ಸಣ್ಣ ಕೀಟಗಳಿಗೆ ಜೀವರಾಶಿಯನ್ನೇ ನಿರ್ನಾಮ ಮಾಡುವ ವಿಶೇಷ ಶಕ್ತಿ
ಕ.ಪ್ರ. ವಾರ್ತೆ ್ಣ ರಾಮನಗರ ್ಣ ಏ. 28
ಸಣ್ಣ ಕೀಟಗಳು ಮನುಷ್ಯ ಸೇರಿದಂತೆ ಪ್ರಪಂಚದಲ್ಲಿ ವಾಸಿಸುವ ಜೀವರಾಶಿಗಳನ್ನು ನಿರ್ನಾಮ ಮಾಡುವ ವಿಶೇಷ ಶಕ್ತಿ ಹೊಂದಿವೆ. ರೋಗ ಬಾಧೆ ಅಥವಾ ಅನ್ಯ ಕಾರಣಗಳಿಂದ ಸಾವನ್ನಪ್ಪಿದವರಿಗಿಂತ ಸಣ್ಣ ಕೀಟಗಳ ಕಡಿತದಿಂದ ಮರಣಿಸಿದವರ ಸಂಖ್ಯೆಯೇ ಹೆಚ್ಚು ಎಂದು ಜಿಪಂ ಸಿಇಒ ಡಾ.ಎಂ.ವಿ.ವೆಂಕಟೇಶ್
ತಿಳಿಸಿದರು.
ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಂದ ನಗರದ ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೀಟ ಎಂದರೆ ಕೇವಲ ಸೊಳ್ಳೆ ಎಂಬುದು ಬಹುತೇಕರ ಅಭಿಪ್ರಾಯ. ನೊಣ, ಮೈಟ್ಸ್ಗಳೂ ಕೀಟಗಳ ಗುಂಪಿಗೇ ಸೇರಿದವಾಗಿವೆ. 1959ರಲ್ಲಿ ಭಾರತ, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ 2 ಕೋಟಿಗೂ ಅಧಿಕ ಜನರು ಪ್ಲೇಗ್ ರೋಗದಿಂದ ಸಾವನ್ನಪ್ಪಿದರು. ಪ್ಲೇಗ್ ರೋಗ ಕೀಟದಿಂದ ಬರುವ ಕಾಯಿಲೆಯಾಗಿದೆ ಎಂದು ತಿಳಿಸಿದರು.
ಜೀವರಾಶಿಯನ್ನೇ ನಾಶಪಡಿಸುವ: 2001ರ ಬಳಿಕ ಪ್ರಪಂಚಾದ್ಯಂತ ಬಯಾಲಾಜಿಕಲ್ ಕಲ್ಟೆರರಿಸಂ ಎಂಬ ಹೊಸ ಸಿದ್ಧಾಂತ ಕಂಡುಬಂದಿದೆ. ಅಣುಬಾಂಬ್ನಿಂದ ಹೇಗೆ ಪ್ರಪಂಚವನ್ನು ನಾಶಪಡಿಸಬಹುದೋ ಹಾಗೆಯೇ ಮಾರಣಾಂತಿಕ ಕಾಯಿಲೆ ಹರಡುವ ಕೀಟಗಳನ್ನು ಸೃಷ್ಟಿಸಿ ಪ್ರಪಂಚದ ಜೀವರಾಶಿಯನ್ನೇ ನಾಶಪಡಿಸುವ ವಿನಾಶಕಾರಿ ಕಾರ್ಯಕ್ಕೆ ಉಗ್ರ ಸಂಘಟನೆಗಳು ಚಿಂತನೆ ನಡೆಸಿದ್ದವು ಎಂದು ಹೇಳಿದರು. ಕೀಟಗಳಿಂದ ಬರುವ ಮಾರಣಾಂತಿಕ ಕಾಯಿಲೆಗಳನ್ನು ನಿಯಂತ್ರಿಸಲು ನೈರ್ಮಲೀಕರಣ ಅತಿ ಮುಖ್ಯ. ದಕ್ಷಿಣ ಹಾಗೂ ಪೂರ್ವ ಏಷ್ಯಾ ದೇಶಗಳಲ್ಲಿ ಕೀಟ ಜನ್ಯ ರೋಗಗಳು ಹೆಚ್ಚು. ಇದಕ್ಕೆ ಪ್ರಮುಖ ಕಾರಣ ಏಷ್ಯಾ ರಾಷ್ಟ್ರಗಳಲ್ಲಿನ ನೈರ್ಮಲೀಕರಣದ ಕೊರತೆ. ನಮ್ಮ ದೇಶದಲ್ಲಿ ಕಳೆದ 10 ವರ್ಷದಿಂದ ನೈರ್ಮಲೀಕರಣಕ್ಕೆ ಆದ್ಯತೆ ನೀಡಿದ್ದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ವಿಷಾದಿಸಿದರು. ಡೆಂಗ್ಯೂ, ಮಲೇರಿಯಾ, ಪ್ಲೇಗ್, ಮತ್ತಿತರ ಕೀಟಜನ್ಯ ಕಾಯಿಲೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯವಶ್ಯ. ನಮ್ಮ ಸುತ್ತಮುತ್ತಲಿನ ಪರಿಸರದ ಜತೆಗೆ ಗ್ರಾಮ ಸ್ವಚ್ಛತೆ, ನೈರ್ಮಲ್ಯದ ಬಗ್ಗೆಯೂ ಸಕಾರಾತ್ಮಕವಾಗಿ ಚಿಂತಿಸಬೇಕಿದೆ. ಏಕೆಂದರೆ, ಒಬ್ಬ ವ್ಯಕ್ತಿಗೆ ಈ ಕಾಯಿಲೆಗಳು ಬಂದರೆ ಗ್ರಾಮಕ್ಕೆಲ್ಲಾ ಹರಡಲಿದೆ ಎಂದು ವೆಂಕಟೇಶ್ ಎಚ್ಚರಿಸಿದರು.
ಸಕ್ರಿಯ ಪಾಲ್ಗೊಳ್ಳುವಿಕೆ, ಸಕರಾತ್ಮಕ ಕ್ರಮಗಳಿಂದ ಇಂತಹ ಮಾರಣಾಂತಿಕ ಕಾಯಿಲೆಗಳನ್ನು ನಿಯಂತ್ರಿಸಬಹುದು. ಆದ್ದರಿಂದ ಪ್ರತಿ ವರ್ಷ ಏ.7 ರಂದು ವಿಶ್ವ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.
ಸಾಮಾಜಿಕ, ಮಾನಸಿಕ, ಭೌತಿಕವಾಗಿ ಆರೋಗ್ಯದಿಂದ ಇದ್ದಲ್ಲಿ ಮಾತ್ರ ಪೂರ್ಣ ಆಯಸ್ಸನ್ನು ಸಂತೋಷ ನೆಮ್ಮದಿಯಿಂದ ಕಳೆಯಲು ಸಾಧ್ಯ. ಕೀಟಗಳ ನಿಯಂತ್ರಣ ಮಾಡುವ ಜಾಗೃತಿ ಕಾರ್ಯಕ್ರಮಗಳು ಪ್ರತಿಯೊಬ್ಬ ವ್ಯಕ್ತಿ, ಮನೆಯಿಂದ ಶುರುವಾಗಬೇಕಿದೆ. ಈ ಮೂಲಕ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಪ್ರೇರಣೆ ನೀಡಬೇಕಿದೆ ಎಂದು ಕರೆ ನೀಡಿದರು. ಜಿಲ್ಲಾ ಕುಷ್ಟ ರೋಗ ನಿರ್ಮೂಲನಾಧಿಕಾರಿ ವೆಂಕಟಾಚಲಮೂರ್ತಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಂತಿನಿಕೇತನ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಆರ್.ಕುಮಾರಸ್ವಾಮಿ, ರಾಮಚಂದ್ರ ನಾಯ್ಕ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶೋಭಾರಾಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

