೆ.ಎಂ.ಇಂದ್ರೇಶ್ ಹಾಗೂ ಕೆ.ಎಂ.ಮಲ್ಲೇಶ್ ಅವರು ಕಟ್ಟಿದ್ದ ಜೋಡೆತ್ತುಗಳ ಬೆಲೆ ರು.2.80 ಲಕ್ಷ. ಜುಟ್ಟನಹಳ್ಳಿಯ ಮಲ್ಲೇಶಯ್ಯ ಅವರು ಖರೀದಿಸಿರುವ ಎತ್ತುಗಳ ಬೆಲೆ ರು.2.75 ಲಕ್ಷವಂತೆ.
ಹೀಗೆ ಮಾಲೀಕರು ತಮ್ಮ ಎತ್ತುಗಳ ಬೆಲೆ ಹೇಳುತ್ತಿದ್ದರೆ ಸ್ವತಃ ಸಂಸದ ಡಿ.ಕೆ.ಸುರೇಶ್ ಕೂಡ ಹೌಹಾರಿದರು. ಉತ್ಸವದಲ್ಲಿ ಅತ್ಯುತ್ತಮ ರಾಸುಗಳ ಸ್ಪರ್ಧೆಗೆ ಜಿಲ್ಲೆಯ ನಾನಾ ಕಡೆಯಿಂದ ಬಂದಿದ್ದ ಜೋಡೆತ್ತು, ಹೋರಿಗಳು ನೋಡುಗರ ಗಮನ ಸೆಳೆದವು.
ಟಗರು ಹಾಕಿತು ಗುಟುರು: ಸ್ಪರ್ಧೆಗಾಗಿ ಕಟ್ಟಿದ್ದ ಟಗರು ಮತ್ತು ಹೋತಗಳು ಎದುರು ಬಂದವರತ್ತ ಗುಟುರು ಹಾಕುತ್ತಿದ್ದವು. ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರವಿ ಅವರು ಕಟ್ಟಿದ್ದ ರಾಂಬೋ ತಳಿ ಟಗರು ಆ ವಿಭಾಗದಲ್ಲೇ ಅತ್ಯಂತ ಮೈಕಟ್ಟಿನದ್ದಾಗಿತ್ತು.
ಇನ್ನು ಬಿಡದಿ ಹೋಬಳಿ ಹೊಸೂರಿನ ನರಸಿಂಹಮೂರ್ತಿ ಅವರು ರಾಂಬೋ ತಳಿಯನ್ನು ಟಗರಿನಿಂದ ಸ್ಥಳೀಯ ಕುರಿಯಲ್ಲಿ ಸಂತಾನೋತ್ಪತ್ತಿಯನ್ನು ಮಾಡಿಸಿರುವ ಮರಿ ಟಗರು ಕೂಡ ಬೆರಗುಗೊಳಿಸುವಂತಿತ್ತು. ಒಂದೂವರೆ ವರ್ಷ ಆ ಟಗರು 80 ಕೆಜಿಗಿಂತ ಅಧಿಕ ತೂಕದ್ದಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

