ಬೆಂಗಳೂರು ಗ್ರಾಮಾಂತರ

ಸಂಘಸಂಸ್ಥೆಗಳು ಸಮರ್ಥವಾಗಿ ಬೆಳೆದು ನಿಂತಿವೆ: ಪ್ರೊ. ತಿಮ್ಮೇಗೌಡ

Published On :

ಕ.ಪ್ರ.ವಾರ್ತೆ ,  ಕನಕಪುರ ,  ನ.15
ಶತಮಾನದ ಇತಿಹಾಸವಿರುವ ಸಹಕಾರ ಚಳವಳಿಯಲ್ಲಿ ಸಂಘಸಂಸ್ಥೆಗಳು ದೇಶದ ಅರ್ಥವ್ಯವಸ್ಥೆಗೆ ನೂತನ ರೂಪ ನೀಡಲು ಸಮರ್ಥವಾಗಿ ಬೆಳೆದುನಿಂತಿವೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ತಿಮ್ಮೇಗೌಡ ಹೇಳಿದ್ದಾರೆ. ಅವರು ಕನಕಪುರದ ಟೌನ್ ಟೆನ್ನಿಸ್ ಸಭಾಂಗಣದಲ್ಲಿ 60ನೇ ಅಖಿಲ ಭಾರತ ಸಹಕಾರ ಸಪ್ತಾಹ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಮಾರಂಭದ ಉದ್ಘಾಟನೆಯನ್ನು ರೈತಸೇವಾ ಸಹಕಾರ ಸಂಘದ ಅಧ್ಯಕ್ಷ ರಾಮಯ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಹಕಾರ ಸಂಘಗಳ ಜಿಲ್ಲಾ ಉಪನಿಬಂಧಕರಾದ ಕೆ.ಎನ್. ನಂಜುಂಡೇಗೌಡ ಮಾತನಾಡಿ ಸಹಕಾರ ಸಂಘಗಳ ಸದಸ್ಯರಿಗೆ ಲಾಭಾಂಶದೊಂದಿಗೆ ಅನೇಕ ಸವಲತ್ತುಗಳು ದೊರೆಯುತ್ತಿವೆ, ಮರಣೋತ್ತರ ಪರಿಹಾರ ನಿಧಿ, ಅಪಘಾತ ಪರಿಹಾರ, ಆರೋಗ್ಯ ವಿಮೆ ಮೊದಲಾದವುಗಳು ಸಾಮಾನ್ಯವಾಗಿ ದೊರೆಯುತ್ತಿವೆ. ಬಹುಪಾಲು ಸಂಘಗಳು ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಉನ್ನತ ಶಿಕ್ಷಣಕ್ಕೆ ನೆರವು ನೀಡಿ ಉತ್ತೇಜಿಸುತ್ತಿವೆ. ಸಹಕಾರ ಚಳವಳಿ ಕುಟುಂಬದ ಬೆಳವಣಿಗೆ ಹಾಗೂ ದೇಶದ ಬೆಳವಣಿಗೆಯಲ್ಲಿ
ಮಹತ್ವದ ಪಾತ್ರ ವಹಿಸುತ್ತದೆ ಎನ್ನುವುದಕ್ಕೆ ಹಾಲು ಉತ್ಪಾದನಾ ಸಹಕಾರ ಸಂಘಗಳೇ ಅತ್ಯುತ್ತಮ ಉದಾಹರಣೆ ಎಂದು ಹೇಳಿದರು.
ಸಮಾರಂಭದಲ್ಲಿ ಬೆಂಗ್ರಾ ಸಹಕಾರ ಒಕ್ಕೂಟದ ಮಾಜಿ ಉಪಾಧ್ಯಕ್ಷ ಹೊನ್ನಯ್ಯ, ಸಹಕಾರ ಅಭಿವೃದ್ಧಿ ಅಧಿಕಾರಿ ಅಸ್ಲಾಂ ಪಾಷ, ಎಸ್.ಪಿ.ಪುರುಷೋತ್ತಮ್, ನಾರಾಯಣಗೌಡ ಆಗಮಿಸಿದ್ದರು. ವ್ಯವಸ್ಥಾಪಕಿ ಸುವರ್ಣ ಸ್ವಾಗತಿಸಿದರು. ಹಿರಿಯ ಲೆಕ್ಕಾಧಿಕಾರಿ ಸಿ.ರವೀಂದ್ರ ನಿರೂಪಿಸಿದರು. ಅಧೀಕ್ಷಕ ಹನುಮಾನ್‌ಸಿಂಗ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.