ಬರಪೀಡಿತ ಪ್ರದೇಶದ ಪಟ್ಟಿಯಿಂದ ಚನ್ನಪಟ್ಟಣ ಕೈಬಿಟ್ಟಿದ್ದಕ್ಕೆ ಆಕ್ರೋಶ
ಚನ್ನಪಟ್ಟಣ: ಬರಪೀಡಿತ ಪ್ರದೇಶದ ಪಟ್ಟಿಯಿಂದ ತಾಲೂಕನ್ನು ಕೈಬಿಟ್ಟಿರುವ ಸರ್ಕಾರದ ಕ್ರಮವನ್ನು ತಾ.ಪಂ ಸಾಮಾನ್ಯ ಸಭೆಯಲ್ಲಿ ಒಕ್ಕೊರಲಿನಿಂದ ಖಂಡಿಸಲಾಯಿತು.
ಬುಧವಾರ ಆರಂಭ ಗೊಂಡ ತಾ.ಪಂ ಸಾಮಾನ್ಯ ಸಭೆಯಲ್ಲಿ ಬರಪೀಡಿತ ಪ್ರದೇಶದ ಪಟ್ಟಿಯಿಂದ ತಾಲೂಕನ್ನು ಕೈ ಬಿಟ್ಟಿರುವ ವಿಷಯವನ್ನು ಪ್ರಸ್ತಾಪಿಸಿದ ಸದಸ್ಯರು ಸರಕಾರ ರೈತರ ಜತೆ ಚೆಲ್ಲಾಟ ವಾಡುತ್ತಿದೆ. ಕೂಡಲೇ ತಾಲೂಕನ್ನು ಬರಪೀಡಿತ ಪ್ರದೇಶದ ಪಟ್ಟಿಗೆ ಸೇರಿಸ ಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಹಾಜರಿದ್ದ ಕೃಷಿ ಇಲಾಖೆ ಸಹಾಯಕ ನಿರ್ದೇಶಕರನ್ನು ತರಾಟೆಗೆ ತೆಗೆದು ಕೊಂಡ ಸದಸ್ಯ ಕಾಂತರಾಜು ನೀವು ಸಮರ್ಪಕವಾಗಿ ಮಾಹಿತಿ ನೀಡಿದ್ದರೆ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸುತ್ತಿತ್ತು ನೀವು ಮಳೆ ವರದಿಯನ್ನು ಸೂಕ್ತವಾಗಿ ನೀಡಿಲ್ಲ ಎಂದರು.
ತಾಲೂಕಿನಾದ್ಯಂತ ಸಮರ್ಪಕವಾಗಿ ಮಳೆ ಸುರಿದಿಲ್ಲ, ಕೆಲವೇ ಕೆಲವು ಭಾಗದಲ್ಲಿ ಸುರಿದ ಮಳೆಯನ್ನೇ ಸಮರ್ಪಕ ಮಳೆ ಎಂದು ವರದಿ ನೀಡಿದ್ದು ನಿಮ್ಮ ಮಳೆ ಮಾಪನ ಕೇಂದ್ರಗಳೇ ದೋಷಪೂರಿತ ಈ ಮಾಪನ ಕೇಂದ್ರಗಳನ್ನು ಮುಂದಿಟ್ಟು ಕೊಂಡು ತಾಲೂಕಿನ ರೈತರಿಗೆ ಅನ್ಯಾಯ ವೆಸಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕಿ ವಾಣಿ ನಾವು ಸರ್ಕಾರಕ್ಕೆ ವರದಿ ನೀಡಿಲ್ಲ, ಸರ್ಕಾರ ಸಾಂಕಿಕ ಇಲಾಖೆಯ ವರದಿಯನ್ವಯ ಮಳೆಪ್ರಮಾಣವನ್ನು ಅಂದಾಜು ಮಾಡಿದೆ. ತಾಲೂಕಿನಲ್ಲಿ ವಾಡಿಕೆ ಮಳೆಯಷ್ಟು ಮಳೆ ಸುರಿದಿದೆ ಯಾದರೂ ಎಲ್ಲಾಭಾಗಕ್ಕೂ ಹಂಚಿಕೆಯಾಗದ ಕಾರಣ ಬರದ ಛಾಯೆ ಇದ್ದು ಈ ಬಗ್ಗೆ ಜಿಲ್ಲಾಡಳಿತಕ್ಕೆ ವರದಿ ನೀಡುವುದಾಗಿ ತಿಳಿಸಿದರು.
ಆಕ್ಸ್ಫರ್ಡ್ ಶಾಲೆ ಕ್ರಮಕ್ಕೆ ಗರಂ: ಯಾವುದೇ ಮುನ್ಸೂಚನೆ ನೀಡಿದೆ ಏಕಾಏಕಿ ಶಾಲೆಯ ಕಟ್ಟಡವನ್ನು ಸ್ಥಳಾಂತರ ಮಾಡಿರುವ ಆಕ್ಸ್ಫರ್ಡ್ ಶಾಲೆಯ ಆಡಳಿತ ಮಂಡಲಿ ಕ್ರಮದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಸದಸ್ಯರಾದ ಕಾಂತರಾಜು, ಚಿನ್ನಗಿರೀಗೌಡ, ರಮೇಶ್, ಹನುಮಂತು ಕೂಡಲೇ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದರು.
ಈಬಗ್ಗೆ ಶಾಲಾ ಆಡಳಿತ ಮಂಡಲಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡಿದ್ದು, ವಂದಾರ ಗುಪ್ಪೆಯ ಬಳಿ ಇರುವ ಕಟ್ಟಡಕ್ಕೆ ಸುಣ್ಣ ಹೊಡೆಸುತ್ತಿರುವುದರಿಂದ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮೌಖಿಕವಾಗಿ ತಿಳಿಸಿದ್ದಾರೆ. ಈಸಂಬಂಧ ನಮ್ಮ ಇಲಾಖೆಗೆ ಲಿಖಿತ ಹೇಳಿಯನ್ನೂ ನೀಡಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು.
ಗೈರು ಹಾಜರಿಗೆ ಸಿಡಿಮಿಡಿ: ಸಭೆಗೆ ಕೆಲ ಅಧಿಕಾರಿಗಳು ವಿನಾಕಾರಣ ಹಾಜರಾಗುತ್ತಿಲ್ಲ ಎಂದು ಕಿಡಿಕಾರಿದ ಸದಸ್ಯರು ಗೈರು ಹಾಜರಾಗುತ್ತಿರುವ ಅಧಿಕಾರಿಗಳಿಗೆ ಶೋಕಾಸ್ ನೊಟೀಸ್ ಜಾರಿ ಮಾಡುವಂತೆ ಸೂಚಿಸಿದರು.
ಅಂಗನವಾಡಿಗೆ ಕಳಪೆ ಆಹಾರ ಪೂರೈಕೆ: ತಾಲೂಕಿನ ಅಂಗನವಾಡಿಗಳಿಗೆ ಪೂರೈಕೆ ಮಾಡುತ್ತಿರುವ ಆಹಾರ ಪದಾರ್ಥಗಳು ಕಳಪೆ ಗುಣಮಟ್ಟದ್ದಾಗಿದ್ದು ಈಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸದಸ್ಯೆ ರಮ್ಯರವಿ ಕೂಡಲೇ ಅಂಗನವಾಡಿಗಳಿಗೆ ಗುಣಮಟ್ಟದ ಆಹಾರ ಪೂರೈಕೆ ಮಾಡುವಂತೆ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಿಡಿಪಿಒ ಪುಟ್ಟಸ್ವಾಮಿ ತಿಳಿಸಿದರು.
ಸಭೆಯಲ್ಲಿ ತಾ.ಪಂ ಅಧ್ಯಕ್ಷೆ ಪವಿತ್ರಾ ಅಧ್ಯಕ್ಷತೆ ವಹಿಸಿದ್ದರು, ಉಪಾಧ್ಯಕ್ಷ ವೆಂಕಟೇಶ್, ಕಾರ್ಯನಿರ್ವಹಣಾಧಿಕಾರಿ ಜಯರಂಗ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

