ಬೆಂಗಳೂರು ಗ್ರಾಮಾಂತರ

ವಾರ್ಡ್‌ಗಳ ರಸ್ತೆ ಅಭಿವೃದ್ಧಿಗೆ ಪುರಸಭೆ ಕ್ರಮ: ಮಂಜುನಾಥ್

Published On :

ಕ.ಪ್ರ.ವಾರ್ತೆ   ಮಾಗಡಿ   ನ.27
13ನೇ ಹಣಕಾಸಿನ ಯೋಜನೆಯಡಿ ವಾರ್ಡ್‌ಗಳ ರಸ್ತೆ ಅಭಿವೃದ್ಧಿಗೆ ಪುರಸಭೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಪುರಸಭಾ ಸದಸ್ಯ ಎಂ.ಎನ್.ಮಂಜುನಾಥ್ ತಿಳಿಸಿದರು.
   ಅವರು ಇಲ್ಲಿನ ಪುರಸಭೆ  ವ್ಯಾಪ್ತಿಯ 15ನೇ ವಾರ್ಡ್‌ನಲ್ಲಿ 5 ಲಕ್ಷ ರು ವೆಚ್ಚದಲ್ಲಿ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಮಾತನಾಡಿ, ಒಳಚರಂಡಿ ಕಾಮಗಾರಿಯಿಂದಾಗಿ ಪುರಸಭೆಯ ವಾರ್ಡ್‌ಗಳ ರಸ್ತೆಗಳು ಅವ್ಯವಸ್ಥೆಯಿಂದ ಕೂಡಿತ್ತು. ಈಗ ಬಹುತೇಕ ಒಳಚರಂಡಿ ಕಾಮಗಾರಿ ಮುಗಿದಿದೆ.ಬಹುತೇಕ ವಾರ್ಡ್‌ವಾರು ರಸ್ತೆ ಡಾಂಬರೀಕರಣಕ್ಕಾಗಿ 5 ಲಕ್ಷ ರು ಹಂಚಿಕೆ ಮಾಡಲಾಗಿದೆ. ಈ ನಿಟ್ಟಿನಲ್ಲಿ  ಪುರೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು. ಪುರಸಭಾ ಸದಸ್ಯ ಕೆ.ವಿ. ಬಾಲು ಮಾತನಾಡಿದರು.
ಸದಸ್ಯರಾದ ಮಹೇಶ್, ಇಲಿಯಾಜ್, ಮಾಜಿ ಸದಸ್ಯ ರವಿಶಂಕರ್, ಡಾ. ನಾಗರಾಜು ಉಪಾಧ್ಯಾಯ, ರಂಗಣ್ಣ, ರಾಮು, ಜಯಣ್ಣ, ನವೀನ್ ಕುಮಾರ್, ಕಾರ್ತೀಕ್, ಗುತ್ತಿಗೆದಾರರಾದ ಎಂ.ಎಚ್. ಶ್ರೀನಿಸಾಸ್, ಬಿ.ಎನ್. ಮೋಹನ್ ಕುಮಾರ್, ಎಚ್.ಎಸ್. ಮೂರ್ತಿ, ಟಿ.ಎಸ್. ರವಿಕುಮಾರ್, ಅನಿಲ್ ಕುಮಾರ್, ಎಂಜಿನಿಯರ್ ಸುಮತಿ, ವೆಂಕಟೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.