ಸೂಲಿಬೆಲೆಯಲ್ಲಿ ಮೊಹರಂ ಕೊನೆ ದಿನ ಬಾಬಯ್ಯನ ಜಾತ್ರೆ
ಸೂಲಿಬೆಲೆ: ಪಟ್ಟಣದಲ್ಲಿ ಪ್ರತಿವರ್ಷ ನಡೆಯುವ ಮೊಹರಂ ಕೊನೆ ದಿನ ಅಂಗವಾಗಿ ಬಾಬಯ್ಯನ ಜಾತ್ರೆ ಹಾಗೂ ಹಸ್ತಪ್ರದರ್ಶನ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆದವು.
ಮೊಹರಂ ದಿನದ ಹಿಂದಿನ ದಿನ ಇಲ್ಲಿ ಪ್ರತಿವರ್ಷದಂತೆ ಈ ವರ್ಷವು ಬಾಬಯ್ಯನ ಹಸ್ತ ಪ್ರದರ್ಶನ ಸೂಲಿಬೆಲೆ ಹೊರ ಭಾಗದ ಗಿಡ್ಡಪ್ಪನಹಳ್ಳಿ ರಸ್ತೆಯಲ್ಲಿನ ಬಾಳೇರಾಜನ ಬಾವಿ ಬಳಿ ನಡೆಯಿತು.
ಕಳೆದ ಮೂರು ವರ್ಷಗಳಿಂದ ಬಾಬಯ್ಯನ ಹಸ್ತ ಪ್ರದರ್ಶನ ನಡೆದಿರಲಿಲ್ಲ. ಈ ಭಾರಿಯು ಇದೇ ರೀತಿಯಾಗುತ್ತೇ ಎಂಬ ನಿರೀಕ್ಷೆ ಹುಸಿಯಾಗಿ ಹಸ್ತ ಪ್ರದರ್ಶನ ಯಶಸ್ವಿಯಾಗಿ ನಡೆಯಿತು. ನೂರಾರು ಮಂದಿ ಇದನ್ನು ವೀಕ್ಷಣೆ ಮಾಡಿದರು. ಮರುದಿನ ಶುಕ್ರವಾರ ಬಾಬಯ್ಯನ ಜಾತ್ರೆ ನಡೆಯಿತು. ಜಾತ್ರೆಯಲ್ಲಿ ತರಹವೇರಿ ವಸ್ತುಗಳ ಪ್ರದರ್ಶನವಲ್ಲದೇ ತಬೂತ್ ಮೆರವಣಿಗೆ ನಡೆಯಿತು. ಇದರ ಮೇಲೆ ಭಕ್ತರು ಬಾಳೇ ಹಣ್ಣು ಎಸೆದು ಹರಿಕೆ ತೀರಿಸಿಕೊಂಡರು. ಇದಕ್ಕೂ ಮೊದಲು ಬಾಬಯ್ಯ ಹೂವಿನ ಪಲ್ಲಕಿ, ಅಗ್ನಿಕುಂಡದಲ್ಲಿ ನಡೆಯುವುದು, ದೇವರಿಗೆ ಕೊಬ್ಬರಿ ಚಿಪ್ಪಿನ ನೈವೇದ್ಯ ಅರ್ಪಿಸುವಂತ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಜಾತ್ರೆಗೆ ಸುತ್ತಲ್ಲಿನ ಹತ್ತಾರು ಹಳ್ಳಿಯ ಜನರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

