ಬೆಂಗಳೂರು ಗ್ರಾಮಾಂತರ

ಕೆನರಾ ಬ್ಯಾಂಕಿನಲ್ಲಿ ವಾಹನಗಳ ಖರೀದಿದಾರರ, ಮಾರಾಟಗಾರರ ಮೇಳ

Published On :

ದೇವನಹಳ್ಳಿ: ಇಲ್ಲಿನ ಕೆನರಾ ಬ್ಯಾಂಕಿನಲ್ಲಿ ಸರಕು ಸಾಗಣೆ ಮತ್ತು ಎಲ್ಲ ರೀತಿಯ ಕಾರುಗಳ ಮಾರಾಟಗಾರರ ಮತ್ತು ಖರೀದಿದಾರರ ಸಮ್ಮೇಳನ ಬ್ಯಾಂಕಿನ ಆವರಣದಲ್ಲಿ ಬುಧವಾರ ಆಯೋಜಿಸಲಾಗಿತ್ತು.
ಬ್ಯಾಂಕಿನ ಡಿಜಿಎಂ ಆರ್.ಸಂಪತ್ ಕುಮಾರ್ ಮಾತನಾಡಿ ಸಂಚಾರ ವ್ಯವಸ್ಥೆ ದೇಶದ ಆರ್ಥಿಕತೆಯ ಜೀವನಾಡಿಯಾಗಿದೆ, ದೇವನಹಳ್ಳಿ ತಾಲೂಕು ಎಲ್ಲ ರೀತಿಯಿಂದ ಪ್ರಗತಿಗೊಳ್ಳಬೇಕಾದರೆ ಸಂಚಾರ ವ್ಯವಸ್ಥೆ ಅಲ್ಲದೆ ಜೊತೆಯಲ್ಲಿ ಸಮಯದ ಉಳಿತಾಯ ಕೂಡ ಮುಖ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಗತ್ಯಗಳಿಗೆ ತಕ್ಕಂತಹ ವಾಹನಗಳನ್ನು ಖರೀದಿಸಲೇ ಬೇಕಾಗುತ್ತದೆ. ಈ ಉದ್ದೇಶದಿದಲೇ ಬ್ಯಾಂಕ್ ವಾಹನಗಳ ಮಾರಾಟಗಾರರ ಮತ್ತು ಖರೀದಿದಾರರ ಸಮಾವೇಶ ಆಯೋಜಿಸಿದ್ದು ವಾಹನಗಳ ಖರೀದಿದಾರರಿಗೆ ಅಗತ್ಯವಾದ ಸಾಲ ಸೌಲಭ್ಯ ಕಡಿಮೆ ಬಡ್ಡಿದರದಲ್ಲಿ ನೀಡಲಾಗುತ್ತಿದ್ದು ನಿಮ್ಮ ಪ್ರಗತಿಯೊಂದಿಗೆ ಬ್ಯಾಂಕ್ ಕೂಡ ಪ್ರಗತಿಯಾಗಲಿ ಎಂದರು. ಇದೇ ಸಂಧರ್ಭದಲ್ಲಿ ಬ್ಯಾಂಕಿನ ಎಜಿಎಂ ಆರ್.ಜಿ.ಸ್ವಾಮಿ ಮಾತನಾಡಿ ಕೆನರಾ ಬ್ಯಾಂಕ್ ದೇಶದ ಅಗ್ರಗಣೀಯ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು ಗ್ರಾಹಕರಿಗೆ ಎಲ್ಲ ವಾಣಿಜ್ಯ ಚಟುವಟಿಕೆಗಳಿಗೆ ಸಹಕಾರ ನೀಡಲಾಗುತ್ತಿದೆ ಎಂದರಲ್ಲದೆ ರೈತರು ಶ್ರಮದಿಂದ ಬೆಳೆದ ಬೆಳೆಗೆ ಬೆಲೆ ಬರಲು ಆತನ ಕೃಷಿ ಉತ್ಪಾದನೆ ಬೇಗನೆ ಗ್ರಾಹಕರಿಗೆ ಸೇರಬೇಕಾದರೆ ವಾಹನಗಳ ಅಗತ್ಯತೆ ಇರುತ್ತದೆ ಎಂದರು. ಆದ್ದರಿಂದ ಎಲ್ಲ ವರ್ಗಗಳ ಗ್ರಾಹಕರು ನಮ್ಮ ಬ್ಯಾಂಕ್ ನೆರವನ್ನು ಪಡೆಯಿರಿ ಎಂದರು.
  ಬ್ಯಾಂಕಿನ ಹಿರಿಯ ವ್ಯವಸ್ಥಾಪಕಿ ಲಲಿತ ಸ್ವಾಗತ ಕೋರಿದರು, ಈ ಸಂದರ್ಭದಲ್ಲಿ ದೇವನಹಳ್ಳಿಯ ಬಿಮಲ್ ಆಟೋ ಏಜನ್ಸಿ, ಅಶೋಕ ಲೈಲಾಂಡ್, ಇನೋವ ಕಾರುಗಳ ಕಂಪನಿಯವರು ಹಾಗೂ ಗ್ರಾಹಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.