ಮಹಿಳೆಯರಿಂದ ಗ್ರಾಮ ವಿಕಸನ ಸಾಧ್ಯ
ಆನೇಕಲ್ಲು: ಸುಶಿಕ್ಷಿತ ಮಹಿಳೆಯಿಂದ ಗ್ರಾಮ ವಿಕಸನ ಯೋಜನೆಗಳು ಅನುಷ್ಠಾನಗೊಂಡಲ್ಲಿ ಪೂರ್ಣ ಪ್ರಮಾಣದಲ್ಲಿ ಸ್ವಾವಲಂಬಿ ಗ್ರಾಮ ಕಾಣಲು ಸಾಧ್ಯವಾಗುತ್ತದೆ ಎಂದು ಮೇಲ್ಮನೆ ಮಾಜಿ ಸದಸ್ಯ ಡಾ. ನರಹರಿ ತಿಳಿಸಿದ್ದಾರೆ.
ಅವರು ತಾಲೂಕಿನ ಚಂದಾಪುರದಲ್ಲಿ ಲೋಕ ಸೇವಾ ಪ್ರತಿಷ್ಠಾನ ಏರ್ಪಡಿಸಿದ್ದ ಗ್ರಾಮ ವಿಕಸನ ಶಿಬಿರದಲ್ಲಿ ರಾಜ್ಯಾದ್ಯಂತ ಆಗಮಿಸಿದ್ದ ಜಿಲ್ಲಾವಾರು ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿ ಸಂಸ್ಕಾರವಂತ ಮಾತೆಯರು
ಮನೆಗೆಲಸದ ನಂತರ ಇತರ ಮಹಿಳೆಯರನ್ನು ಸಾಕ್ಷರರನ್ನಾಗಿಸಬೇಕು. ಸರ್ಕಾರಿ ಅಥವಾ ಖಾಸಗಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ ವೈಯುಕ್ತಿಕ ಕುಟುಂಬ ಆದಾಯವನ್ನು ವೃದ್ಧಿಗೊಳಿಸಬೇಕು. ಸ್ವಾಭಿಮಾನಿ ಮಹಿಳೆಯು ತನ್ನ ನೆರೆ ಕುಟುಂಬಗಳಿಗೆ ಸಾಮರಸ್ಯತೆಯ ಪಾಠ ಕಲಿಸಿ ಧರ್ಮ ಮತ್ತು ದೇಶ ಉಳಿಯುವಂತೆ ಪ್ರೇರಣೆ ನೀಡಬೇಕೆಂದರು. ಸಂಯೋಜಕ ನಾಯಕ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಆಮಿಷಗಳನ್ನು ತೋರಿ ಮತಾಂತರ ಮಾಡುವ ಕೆಟ್ಟ ಸಂಪ್ರದಾಯ ಬೆಳಕಿಗೆ ಬರುತ್ತಿದೆ. ಅಂತಹ ಸಂದರ್ಭದಲ್ಲಿ ಮನವೊಲಿಸಿ ಮರು ಮತಾಂತರ ಮಾಡಬೇಕು. ಯಾವುದೇ ಧರ್ಮೀಯರು ಭಾರತದಲ್ಲಿ ನೆಲೆಸಿ ತಮ್ಮ ಧರ್ಮ, ಸಂಪ್ರದಾಯ ಆಚರಿಸುವುದನ್ನು ಗೌರವಿಸುತ್ತೇವೆ. ಆದರೆ ಹಿಂದೂ ಕುಟುಂಬಗಳಿ ತೆರಳಿ ಕ್ಷುಲ್ಲಕ ಆಮಿಷವೊಡ್ಡಿ ಮತಾಂತರಕ್ಕೆ ಪ್ರಚೋದನೆ ನೀಡಿದಲ್ಲಿ ಸದಾ ಖಂಡಿಸುತ್ತೇವೆ. ಅನ್ಯ ಧರ್ಮೀಯರು ಈ ನೆಲದ ಕಾನೂನನ್ನು ಗೌರವಿಸಬೇಕು ಎಂದರು. ಸಂಯೋಜಕರಾದ ರಾಮಚಂದ್ರರೆಡ್ಡಿ, ನಾಗರಾಜರೆಡ್ಡಿ ವೇದಿಕೆಯಲ್ಲಿದ್ದರು. 5 ದಿನಗಳ ಕಾರ್ಯಾಗಾರದಲ್ಲಿ 200ಕ್ಕೂ ಹೆಚ್ಚು ಮಹಿಳಾ ಶಿಬಿರಾರ್ಥಿಗಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

