ರು. 55 ಲಕ್ಷ ಹಣ, 50ಕ್ಕೂ ಅಧಿಕ ವಾಹನ, 60 ಕ್ಕೂ ಹೆಚ್ಚು ಮೊಬೈಲ್ ವಶ
ಚನ್ನಪಟ್ಟಣ: ಯುಗಾದಿ ಮುಗಿದರೂ ಜೂಜು ಮುಂದುವರೆದ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದಲ್ಲಿರುವ ಪ್ರತಿಷ್ಠಿತ ಪ್ರಗತಿ ಸ್ಪೋರ್ಟ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮೇಲೆ ದಾಳಿ ನಡೆಸಿರುವ ಪೊಲೀಸರು ಜೆಡಿಎಸ್ನ ಐವರು ಮುಖಂಡರು ಸೇರಿದಂತೆ 80 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿ ಲಕ್ಷಾಂತರ ರು. ಹಣ ವಶಪಡಿಸಿ ಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.
ಎಎಸ್ಪಿ ಕುಲದೀಪ್ ಕುಮಾರ್ ಆರ್. ಜೈನ್ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು 55 ಲಕ್ಷ ರು. ಹಣ, 50ಕ್ಕೂ ಹೆಚ್ಚು ವಾಹನಗಳು, 60 ಕ್ಕೂ ಹೆಚ್ಚು ಮೊಬೈಲ್ಗಳನ್ನು ವಶಪಡಿಸಿ ಕೊಂಡಿದ್ದಾರೆ. ಕ್ಲಬ್ನ ಅಂಗಳದಲ್ಲಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ಇನ್ನೂ ಹೆಚ್ಚು ಪ್ರಮಾಣದ ಹಣ ಮತ್ತಿತರ ವಸ್ತುಗಳು ಸಿಗುವ ಸಾಧ್ಯತೆಗಳು ಇವೆ. ಬಂಧಿತ ಜೂಜು ಕೋರರನ್ನು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಪೊಲೀಸ್ ದಾಳಿ ನಡೆದಿರುವ ಸುದ್ದಿ ತಿಳಿದ ಮಂದಿ ಕ್ಲಬ್ನಿಂದ ಪರಾರಿ ಆಗಲು ಪ್ರಯತ್ನಿಸಿದರಾದರೂ ಕೆಲವು ಮಂದಿ ಮಾತ್ರ ಸಫಲರಾದರು. ಹೀಗೆ ಪರಾರಿಯಾದವರು ಪಟ್ಟಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ನ ಪ್ರಭಾವಿ ಮುಖಂಡರು ಪಾಲ್ಗೊಂಡಿದ್ದು ಹತ್ತು ಹಲವು ಗುಮಾನಿಗಳಿಗೆ ಎಡೆ ಮಾಡಿಕೊಟ್ಟಿದೆ. ದಾಳಿ ಸಮಯದಲ್ಲಿ ಕೆಲ ಮಂದಿ ಹಣ ವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದರಿಂದ ಕ್ಲಬ್ನ ಸುತ್ತಲೂ ಪೊಲೀಸರು ಟಾರ್ಚ್ ಹಿಡಿದು ಶೋಧ ನಡೆಸಿದರು.
ಎಂದಿನಂತೆ ಹಬ್ಬ ಮುಗಿದರೂ ಜೂಜಾಟದಲ್ಲಿ ಕ್ಲಬ್ನ ಸದಸ್ಯರು ಮಾತ್ರ ಅಲ್ಲದೆ ಹೊರಗಿನವರೂ ಭಾರೀ ಪ್ರಮಾಣದ ಜೂಜಾಟದಲ್ಲಿ ನಿರತರಾಗಿದ್ದರು. ಖಚಿತ ಮಾಹಿತಿಯನ್ನಾಧರಿಸಿ ಕ್ಲಬ್ನ ಮೇಲೆ ದಾಳಿ ಮಾಡಿದ ಪೊಲೀಸ್ ಅಧಿಕಾರಿಗಳ ತಂಡ ಗೇಟ್ ಬಾಗಿಲನ್ನು ಬಂದ್ ಮಾಡಿ ಜೂಜಾಡುತ್ತಿದ್ದವರು ಹೊರ ಹೋಗದಂತೆ ನೋಡಿ ಕೊಂಡರಲ್ಲದೆ, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಯಾರೂ ಒಳ ಹೋಗದಂತೆ ನಿರ್ಬಂಧ ವಿಧಿಸಿದ್ದರು. ಪ್ರತಿವರ್ಷದಂತೆ ಯುಗಾದಿ ಹಬ್ಬದ ಪ್ರಯುಕ್ತ ತಾಲೂಕಿನಲ್ಲಿ ಎರಡು ದಿನಗಳ ಕಾಲ ಜೂಜಾಟಕ್ಕೆ ಅನಧಿಕೃತವಾಗಿ ಪರವಾನಗಿ ನೀಡಲಾಗಿತ್ತು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

