ಮಕ್ಕಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆ: ಲಿಂಗೇಶ್‌ಕುಮಾರ್
ಚನ್ನಪಟ್ಟಣ: ಅಂತರ್ಜಲದ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನೂರಾರು ಅಡಿಗಳ ಆಳದಿಂದ ನೀರು ತೆಗೆದು ಕುಡಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಭೂಮಿಯ ಆಳದಿಂದ ತೆಗೆಯುವ ನೀರು ಅಪಾಯಕಾರಿ ರಾಸಾಯಿನಿಕ ಮತ್ತು ಖನಿಜಗಳಿಂದ ಕೂಡಿದ್ದು ಇಂದು ನಮ್ಮ ಮಕ್ಕಳಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ ಎಂದು ಬಮೂಲ್ ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್ ವಿಷಾದಿಸಿದರು.
ತಾಲೂಕಿನ ಸರಗೂರು ಗ್ರಾಮದ ಸರ್ಕಾರಿ ಶಾಲೆಗೆ ಬೆಂಗಳೂರು ಹಾಲು ಒಕ್ಕೂಟದ ವತಿಯಿಂದ ನೀಡಲಾದ ನೀರು ಶುದ್ಧೀಕರಣ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿ, ಕುಡಿಯುವ ನೀರಿನ ಟಿಡಿಎಸ್ ಮಟ್ಟ 300ರ ಒಳಗೆ ಇರಬೇಕೆಂದು ತಜ್ಞರು ಹೇಳುತ್ತಾರಾದರೂ ತಾಲೂಕಿನ ಯಾವುದೇ ಗ್ರಾಮದಲ್ಲೂ ಈ ಗುಣಮಟ್ಟದ ನೀರು ದೊರೆಯುತ್ತಿಲ್ಲ ಎಂದರು.
ನಮ್ಮ ದೇಶದಲ್ಲಿ ನೀರಿನಿಂದ ಹರಡುವ ಕಾಯಿಲೆಗಳು ಸಾಕಷ್ಟಿವೆ, ಪರಿಸರದ ಮೇಲೆ ನಿರಂತರವಾಗಿ ನಡೆದ ದೌರ್ಜನ್ಯದಿಂದಾಗಿ ನಮ್ಮನ್ನು ಕಾಯಬೇಕಾದ ಪರಿಸರ ಇಂದು ನಮಗೇ ಮಾರಕವಾಗಿದೆ. ನಾವು ಎಸಗಿರುವ ತಪ್ಪನ್ನು ಪರಾಮರ್ಶಿಸುವ ಜತೆಗೆ ಎದುರಾಗಿರುವ ಅಪಾಯವನ್ನು ಎದುರಿಸಲು ನಾವು ಸನ್ನದ್ಧವಾಗಬೇಕೆಂದು ತಿಳಿಸಿದರು.
ಇದರೊಂದಿಗೆ ಬಮೂಲ್ ಟ್ರಸ್ಟ್ ಒಕ್ಕೂಟದ ನೌಕರರು ಮತ್ತು ಉತ್ಪಾದಕರ ಮಕ್ಕಳಿಗೆ ಸಾಕಷ್ಟು ಧನಸಹಾಯ ಮಾಡುತ್ತಿದ್ದು, ಉನ್ನತ ವಿದ್ಯಾಭ್ಯಾಸ ಪಡೆಯುವ ಮಕ್ಕಳಿಗಾಗಿ ಉತ್ತಮ ಸೌಲಭ್ಯವನ್ನು ಒಕ್ಕೂಟ ಕಲ್ಪಸಿದ್ದು ವಿದ್ಯಾರ್ಥಿಗಳು ಈ ಎಲ್ಲಾ ಸೌಲಭ್ಯಗಳನ್ನು ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.
ನಿರ್ದೇಶಕ ಎಸ್. ಲಿಂಗೇಶ್‌ಕುಮಾರ್, ಶಿಬಿರದ ಉಪವ್ಯವಸ್ಥಾಪಕ ಡಾ.ಶ್ರೀಧರ್, ವಿಸ್ತರಣಾಧಿಕಾರಿ ಅಮಿತಾಹೆಗಡೆ ಅವರನ್ನು ಸನ್ಮಾನಿಸಲಾಯಿತು. ಡೈರಿ ಕಾರ್ಯದರ್ಶಿಗಳ ಸಂಘದ ಮುಖಂಡ ಸೋಗಾಲ ತಮ್ಮಯ್ಯ, ಸರಗೂರು ಡೇರಿ ಅಧ್ಯಕ್ಷ ಪುಟ್ಟೇಗೌಡ, ಚಿಕ್ಕಣ್ಣ, ಬಿಳೀಗೌಡ, ಹನುಂತೇಗೌಡ, ರಂಗೇಶ್, ಡೈರಿ ಕಾರ್ಯದರ್ಶಿ ಕುಮಾರ್, ಮುಖ್ಯಶಿಕ್ಷಕ ಶಿವರಾಮು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

