ರು. 2 ಕೋಟಿ ವೆಚ್ಚದ ಚೌಡೇಶ್ವರಿ ಅಮ್ಮನ ನೂತನ ದೇವಾಲಯ
ದೇವನಹಳ್ಳಿ: ಇಲ್ಲಿನ ನೇಯ್ಗೆ ಸಮಾಜದವರು ಇತರ ಜನಾಂಗದ ಸಹಕಾರದೊಂದಿಗೆ ತಾಲೂಕು ಕಚೇರಿ ರಸ್ತೆಯಲ್ಲಿ ಸುಮಾರು ಎರಡು ಕೋಟಿ ರು. ವೆಚ್ಚದಲ್ಲಿ ನೂತನವಾಗಿ ಆದಿಶಕ್ತಿ ಚೌಡೇಶ್ವರಿ ಅಮ್ಮನ ದೇವಾಲಯ ನಿರ್ಮಾಣ ಮಾಡಿದ್ದು ಈ ಸಂಬಂಧ ಏ.30 ರಿಂದ ಮೇ.2 ರವರೆಗೆ ವಿಶೇಷ ಧಾರ್ಮಿಕ ಪೂಜಾಕಾರ್ಯ, ಅಮ್ಮನವರ ವಿಗ್ರಹ ಪ್ರತಿಷ್ಠಾಪನೆ, ಹೋಮ ಹವನಾದಿಗಳು ನಡೆಯಲಿವೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಅಶ್ವತ್ಥನಾರಾಯಣ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಚೌಡೇಶ್ವರಿ ತಾಯಿ ನೇಯ್ಗೆ ಜನಾಂಗದವರ ಕುಲದೇವತೆ ಹಾಗೂ ಗ್ರಾಮ ದೇವತೆಯಾಗಿದೆ. ಪ್ರತಿದಿನ ಸಾವಿರಾರು ಭಕ್ತರು ಆಗಮಿಸುವ ಪ್ರವಾಸಿ ತಾಣವಾಗಲಿದೆ ಎಂದರಲ್ಲದೆ ಈ ದೇವಾಲಯದ ಗರ್ಭಗುಡಿಯನು ಮೈಸೂರಿನ ಶಿಲ್ಪಶಾಸ್ತ್ರ ಪ್ರವೀಣ ಶಿವಾನಂದ ವಿಶೇಷವಾಗಿ ನಿರ್ಮಿಸಿದ್ದಾರೆ. ಮೂರುವರೆ ಅಡಿ ಎತ್ತರದ ಕೃಷ್ಣ ಶಿಲೆಯಲ್ಲಿ ಅಮ್ಮನವರಿಗೆ ಚೆಂದದ ರೂಪ ಕೊಟ್ಟಿದ್ದಾರೆ. ಚೌಡೇಶ್ವರಿ ಅಮ್ಮನವರ ಮೂಲ ಆಂಧ್ರದ ಕರ್ನೂಲು ಜಿಲ್ಲೆಯ ನಂದಾವರಂನಲ್ಲಿ ಇದೆ ಎಂದು ಹೇಳಿದರು. ಏ.30 ರಂದು ಕುಲದೇವತಾ ಪ್ರಾರ್ಥನೆ, ಗಂಗಾ ಪೂಜೆ, ಗೋ ಪೂಜೆ, ಗಣಪತಿ ಪೂಜೆ, ಮಹಾ ಗಣಪತಿ ಹೋಮ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಸಂಜೆ ವಿಜಯಪುರ ಕೃಷ್ಣ ಸತ್ಸಂಗ ಸಮಿತಿಯಿಂದ ಜೂನಿಯರ್ ಘಂಟಸಾಲ ಲಕ್ಷ್ಮೀಪತಿ ಇವರಿಂದ ಭಕ್ತಿ ಗೀತೆಗಳ ಗಾಯನ ಆಯೋಜಿಸಲಾಗಿದೆ. ಮೇ.1 ರಂದು ನವಗ್ರಹ ಹೋಮ, ಮೃತ್ಯುಂಜಯ ಹೋಮ ಧಾರ್ಮಿಕ ಪೂಜಾಕಾರ್ಯಗಳು ನಡೆಯಲಿವೆ.
ಮೇ.2 ರಂದು ಜೌಡೇಶ್ವರಿ ದೇವಿಯ ಸ್ಥಿರ ಅಷ್ಟಬಂಧ ಪ್ರತಿಷ್ಠಾಪನಾ ಹಾಗೂ ಗೋಪುರ ಮಹಾ ಕುಂಭಾಭಿಶೇಖ ಮಹೋತ್ಸವ ಪೂರ್ಣಾಹುತಿ ನಡೆಯಲಿದೆ. ಶೃಂಗೇರಿಯ ಬಾಲಗಣಪತಿ, ವಿಶ್ವನಾಥಭಟ್ಟ ಹಾಗೂ ನಾಗೇಶ ಭಟ್ಟ ಈ ಎಲ್ಲ ಧಾರ್ಮಿಕ ಕಾರ್ಯಕಾರ್ಯಗಳನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ಹಂಪಿ ಹೇಮಕೂಟದ ದಯಾನಂದಪುರಿ ಸ್ವಾಮೀಜಿ, ತಪಸೀಹಳ್ಳಿ ದಿವ್ಯ ಜ್ಞಾನಾನಂದ ಸ್ವಾಮೀಜಿ, ಗುಳೇದಗುಡ್ಡ ಸಿದ್ದೇಶ್ವರ ಬೃಹನ್ಮಠದ ಬಸವರಾಜ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ವಿಜಯಪುರ ಬಸವ ಕಲ್ಯಾಣ ಮಠದ ಮಹದೇವ ಸ್ವಾಮೀಜಿ ಇವರನು ಪೂರ್ಣ ಕುಂಭ ಸ್ವಾಗತದೊಂದಿಗೆ ಮೆರವಣಿಗೆಯಲ್ಲಿ ಜಾನಪದ ಕಲಾತಂಡಗಳ ಮೂಲಕ ಕರೆತರಲಾಗುವುದು ಹಾಗೂ ಸಂಜೆ ಬೆಂಗಳೂರಿನ ಖ್ಯಾತ ಗಾಯಕ ಶಶಿಧರ ಕೋಟೆ ಇವರಿಂದ ಭಕ್ತಿ ಸಂಗೀತ ಆಯೋಜಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಪಿ.ಗಂಗಾಧರ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

