ಮಣಿಗನಹಳ್ಳಿಯಿಂದ ಬೆಸ್ತರಪಾಳ್ಯದವರೆಗೆ ರಸ್ತೆ ಅಭಿವೃದ್ಧಿ
ಕ.ಪ್ರ.ವಾರ್ತೆ , ಮಾಗಡಿ , ನ.15
ಮಣಿಗನಹಳ್ಳಿಯಿಂದ ಬೆಸ್ತರಪಾಳ್ಯದವರೆಗೆ ರಸ್ತೆ ಅಭಿವೃದ್ಧಿಪಡಿಸಿ, ಡಾಂಬರೀಕರಣಗೊಳಿಸುವುದಾಗಿ ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ಮಾಗಡಿ ತಾಲೂಕಿನ ಬೆಸ್ತರಪಾಳ್ಯದಲ್ಲಿ ನೂತನ ಮಹಾಗಣಪತಿ ದೇವಾಲಯದ ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡುತ್ತಾ ಮಣಿಗನಹಳ್ಳಿ, ಬೆಸ್ತರಪಾಳ್ಯ ಸುತ್ತಮುತ್ತಲ ಗ್ರಾಮದ ಜನತೆ ನನಗೆ ಮತ ನೀಡಿ ಆಶೀರ್ವದಿಸಿದ್ದಾರೆ. ಅವರ ಋಣ ನನ್ನ ಮೇಲಿದೆ. ಆದಷ್ಟು ಬೇಗ ಮಣಿಗನಹಳ್ಳಿಯಿಂದ ಬೆಸ್ತರಪಾಳ್ಯದ ರಸ್ತೆಯನ್ನು ಅಭಿವೃದ್ಧಿಪಡಿಸಿ ಡಾಂಬರೀಕರಣಗೊಳಿಸುತ್ತೇನೆ. ಕುಡಿಯುವ ನೀರು ಪೂರೈಕೆಗೂ ಹೆಚ್ಚು ಒತ್ತು ನೀಡುವುದಾಗಿ ಭರವಸೆ ನೀಡಿದರು.
ನಾರಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ.ಎಚ್. ಸುರೇಶ್ ಮಾತನಾಡಿ ಬೆಸ್ತರಹಳ್ಳಿ ಗ್ರಾಮದಲ್ಲಿ ಸುಂದರವಾದ ಸುಸಜ್ಜಿತ ಮಹಾಗಣಪತಿ ದೇವಾಲಯ ನಿರ್ಮಾಣ ಕೈಂಕರ್ಯವನ್ನು ಶ್ರೀ ಚೌಡೇಶ್ವರಿ ಸೇವಾ ಸಮಿತಿ ಟ್ರಸ್ಟ್ ನೆರವೇರಿಸಿದೆ. ಹಿರಿಯರ ಮಾರ್ಗದರ್ಶನದಲ್ಲಿ ಯೋಜನೆ ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಜೆಡಿಎಸ್ ಹಿರಿಯ ಮುಖಂಡರಾದ ಏಸಪ್ಪನಪಾಳ್ಯದ ಗಂಗಣ್ಣ ಮಾತನಾಡಿ ಸರ್ಕಾರ ಕೇವಲ ಅಕ್ಕಿ ಕೊಟ್ಟರೆ ಸಾಲದು, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಪಡಿಸುವತ್ತ ಒತ್ತು ನೀಡಬೇಕಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕೊಳವೆ ಬಾವಿ ಕೊರೆಸಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳಿಗೆ ಸ್ಪಂದನೆ ಅಗತ್ಯವಿದೆ ಎಂದರು.
ಕೆಪಿಸಿಸಿ ಸದಸ್ಯ ಎ.ಮಂಜು ಅವರಿಗೆ ಗ್ರಾಮೀಣ ಭಾಗದ ವಾಸ್ತವಾಂಶದ ಅರಿವಿಲ್ಲದೆ ಸಂಸದರ ನಿಧಿಯಿಂದ ನೀರು ತರುವುದಾಗಿ ಸುಳ್ಳು ಹೇಳಿಕೆ ನೀಡುವುದು ಬೇಡ. ಈಗಾಗಲೇ ವೈ.ಜಿ. ಗುಡ್ಡ, ಮತ್ತು ಮಂಚನಬೆಲೆ ಜಲಾಶಯದಿಂದ ಗ್ರಾಮೀಣ ಭಾಗಕ್ಕೆ ಶಾಸಕರು ನೀರು ಕಲ್ಪಿಸಿದ್ದಾರೆ ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ ತಿಳಿಸಿದರು.
ಜಿ.ಪಂ. ಸದಸ್ಯೆ ಹಂಸಕುಮಾರಿ, ರಾಮಣ್ಣ, ಶ್ರೀಗಿರಿಪುರದ ರಾಜಣ್ಣ, ಹಿರಿಯರಾದ ಮಣಿಗನಹಳ್ಳಿ ಹನುಮಂತಪ್ಪ, ಗ್ರಾ.ಪಂ. ಸದಸ್ಯ ಎಂ.ವಿ.ಕೃಷ್ಣಪ್ಪ, ಮಂಜುನಾಥ್, ನಂದಕುಮಾರ್, ಶಿವಣ್ಣ, ಉಮಾಶಂಕರ್, ಲತಾ, ಶಾಂತಮ್ಮ, ನಾಗರಾಜು, ಚಂದ್ರಶೇಖರ್ ನಾರಸಂದ್ರ ಪಿಡಿಓ ರಾಮಚಂದ್ರು, ಎಂ.ಆರ್. ರಾಮಸ್ವಾಮಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

