ಬೆಂಗಳೂರು ಗ್ರಾಮಾಂತರ

ಯುವ ಶಕ್ತಿಯಿಂದ ದೇಶದ ಏಳಿಗೆ ಸಾಧ್ಯ: ತುಳಸಿ ಮುನಿರಾಜು

Published On :

ಆನೇಕಲ್ಲು: ಯುವ ಶಕ್ತಿಯಿಂದ ಮಾತ್ರ ಭಾರತ ದೇಶದಲ್ಲಿ ಬದಲಾವಣೆ ಕಾಣಲು ಸಾಧ್ಯ. ಯುವ ಶಕ್ತಿ ಎಚ್ಚೆತ್ತುಕೊಂಡು ದೇಶದ ಏಳಿಗೆಗೆ ಪಣ ತೊಟ್ಟು ಹೋರಾಡಬೇಕೆಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತುಳಸಿ ಮುನಿರಾಜು ಕರೆ ನೀಡಿದ್ದಾರೆ.
ಅವರು ಆನೇಕಲ್ ತಾಲೂಕು ಯುವ ಮೋರ್ಚಾ ಕಾರ್ಯಕರ್ತರ ಅಂತಿಮ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡಕ್ಕೆ ನಗದು ಹಾಗೂ ಪಾರಿತೋಷಕ ನೀಡಿ ಮಾತನಾಡಿ ಬದಲಾಗುತ್ತಿರುವ ಸನ್ನಿವೇಶ ಹಾಗೂ ವೇಗಕ್ಕೆ ತಕ್ಕಂತೆ ಆಲೋಚನೆ ಮಾಡುವ ಯುವ ಮನಸ್ಸುಗಳು ದೇಶವನ್ನು ಕ್ಲಿಷ್ಟ ಪರಿಸ್ಥಿತಿಯಿಂದ ಹೊರ ತರಲು ಸಾಧ್ಯ. ಲಕ್ಷಾಂತರ ಸಾವಿರ ಕೋಟಿ ರು.ಗಳ ಹಗರಣಗಳಿಂದ ಭಾರತ ದೇಶವನ್ನು ಆರ್ಥಿಕವಾಗಿ ರಕ್ಷಿಸುವ ಕಾಲವು ಸನ್ನಿಹಿತವಾಗಿದೆ ಎಂದರು.
ಈ ಪಂದ್ಯಾವಳಿಯ ಅಂತಿಮ ಪಂದ್ಯ ಹಿಮಾಚಲ ಪ್ರದೇಶದಲ್ಲಿ ನಡೆಯಲಿದೆ.  ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಅಂತಿಮ ಪಂದ್ಯದಲ್ಲಿ ಪಾಲ್ಗೊಂಡು ಗೆದ್ದ ತಂಡಕ್ಕೆ ಬಹುಮಾನ ವಿತರಿಸುವರು. ತಾಳ್ಮೆ, ಏಕಾಗ್ರತೆ, ದೃಢತೆಯಿಂದ ಕ್ರೀಡೆಯಲ್ಲಿ ಪಾಲ್ಗೊಂಡು ಮುಂಬರುವ ಚುನಾವಣೆಯಲ್ಲಿ ಭಾರತ ದೇಶದಲ್ಲಿ ಬಿಜೆಪಿ ಆಡಳಿತ ಕಾಣಲು ಮನವಿ ಮಾಡಿದರು.
ತಾಲೂಕು ಬಿಜೆಪಿ ಆಧ್ಯಕ್ಷ ಬಿ.ಜಿ.ಆಂಜಿನಪ್ಪ, ತಾಪಂ ಅಧ್ಯಕ್ಷ ಮುರಳಿ ಕೃಷ್ಣ, ಪುರಸಭಾ ಸದಸ್ಯರಾದ ನರಸಿಂಹರೆಡ್ಡಿ, ರಾಜರತ್ನಂ, ರಾಘವೇಂದ್ರ, ಮರಸೂರು ಅದ್ವಾವಿ ರೆಡ್ಡಿ ಅವರು ಅಂತಿಮ ಹಣಾಹಣಿಯಲ್ಲಿ ಪಾಲ್ಗೊಂಡ ಸರ್ಜಾಪುರದ ಸ್ವಾಮಿ ವಿವೇಕಾನಂದ ತಂಡ ಹಾಗೂ ವಿಜಯಿ ಹೆಬ್ಬಗೋಡಿ ಗಾಂಚಲಿ ಫ್ರೆಂಡ್ಸ್ ತಂಡಕ್ಕೆ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.