ಮಾಡಿಕೊಂಡಿದ್ದ ಒಪ್ಪಂದದಂತೆ ಕಂಪನಿ ತೊರೆಯಲು ಸೂಚನೆ
ಕ.ಪ್ರ.ವಾರ್ತೆ , ರಾಮನಗರ , ಫೆ.6
ಬಿಡದಿಯ ಜೆಸಿಎಎಲ್ ಸ್ಥಾವರದಲ್ಲಿ 114 ಮಂದಿ ಕಾಯಂ ನೌಕರರಿದ್ದು, 88 ಮಂದಿ ಟ್ರೈನಿಗಳ ತರಬೇತಿ ಮುಗಿದ ಹಿನ್ನೆಲೆಯಲ್ಲಿ ಮೊದಲೇ ಮಾಡಿಕೊಂಡಿದ್ದ ಒಪ್ಪಂದಂತೆ ಕಂಪನಿ ತೊರೆಯುವಂತೆ ಸೂಚಿಸಲಾಗಿದೆ. ಆದರೆ, ಕೆಲವರು ಸಂಘಟನೆ ಜತೆ ಸೇರಿಕೊಂಡು ಹೆಚ್ಚುವರಿ ಕೆಲಸದ ಭತ್ಯೆ ನೀಡಿಲ್ಲ ಎಂಬುದೂ ಸೇರಿದಂತೆ ಮಾಡಿರುವ ಇನ್ನಿತರೆ ಆರೋಪಗಳು ದುರುದ್ದೇಶದಿಂದ ಕೂಡಿದೆ ಎಂದು ಜಾನ್ಸನ್ ಕಂಟ್ರೋಲ್ ಆಟೋಮೋಟಿವ್ ಲಿಮಿಟೆಡ್ ಕಂಪನೆ ಸ್ಪಷ್ಟನೆ ನೀಡಿದೆ.
ಕಂಪನಿಯು ಪದವಿ, ಡಿಪ್ಲೊಮಾ ಅಥವಾ ಪಿಯುಸಿ ತೇರ್ಗಡೆ ಹೊಂದಿದವರ ಕೌಶಲ್ಯ ಹೆಚ್ಚಿಸಿ ವೃತ್ತಿ ಅನುಭವ ಕಲ್ಪಿಸಿಕೊಡುವ ಉದ್ದೇಶದಿಂದ 2 ವರ್ಷಗಳ ಅವಧಿಗೆ ಟ್ರೈನಿಗಳೆಂದು ನೇಮಕ ಮಾಡಿಕೊಳ್ಳಲಾಗುತ್ತದೆ. ಪ್ರತಿ ಟ್ರೈನಿಯೂ ಆರಂಭದಲ್ಲಿ ತರಬೇತಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿರುತ್ತಾರೆ. ಅದರಂತೆ ಅವರನ್ನು ಕಂಪನಿಯಿಂದ ಹೊರ ಹಾಕಲಾಗಿದೆ ಎಂದಿದ್ದಾರೆ.
ತರಬೇತಿ ಕಾರ್ಮಿಕರ ಬೇಡಿಕೆಗಳನ್ನು ಸ್ನೇಹಯುತವಾಗಿ ಪರಿಹರಿಸಲು ಜೆಸಿಎಎಲ್ ಬದ್ಧವಾಗಿದೆ. ಈ ಸಂಬಂಧ ಕಾರ್ಮಿಕ ಇಲಾಖೆಯ ಉಪ ಆಯುಕ್ತರ ಸಮ್ಮುಖದಲ್ಲಿ ಆಡಳಿತ ಮಂಡಳಿಯು ಟ್ರೈನಿಗಳು, ಕಾರ್ಮಿಕ ಸಂಘದ ಪದಾಧಿಕಾರಿಗಳ ಹಲವು ಸುತ್ತಿನ ಮಾತುಕತೆಗಳನ್ನು ನಡೆಸಿದೆ. ಟ್ರೈನಿಗಳ ಸೆಟಲ್ಮೆಂಟ್ ಸೇರಿದಂತೆ ಬೇಡಿಕೆಗಳ ಪರಿಹಾರಕ್ಕೆ ಆಡಳಿತ ಮಂಡಳಿ ಈಗಾಗಲೇ ತನ್ನ ನಿಲುವನ್ನು ಪ್ರಕಟಿಸಿದ್ದು, ಇದನ್ನು ಬಹಳಷ್ಟು ಟ್ರೈನಿಗಳು ಕರಾರನ್ನು ಒಪ್ಪಿಕೊಂಡು ಕಂಪನಿ ತೊರೆಯಲು ನಿರ್ಧರಿಸಿದ್ದಾರೆ.
ನೇಮಕಾತಿಯಲ್ಲಿ ಜೆಸಿಎಎಲ್ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ತನ್ನ ಒಟ್ಟಾರೆ ಕಾರ್ಮಿಕರಲ್ಲಿ ಶೇ. 100ರಷ್ಟು ಕಾರ್ಮಿಕರು ಕನ್ನಡಿಗರಾಗಿದ್ದಾರೆ. ಈ ಪೈಕಿ ಶೇ.98ರಷ್ಟು ಮಂದಿ ಬಿಡದಿ ಮತ್ತು ಸುತ್ತಮುತ್ತಲ ಪ್ರದೇಶದವರಾಗಿದ್ದಾರೆ, ಅವರಿಗೆ ತರಬೇತಿ ನೀಡಿ ನುರಿತ ಕಾರ್ಮಿಕರನ್ನಾಗಿ ರೂಪಿಸಲು ಕಂಪನಿ ಗಣನೀಯ ಪ್ರಮಾಣದ ಸಮಯ ಮತ್ತು ಸಂಪನ್ಮೂಲಗಳನ್ನು ವ್ಯಯಿಸುತ್ತಿದೆ.
ಅಲ್ಲದೇ ಸ್ಥಳೀಯ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳುವುದರ ಜೊತೆಗೆ ತನ್ನ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವಲ್ಲಿಯೂ ಮುಂದಿದೆ. ಕಾರ್ಮಿಕರ ಹಿತ ಮತ್ತು ಅವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ನಮಗೆ ಬದ್ಧತೆಯಿದ್ದು, ವ್ಯವಹಾರಿಕವಾಗಿ ಕಠಿಣ ಸನ್ನಿವೇಶ ಎದುರಿಸುತ್ತಿರುವುದರ ನಡುವೆಯೂ ಕಾರ್ಮಿಕರ
ಬೇಡಿಕೆಗಳಿಗೆ ಅತ್ಯುತ್ತಮ ಪರಿಹಾರ ಕಂಡುಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನವನ್ನೂ ಕಂಪನಿ ಮಾಡಲಿದೆ ಎಂದು ಕಂಪನಿಯು ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

