ಸಹಾಯಕ ವೆಚ್ಚ ವೀಕ್ಷಕರ ಅಮಾನತು
ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದ ಸಹಾಯಕ ವೆಚ್ಚ ವೀಕ್ಷಕರನ್ನು ಕರ್ತವ್ಯಲೋಪ ಆರೋಪದ ಮೇಲೆ ಅಮಾನತುಗೊಳಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚುನಾವಣಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಆದೇಶ ಹೊರಡಿಸಿದ್ದಾರೆ.
ಲೋಕೋಪಯೋಗಿ ಇಲಾ ಖೆಯ ಲೆಕ್ಕಾಧಿಕಾರಿ ಹನುಮಂತರಾಯಪ್ಪ ಅಮಾನತುಗೊಂಡ ಅಧಿಕಾರಿ. ಪ್ರಜಾಪ್ರತಿನಿಧಿ ಕಾಯ್ದೆ 1951 134ರ ಪ್ರಕಾರ ಚುನಾವಣಾ ಕೆಲಸ ಕಾರ್ಯಗಳ ಬಗ್ಗೆ ಬೇಜವಾಬ್ದಾರಿಯಿಂದ ವರ್ತಿಸಿರುವುದರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಮಾ.30ರಂದು ಚುನಾವಣಾ ವೆಚ್ಚ ವೀಕ್ಷಕರು ಹನುಮಂತರಾಯಪ್ಪ ಅವರ ಕಚೇರಿಗೆ ಭೇಟಿ ನೀಡಿದ್ದ ವೇಳೆ
ಚುನಾವಣಾ ವೆಚ್ಚದ ಬಗ್ಗೆ ಕೇಳಿದ ಮಾಹಿತಿಯನ್ನು ನೀಡುವಲ್ಲಿ ಅವರು ವಿಫಲಾಗಿದ್ದಾರೆ. ಜತೆಗೆ ಸಮಂಜಸ ವಿವರಣೆ ನೀಡಿರುವುದಿಲ್ಲ. ಫ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ಸ್ರ್ವೆಲನ್ಸ್ ಮತ್ತು ವಿಡಿಯೋ ತಂಡಗಳಿಂದ ಸಕಾಲದಲ್ಲಿ ಮಾಹಿತಿ ಪಡೆದು ವೆಚ್ಚ ವೀಕ್ಷಕರಿಗೆ ತಲುಪಿಸಿಲ್ಲ.
ಈ ಸಂಬಂಧ ವೆಚ್ಚ ವೀಕ್ಷಕರು ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು, ಕ್ಷೇತ್ರ ವ್ಯಾಪ್ತಿಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಮಾಹಿತ ಬಂದಿದ್ದರೂ ರಾಮನಗರ ಕ್ಷೇತ್ರದಿಂದ ಯಾವುದೇ ವಿವರವನ್ನು ಸಲ್ಲಿಸಿರುವುದಿಲ್ಲ ಹಾಗೂ ಉನ್ನತ ಅಧಿಕಾರಿಗಳ ಗಮನಕ್ಕೂ ತರದೆ ಚುನಾವಣಾ ಕೆಲಸದಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದ್ದ ಹಿನ್ನೆಲೆಯಲ್ಲಿ ಹನುಮಂತರಾಯಪ್ಪ ಅವರನ್ನು ಅಮಾನತುಗೊಳಿಸಲಾಗಿದೆ.
ಡಾ.ಶಿವಕುಮಾರ ಸ್ವಾಮೀಜಿಗಳ
107ನೇ ಹುಟ್ಟುಹಬ್ಬ ಆಚರಣೆ
ದೇವನಹಳ್ಳಿ: ತಾಲೂಕು ವೀರಶೈವ ಸಮಾಜದವರು ಮಂಗಳವಾರ ಸಿದ್ಧಗಂಗಾ ಮಠಾಧೀಶ ಶಿವಕುಮಾರ ಸ್ವಾಮೀಜಿಗಳ 107 ನೆಯ ಹುಟ್ಟುಹಬ್ಬ ಸಮಾರಂಭ ಹಾಗೂ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಗಳ ವಿತರಣೆ ಮಾಡಿದರು.
ಈ ಸಂಧರ್ಭದಲ್ಲಿ ವೀರಶೈವ ಸಮಾಜದ ಮುಖಂಡ ಎ.ಸಿ.ಗುರುಸ್ವಾಮಿ ಮಾತನಾಡಿ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿಗಳು ಕೇವಲ ಧಾರ್ಮಿಕ ಪ್ರವರ್ತಕರಲ್ಲದೆ ಪ್ರತಿದಿನ ಎಂಟು ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಊಟ, ವಸತಿ ಜೊತೆಯಲ್ಲಿ ವಿದ್ಯೆ ನೀಡುತ್ತಿರುವ ದೂರದೃಷ್ಟಿಯುಳ್ಳ ಮಹಾಜ್ಞಾನಿಗಳು ಎಂದರು. ಸ್ವಾಮೀಜಿಗಳ ಆರೋಗ್ಯದ ದೃಷ್ಟಿಯಿಂದ ಇನ್ನು ಮುಂದೆ ಅವರನ್ನು ಸಿದ್ಧಗಂಗಾ ಮಠದಲ್ಲಿಯೇ ಭೇಟಿ ಮಾಡಿ, ಅಲ್ಲದೆ ಯಾವುದೇ ಸಭೆ ಸಮಾರಂಭಕ್ಕೆ ಕರೆಯುವುದು ಸೂಕ್ತವಲ್ಲ ಎಂದು ತಿಳಿಸಿ ಅವರ ಆಶೀರ್ವಾದ ಸದಾ ಭಕ್ತರ ಮೇಲಿರುತ್ತದೆ ಎಂದರು.
ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ಎಸ್. ರಮೇಶ್ ವಹಿಸಿದ್ದರು. ಶರಣೆ ಉಷಾ ಪೂರ್ಣಚಂದ್ರ ಪ್ರಾಸ್ತಾವಿಕ ಮಾತನಾಡಿದರು. ವಕೀಲರಾದ ರುದ್ರಸ್ವಾಮಿ, ವಿಜಯಪುರ ಪುರಸಭಾ ಸದಸ್ಯ ಭಾಸ್ಕರ್, ಎಸ್. ರಮೇಶ್ ಹಾಗೂ ಶಿಕ್ಷಕ ಸಿದ್ದಲಿಂಗಸ್ವಾಮಿ ಮಾತನಾಡಿ ಇಂದಿನ ದಿನಗಳಲ್ಲಿ ನಡೆದಾಡುವ ದೇವರೆಂದರೆ ಕಾಯಕಯೋಗಿ ಶಿವಕುಮಾರ ಸ್ವಾಮೀಜಿಗಳು. ಅಲ್ಲದೆ ನಮ್ಮ ಶರಣ ಸಂಸ್ಕೃತಿ ಮುಂದಿನ ಪೀಳಿಗೆಗೆ ಉಳಿಸಬೇಕಿದೆ ಎಂದರು. ಮುಂದಿನ ದಿನಗಳಲ್ಲಿ ಎಲ್ಲ ಶರಣರು ಒಟ್ಟಿಗೆ ಸೇರಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸೋಣ ಎಂದರು. ಕೆ.ಸದಾಶಿವಯ್ಯ, ಶಿವಪ್ರಸಾದ್, ಎಸ್.ವಿಜಯಕುಮಾರ್, ಎಂ.ಕುಮಾರ್, ಎಸ್. ನಾಗೇಶ್, ಪ್ರಭಾಕರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

