ಬೆಂಗಳೂರು ಗ್ರಾಮಾಂತರ

ಸ್ವಾಭಿಮಾನಿ ಆಲೋಚನೆಗಳಿಲ್ಲದ ಶಿಕ್ಷಣ ವ್ಯರ್ಥ: ಚಕ್ರವರ್ತಿ ಸೂಲಿಬೆಲೆ

Published On :

ದೊಡ್ಡಬಳ್ಳಾಪುರ: ವಿವೇಕ ಚಿಂತನೆಗಳು ಭಾರತೀಯ ಶಿಕ್ಷಣ ವ್ಯವಸ್ಥೆಯ ಆಧಾರವಾಗಬೇಕು. ಸ್ವಾಭಿಮಾನಿ ಆಲೋಚನೆಗಳಿಲ್ಲದ ಶಿಕ್ಷಣ ಸತ್ವರಹಿತ ಎಂದು ಲೇಖಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅವರು  ಶಿಕ್ಷಣದಲ್ಲಿ ವಿವೇಕಾನಂದರ ಚಿಂತನೆಗಳ ಪ್ರಾಮುಖ್ಯತೆ  ವಿಚಾರದ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಜಗತ್ತಿನ ಎಲ್ಲ ಚಿಂತನೆಗಳ ಮೂಲ ಭಾರತ. ಜಗತ್ತನ್ನು ನಿಬ್ಬೆರಗು ಮಾಡಿದ ಜ್ಞಾನಪರಂಪರೆಗೆ ಆಧಾರ ಎನಿಸಿರುವ ಭಾರತದಲ್ಲಿ ಇಂದೂ ಕೂಡ ಮಹತ್ವದ ಚಿಂತನೆಗಳು ಹುಟ್ಟುತ್ತಿವೆ. ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದ ಸಾಧನೆ ಗಣನೀಯ. ಮಹಾನ್ ದೇಶಭಕ್ತ ಸಂತನಾಗಿ ವಿವೇಕಾನಂದರು ಭರತಖಂಡದ ಪ್ರತಿಷ್ಠೆಯನ್ನು ಜಾಗತಿಕವಾಗಿ ಸಾರಿಬಂದವರು. ಇಂದು ಅವರ ಆದರ್ಶಗಳ ನೆಲೆಗಟ್ಟಿನಲ್ಲಿ ದೇಶವನ್ನು ಗಟ್ಟಿತನದಿಂದ ಕಟ್ಟಬೇಕಿದೆ. ಈ ದೇಶಕ್ಕೊಬ್ಬ ಸಮರ್ಥ ದೇಶಭಕ್ತ ನಾಯಕನ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ ಎಂದರು.
ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಸಂಸ್ಥೆಯ ಟ್ರಸ್ಟಿ ಜೆ.ರಾಜೇಂದ್ರ ಮಾತನಾಡಿ, ವಿದ್ಯಾರ್ಥಿ ಯುವಜನರಲ್ಲಿ ದೇಸಿಯತೆ ಅರಿವು ಮೂಡಿಸುವ ಮತ್ತು ದೇಶಪ್ರೇಮವನ್ನು ಪ್ರಚೋದಿಸುವ ಈ ಬಗೆಯ ಉಪನ್ಯಾಸಗಳು, ವಿಚಾರ ಮಂಥನ ಅತ್ಯಂತ ಗಣನೀಯ. ಶಿಕ್ಷಣ ಸಂಸ್ಥೆಗಳಲ್ಲಿ ಈ ಬಗೆಯ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.