ದೇಗುಲದಲ್ಲಿ ಸಂಗೀತ ರಸಧಾರೆ...
ಕ.ಪ್ರ. ವಾರ್ತೆ , ದೊಡ್ಡಬಳ್ಳಾಪುರ , ನ.17
ಇಲ್ಲಿನ ಶ್ರೀನೆಲದಾಂಜನೇಯಸ್ವಾಮಿ ದೇವಾಲಯದಲ್ಲಿ ಜೀರ್ಣೋದ್ಧಾರ, ಕಳಶ ಪ್ರತಿಷ್ಠಾಪನೆ ಮತ್ತು ಕುಂಭಾಭಿಷೇಕದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ರಾಜ್ಯದ ಖ್ಯಾತ ಕರ್ನಾಟಕ ಸಂಗೀತ ಕಲಾವಿದರು ಭಾಗವಹಿಸಿ ಗಮನ ಸೆಳೆದಿದ್ದಾರೆ.
ಗಾಯನ ವಿದ್ವಾನ್ ಶಂಕರ್ ಶಾನಭಾಗ್ ಮತ್ತು ವಿದುಷಿಯರಾದ ಕಾಸರವಳ್ಳಿ ಸಹೋದರಿಯರ ಸಂಗೀತ ಕಾರ್ಯಕ್ರಮಗಳು ಇಲ್ಲಿನ ಸಂಗೀತ ಪ್ರಿಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿವೆ.
ಸಂಗೀತ ರಸಾನುಭವ: ಶಂಕರ್ ಶಾನಭಾಗ್ ತಮ್ಮ ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತದ ರಸಾನುಭವವನ್ನು ಕೀರ್ತನ ಸಾಹಿತ್ಯದ ಕೃತಿಗಳೊಂದಿಗೆ ನೀಡಿದರು. ಪುರಂದರದಾಸ, ಕನಸದಾಸರ ಜನಪ್ರಿಯ ರಚನೆಗಳನ್ನು ಹಾಡುವ ಮೂಲಕ ಗಮನ ಸೆಳೆದರು. ಜನಪ್ರಿಯ ಸುಗಮ ಸಂಗೀತದ ಹಲವು ಮಜಲುಗಳನ್ನೂ ಪರಿಚಯಿಸಿದ ಅವರು, ವಿನೂತನ ಪ್ರಯೋಗಗಳನ್ನು ಹಾಡುಗಾರಿಕೆಯಲ್ಲಿ ಅಳವಡಿಸಿಕೊಂಡಿದ್ದು ವಿಶೇಷ. ಹನುಮಸ್ತುತಿಯ ಹಲವು ಕೀರ್ತನೆಗಳನ್ನು ಹಾಡಿ ರಂಜಿಸಿದರು. ಅವರೊಂದಿಗೆ ಸಹಗಾಯನದಲ್ಲಿ ವಿದುಷಿ ಅನುಪಮಾ, ಪಕ್ಕವಾದ್ಯದಲ್ಲಿ ಕೊಳಲು ವಿದ್ವಾನ್ ರಮೇಶ್, ಕೀಬೋರ್ಡ್ನಲ್ಲಿ ವಿದ್ವಾನ್ ವಸಂತಕುಮಾರ್ ಕುಂಬ್ಳೆ, ತಬಲದಲ್ಲಿ ವಿದ್ವಾನ್ ರಾಘವೇಂದ್ರ ಶಾನಭಾಗ್, ರಿದಂಪ್ಯಾಡ್ನಲ್ಲಿ ಅರುಣ್ಕುಮಾರ್ ವಾದ್ಯ ಸಹಕಾರ ನೀಡಿದರು.
ಭಕ್ತಿ ಸಂವೇದನೆಯ ಗಾಯನ: ಕಾಸರವಳ್ಳಿ ಸಹೋದರಿಯರೆಂದೇ ಖ್ಯಾತರಾಗಿರುವ ಖ್ಯಾತ ಕರ್ನಾಟಕ ಸಂಗೀತ ವಿದುಷಿಯರಾದ ವಿದುಷಿ ರೂಪ ಕಿರಣ್ ಮತ್ತು ದೀಪ ಕೃಷ್ಣಮೂರ್ತಿ ಅವರ ಹಾಡುಗಾರಿಕೆ ಭಕ್ತ ಜನರ ಗಮನ ಸೆಳೆಯಿತು. ಭಕ್ತಿರಸ ಪ್ರಧಾನವಾದ ಸಂಗೀತ ಸುಧೆ ಹರಿಸುವ ಮೂಲಕ ಸಂಗೀತದ ರಸಾನುಭವ ಕಟ್ಟಿಕೊಟ್ಟರು. ಕರ್ನಾಟಕ ಸಂಗೀತದ ದಿಗ್ಗಜ ರಚನಕಾರರ ಕೃತಿಗಳನ್ನು ಪ್ರಸ್ತುತಪಡಿಸಿದ ಅವರು,
ಭಕ್ತಿಸಾಹಿತ್ಯವನ್ನು ಯಶಸ್ವಿಯಾಗಿ ಕೇಳಿಗರಿಗೆ ನೀಡಿದ್ದು ವಿಶೇಷವಾಗಿತ್ತು. ಕಾಸರವಳ್ಳಿ ಸಹೋದರಿಯರ ಹಾಡುಗಾರಿಕೆಗೆ ವಿದ್ವಾನ್ ಟಿ.ಎಸ್.ಕೃಷ್ಣಮೂರ್ತಿ (ವಯೋಲಿನ್), ವಿದ್ವಾನ್ ಬೆಂಗಳೂರು ಆರ್.ರಾಮನಾಥ್(ತಬಲ) ಮತ್ತು ವಿದ್ವಾನ್ ಬಿ.ಎಸ್.ರಘುನಂದನ್ (ಘಟಂ) ವಾದ್ಯ ಸಹಕಾರ ನೀಡಿದರು. ನೂರಾರು ಸಂಗೀತಾಸಕ್ತರು ಭಾಗವಹಿಸಿದ್ದರು. ಶ್ರೀನೆಲದಾಂಜನೇಯಸ್ವಾಮಿ ಸೇವಾ ಸಮಿತಿಯ ಪದಾಧಿಕಾರಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

