ಬೆಂಗಳೂರು ಗ್ರಾಮಾಂತರ

ವಿಶ್ವದಲ್ಲೇ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಪ್ರಮುಖ ಸ್ಥಾನ

Published On :

ಕ.ಪ್ರ.ವಾರ್ತೆ   ಆನೇಕಲ್ಲು   ನ.29
ವಿಶ್ವದಲ್ಲೇ ಮುಂದುವರಿಯುತ್ತಿರುವ ರಾಷ್ಟ್ರಗಳ ಸಾಲಿನಲ್ಲಿ ಭಾರತ ಪ್ರಮುಖ ಸ್ಥಾನದಲ್ಲಿದೆ ಎಂದು ಸಾಬಿಕ್  ಸೌದಿ ಬೇಸಿಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಚೇರ್ಮನ್ ಪ್ರಿನ್ಸ್ಸೌದ್ ಅಬ್ದುಲ್ಲ ತಿಳಿಸಿದ್ದಾರೆ.
ಅವರು ತಾಲೂಕಿನ ಸರ್ಜಾಪುರ ಬೂರಗುಂಟೆಯಲ್ಲಿ 200 ಎಕರೆ ಪ್ರದೇಶದಲ್ಲಿ  ನೂರು ದಶಲಕ್ಷ ಡಾಲರ್ ಬಂಡವಾಳ ಹೂಡಿ ಸ್ಥಾಪಿಸಿರುವ  ಸಾಬಿಕ್  ಸೌದಿ ಬೇಸಿಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ಭಾರತದಲ್ಲಿ ಪೆಟ್ರೋ ಹಾಗೂ ರಾಸಾಯನಿಕ ಉತ್ಪನ್ನಗಳಿಗೆ ಗ್ರಾಹಕರಿದ್ದು ಬಂಡವಾಳ ಹೂಡಿಕೆ ಹಾಗೂ ಉದ್ಯೋಗಾವಕಾಶಗಳಿಗೆ ಉತ್ತಮ ಅವಕಾಶವಿದೆ. ಸಾಬಿಕ್ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆ ಮಾರುಕಟ್ಟೆ ಹಾಗೂ ರಫ್ತು ಉದ್ದೇಶ ಹೊಂದಿದೆ. ವಿಶ್ವದ ಬಲಾಢ್ಯ ದೇಶಗಳು ಹಲವಾರು ರಾಷ್ಟ್ರಗಳ ಅಭಿವೃದ್ಧಿಯನ್ನು ತಮ್ಮ ಕಪಿ ಮುಷ್ಟಿಯಲ್ಲಿಟ್ಟುಕೊಂಡು ಉನ್ನತಿಗೆ ಅವಕಾಶ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಉತ್ತಮ ಜನ ಸಂಪನ್ಮೂಲ ಹೊಂದಿರುವ ಭಾರತ ನಮ್ಮ ಆದ್ಯತೆಯ ದೇಶವಾಗಿದೆ. ಸ್ಥಳೀಯ ವಿಜ್ಞಾನಿಗಳು ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯ ಮೂಲದ ಪ್ರತಿಭಾನ್ವಿತ ವ್ಯಕ್ತಿಗಳು ನಮ್ಮ ಸಂಸ್ಥೆಯ ಜೊತೆ ಕೈ ಜೋಡಿಸಿದಲ್ಲಿ ಏಷ್ಯಾ ಖಂಡವನ್ನು ವಿಶ್ವದಲ್ಲೇ ಬಲಿಷ್ಠ ಹಾಗೂ ಶ್ರೇಷ್ಠ ವ್ಯಾಪಾರಿ ಕೇಂದ್ರವನ್ನಾಗಿಸಲು ಸಾಧ್ಯ ಎಂದರು.
ಸಾಬಿಕ್ ಉಪಾಧ್ಯಕ್ಷ ಮಹಮ್ಮದ್ ಅಲ್ಮಾಡಿ ಮಾತನಾಡಿದರು. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮಾತನಾಡಿ ದೇಶಾದ್ಯಂತ 150ಕ್ಕೂ ಹೆಚ್ಚು ಪಿಹೆಚ್ಡಿ ಪದವೀಧರರು ಈ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ತೋರಿರುವುದು ವಿಶ್ವದ ಶ್ರೇಷ್ಠ ಪ್ರತಿಭೆಗಳು ಒಂದು ವೇದಿಕೆಯಲ್ಲಿ ಸೇರಿ ಭವಿಷ್ಯ ಭಾರತ ರೂಪಿಸುವ ಕಾಯಕದಲ್ಲಿ ನಿರತರಾಗಲಿದ್ದಾರೆ ಎಂಬ ಆಶಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.