ಬೆಂಗಳೂರು ಗ್ರಾಮಾಂತರ

ವಿವಾದಿತ ಪ್ರದೇಶದಲ್ಲಿದ್ದ ಫಲಕ ರಾತ್ರೋರಾತ್ರಿ ತೆರವು

Published On :

ಚನ್ನಪಟ್ಟಣ: ಪಟ್ಟಣದ ಖಾಸಗಿ ಬಸ್ನಿಲ್ದಾಣದ ವಿವಾದಿತ ಪ್ರದೇಶದಲ್ಲಿ  ನಗರಸಭೆ ವತಿಯಿಂದ ಹಾಕಲಾಗಿದ್ದ ಫಲಕವನ್ನು ರಾತ್ರೋ ರಾತ್ರಿ ತೆರವು ಗೊಳಿಸಿರುವ ಘಟನೆ ಶುಕ್ರವಾರ ನಡೆದಿದೆ.
ಖಾಸಗಿ ಬಸ್ನಿಲ್ದಾಣದಕ್ಕೆ ಸೇರಿದ 5.5 ಗುಂಟೆ ಭೂಮಿಗೆ ಸಂಬಂಧಿಸಿದಂತೆ ನಗರಸಭೆ ಮತ್ತು ನಿಡಘಟ್ಟದ ಪ್ರಕಾಶ್ ನಡುವೆ ವಿವಾದ ಇದ್ದು ಈ ಸಂಬಂಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಸ್ಥಳ ನಮಗೆ ಸೇರಿದ್ದು ಎಂದು ಪ್ರಕಾಶ್ ಬೆಂಬಲಿಗರು ಇಲ್ಲಿರುವ ಅಂಗಡಿ ಮಳಿಗೆ ಮತ್ತು ತಳ್ಳುಗಾಡಿಗಳಿಂದ ದಿನ ಬಾಡಿಗೆ ವಸೂಲಿ ಮಾಡುತ್ತಿದ್ದಾ ರೆ ಎಂದು ಕೆಲ ನಗರಸಭಾ ಸದಸ್ಯರು ಆರೋಪಿಸಿದ್ದರು.  ಈ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಈ ಜಾಗದ ವಿವಾದ ನ್ಯಾಯಾಲಯದಲ್ಲಿದ್ದು, ಇಲ್ಲಿ ಯಾರೂ ಬಾಡಿಗೆ ವಸೂಲಿ ಮಾಡುವಂತಿಲ್ಲ. ಯಾರಿಗೂ ಬಾಡಿಗೆ ಕೊಡುವಂತಿಲ್ಲ ಎಂದು ಹಾಕಲಾಗಿದ್ದ ಫಲಕವನ್ನು ಶುಕ್ರವಾರ ರಾತ್ರಿ ವಿದ್ಯುತ್ ಸಂಪರ್ಕ ಇಲ್ಲದ ಸಮಯದಲ್ಲಿ ತೆರವು ಗೊಳಿಸಲಾಗಿದೆ. ಫಲಕ ತೆರವು ಗೊಳಿಸಿರುವ ಬಗ್ಗೆ ಪೌರಾಯುಕ್ತ ಜಗದೀಶ್ ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.