ಕನಕಪುರ ಮಾದರಿ ಕ್ಷೇತ್ರ ಹಿರಿಮೆ ಡಿಕೆಶಿಗೆ
ಕನ್ನಡಪ್ರಭ ವಾರ್ತೆ , ಕನಕಪುರ , ನ.13
ಹಿಂದುಳಿದ ಕ್ಷೇತ್ರವೆಂಬ ಹಣೆಪಟ್ಟಿಯನ್ನು ತೊಲಗಿಸಿ ಕನಕಪುರವನ್ನು ಅಭಿವೃದ್ಧಿಯಲ್ಲಿ ಮಾದರೀ ಕ್ಷೇತ್ರವನ್ನಾಗಿಸಿದ ಹಿರಿಮೆ ಶಾಸಕ ಡಿ.ಕೆ.ಶಿವಕುಮಾರ್ ಅವರದ್ದು ಎಂದು ಮರಳೇಗವಿಮಠದ ಶ್ರೀ ಮುಮ್ಮಡಿ ಶಿವರುದ್ರಸ್ವಾಮೀಜಿ ಹೇಳಿದ್ದಾರೆ.
ಅವರು ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್ ಆಯೋಜಿಸಿದ್ದ
ಕನಕೋತ್ಸವ-2013 ರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸಂಸದ ಡಿ.ಕೆ.ಸುರೇಶ್ ರಂಗುರಂಗಿನ ಬೆಲೂನುಗಳನ್ನು ಹಾರಿಸುವ ಮೂಲಕ ಕನಕೋತ್ಸವಕ್ಕೆ ಚಾಲನೆ ನೀಡಿದರು. ದೇಗುಲಮಠದ ಶ್ರೀ ಮುಮ್ಮಡಿ ಮಹಾಲಿಂಗಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಕನಕೋತ್ಸವದ ಅಂಗವಾಗಿ ಬೆಳಗಿನಿಂದಲೇ ವಿವಿಧ ಕಾರ್ಯಕ್ರಮಗಳು ನಡೆದವು. ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗಾಗಿ ನಡೆದ ರಂಗೋಲಿ ಸ್ಪರ್ಧೆಯಲ್ಲಿ ಸಾವಿರಕ್ಕೂ ಹೆಚ್ಚುಮಂದಿ ಪಾಲ್ಗೊಂಡಿದ್ದರು. ಚಿಣ್ಣರಿಗಾಗಿಯೇ ಆಯೋಜಿಸಿದ್ದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆಯಲ್ಲಿ ಮೂರುಸಾವಿರ ಮಂದಿ ಪಾಲ್ಗೊಂಡು ಚಿತ್ತಾಕರ್ಷಕ ಚಿತ್ರಗಳನ್ನು ಬಿಡಿಸಿದರು.
ಕಾರ್ಯಕ್ರಮದ ಅಂಗವಾಗಿ ಶ್ವಾನಗಳ ಪ್ರದರ್ಶನ ಹಾಗೂ ರ್ಯಾಂಪ್ಷೋ ನಡೆಯಿತು. ನೂರಾರು ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಮಧ್ಯಾಹ್ನ ನಡೆದ ರಾಮನಗರ ಜಿಲ್ಲಾಮಟ್ಟದ ರಂಗಗೀತೆಗಳ ಗಾಯನ ಸ್ಪರ್ಧೆಯಲ್ಲಿ ಜಿಲ್ಲೆಯ ಹೆಸರಾಂತ ರಂಗಕಲಾವಿದರು ಪಾಲ್ಗೊಂಡು ರಂಗಗೀತೆಗಳನ್ನು ಹಾಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಂಜೆ ಶಾಲಾ ಮಕ್ಕಳಿಗಾಗಿ ನಡೆದ ವೇಷಭೂಷಣ ಸ್ಪರ್ಧೆಯಲ್ಲಿ ಐದುನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ವಿವಿಧ ವೇಷಭೂಷಣಗಳೊಂದಿಗೆ ಪೋಷಕರು ಹಾಗೂ ನಾಗರಿಕರನ್ನು ರಂಜಿಸಿದರು.
ಜನರ ಗಮನ ಸೆಳೆದ ಸ್ಪರ್ಧೆ: ಕನಕೋತ್ಸವದ ಅಂಗವಾಗಿ ಇಲ್ಲಿನ ಆರ್ಇಎಸ್ಮೈದಾನದಲ್ಲಿ ಜೋಡಿಎತ್ತುಗಳ ಪ್ರದರ್ಶನ, ಉತ್ತಮ ಬಿತ್ತನೆ ಹೋರಿ, ಉತ್ತಮ ಹೋತ, ಉತ್ತಮ ಹುಂಜ, ಉತ್ತಮ ಟಗರುಗಳ ಪ್ರದರ್ಶನ ಹಾಗೂ ಸ್ಪರ್ಧೆಗಳು ರೈತರ ಹಾಗೂ ಜನರ ಮನ ಸೆಳೆದವು. ತಾಲೂಕಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಜ್ಞಾನ ಮೇಳ ಹಾಗೂ ವಸ್ತುಪ್ರದರ್ಶನದಲ್ಲಿ ನೂರಾರು ಮಂದಿ ಶಾಲಾ ಮಕ್ಕಳು ತಮ್ಮ ಸ್ವರಚಿತ ವೈಜ್ಞಾನಿಕ ಮಾದರಿಗಳನ್ನು ರಚಿಸಿ ಪ್ರದರ್ಶಿಸಿದರು. ಸಾವಿರಾರು ಜನರು ವಿಜ್ಞಾನಮೇಳವನ್ನು ವೀಕ್ಷಿಸಿ ಆನಂದಿಸಿದರು. ಕಾರ್ಯಕ್ರಮದ ಅಂಗವಾಗಿ ಕೃಷಿ ಇಲಾಖೆ, ನೀರಾವರಿ ಇಲಾಖೆ, ಜಿಲ್ಲಾಪಂಚಾಯತ್ ಇಲಾಖೆಗಳಿಂದ ರೈತರಿಗೆ ಸಿಗುವ ಅನುಕೂಲತೆಗಳು, ನವೀನ ಯಂತ್ರೋಪಕರಣಗಳು, ಬಿತ್ತನೆ ಬೀಜಗಳು, ಕೃಷಿಪದ್ಧತಿಗಳ ಬಗ್ಗೆ ಮಾಹಿತಿ ನೀಡುವ ಒಂದುನೂರಕ್ಕೂ ಹೆಚ್ಚು ಮಳಿಗೆಗಳು ಜನರನ್ನು ಆಕರ್ಷಿಸುತ್ತಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

