ಬೆಂಗಳೂರು ಗ್ರಾಮಾಂತರ

ಕಂಸಾಳೆ ಪದಗಳ ಗಾಯನ

Published On :

ದೇವನಹಳ್ಳಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಳಂದ ಶಿಕ್ಷಣ ಮಹಾವಿದ್ಯಾಲಯ ಹಾಗೂ ಪಾಪನಹಳ್ಳಿ ಪರಿವರ್ತನಾ ಟ್ರಸ್ಟ್ಸಂಯುಕ್ತ ಆಶ್ರಯದಲ್ಲಿ ಹಾಡಿರೇ ರಾಗಗಳ ತೂಗಿರೇ ದೀಪಗಳ ಯೋಜನೆ ಅಡಿಯಲ್ಲಿ ಶೆಟ್ಟಿಗೆರೆ ನರಸಿಂಹಮೂರ್ತಿ ತಂಡದವರಿಂದ ಕಂಸಾಳೆ ಪದಗಳ ಮತ್ತು ಜಾನಪದ ಗೀತೆಗಳ ಗಾಯನ ಸಮಾರಂಭ ಸೋಮವಾರ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನೆಯನ್ನು ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಿ.ಎನ್. ಕೃಷ್ಣಪ್ಪ ನೆರವೇರಿಸಿ ನಮ್ಮ ದೇಶದ ಪರಂಪರೆ ಮತ್ತು ಸಂಸ್ಕೃತಿ ಉಳಿಸಬೇಕಾದ್ದು ವಿದ್ಯಾರ್ಥಿಗಳ ಕರ್ತವ್ಯ. ಅಲ್ಲದೆ ಪಾಶ್ಚಾತ್ಯ ಸಂಸ್ಕೃತಿಗೂ ಮತ್ತು ನಮ್ಮ ದೇಶಿ ಸಂಸ್ಕೃತಿಗೂ ಅಜಗಜಾಂತರ ವ್ಯತ್ಯಾಸವಿದೆ ಎಂದರು. ಶಿಕ್ಷಕರು ಶಾಲೆಯಲ್ಲಿ ಕೇವಲ ಪಾಠ ಬೋಧಿಸುವುದಷ್ಟೇ ಅಲ್ಲ ಜೊತೆಗೆ ನಾಡಗೀತೆ, ಜಾನಪದಗೀತೆ, ನಾಟಕ ಸಂಭಾಷಣೆಗಳ ಬಗ್ಗೆ ಅರಿವಿರಬೇಕು ಎಂದರಲ್ಲದೆ ಹಿಂದಿನ ಸಂಸ್ಕೃತಿ ಉಳಿಸಬೇಕಾದರೆ ಮೊದಲು ಅದನ್ನು ಅರಿತು ಪ್ರೋತ್ಸಾಹಿಸಬೇಕು, ಅದರ ಸೊಗಡು ಸವಿಯಬೇಕು ಎಂದರು.  ಅಧ್ಯಕ್ಷತೆಯನ್ನು ನಳಂದ ಬಿ.ಎಡ್.ಕಾಲೇಜಿನ ಪ್ರಾಂಶುಪಾಲ ಬಿ.ಸಿ.ವೆಂಕಟೇಶ್ ಗೌಡ ವಹಿಸಿದ್ದರು. ಪರಿವರ್ತನಾ ಸಂಸ್ಥೆಯ ಕಾರ್ಯದರ್ಶಿ ಪಿ.ಎಂ. ಮೂರ್ತಿ ಸ್ವಾಗತ ಕೋರಿದರು.
ನಂಜುಂಡಸ್ವಾಮಿ ಸ್ಮರಣೆ
ದೇವನಹಳ್ಳಿ: ರಾಜ್ಯ ರೈತ ಸಂಘದ ಅಧ್ಯಕ್ಷ ಹಾಗೂ ರೈತ ಹೋರಾಟಗಾರರಾಗಿದ್ದ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಹತ್ತನೆಯ ಪುಣ್ಯ ಸ್ಮರಣೆ ಅಂಗವಾಗಿ ಇಲ್ಲಿನ ರೈತ ಸಂಘದ ಕಚೇರಿಯಲ್ಲಿ ಗುರುವಾರ ಸಮಾರಂಭ ಆಯೋಜಿಸಲಾಗಿತ್ತು.  ಜಿಲ್ಲಾ ರೈತ ಸಂಘದ ಅಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ ನಂಜುಂಡಸ್ವಾಮಿ ಅವರಿಗೆ ರೈತರ ಬಗ್ಗೆ ಇದ್ದ ಕಳಕಳಿ ಅಲ್ಲದೆ ಸರ್ಕಾರಗಳಿಂದ ಆಗುತ್ತಿದ್ದ ಅನ್ಯಾಯಗಳ ಬಗ್ಗೆ ಯಾರ ಮುಲಾಜಿಗೂ ಒಳಗಾಗದೇ ಖಂಡಿಸಿ ಹೋರಾಟ ಮಾಡುತ್ತಿದ್ದರು. ಆದ್ದರಿಂದ ಅವರ ಹೋರಾಟವೇ ನಮ್ಮ ರೈತರಿಗೆ ಸ್ಫೂರ್ತಿಯಾಗಿದೆ ಎಂದು ತಿಳಿಸಿದರು. ಇದೇ ಸಂಧರ್ಭದಲ್ಲಿ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ಮುನಿಶಾಮಪ್ಪ, ವಕೀಲ ಸಿದ್ದಾರ್ಥ, ವೆಂಕಟೇಶ್, ಗೋಪಾಲಸ್ವಾಮಿ ನಂಜುಂಡಸ್ವಾಮಿ ಅವರ ಬಗ್ಗೆ ಮಾತನಾಡಿದರು.
ಕೊಳವೆ ಬಾವಿ ಕೊರೆಸಲು ಕ್ರಮ
ಮಾಗಡಿ: ಪಟ್ಟಣದ 11ನೇ ವಾರ್ಡ್ನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ನೀರಿನ ಸಮಸ್ಯೆ ನಿವಾರಣೆಗೆ ಕೊಳವೆ ಬಾವಿ ಕೊರೆಸಲು ಅಗತ್ಯ ಕ್ರಮ ವಹಿಸಿರುವುದಾಗಿ ಪುರಸಭಾ ಸದಸ್ಯ ಎಂ.ಬಿ. ಮಹೇಶ್ ತಿಳಿಸಿದರು.    ಅವರು ಮಾಗಡಿ ಪಟ್ಟಣ 11ನೇ ವಾರ್ಡ್ನಲ್ಲಿ  ಕೊಳವೆಬಾವಿ ಕೊರೆಯಲು ಚಾಲನೆ ನೀಡಿ  ಮಾತನಾಡುತ್ತಾ ಬೇಸಿಗೆ ಸಮೀಪಿಸುತ್ತಿದ್ದು, ಈಗಾಗಲೇ ಪಟ್ಟಣದಲ್ಲಿ ನೀರಿಗೆ ಮಹಿಳೆಯರು ಕೊಡ ಹಿಡಿದು ಅಲೆಯುತ್ತಿದ್ದಾರೆ. ಇರುವ ಕೊಳೆವ ಬಾವಿಗಳು ಬತ್ತಿ ಹೋಗಿವೆ. ಜನತೆ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಜನತೆಯಿಂದ ಆಯ್ಕೆಯಾಗಿರುವ ನಾವು ಕನಿಷ್ಠ ಋಣ ತೀರಿಸುವ ಕೆಲಸ ಮಾಡಬೇಕಿದ್ದು, ಪುರಸಭೆ ವತಿಯಿಂದ ಕೊಳವೆ ಬಾವಿ ಕೊರೆಸಿ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ ವಹಿಸಿರುವುದಾಗಿ ವಿವರಿಸಿದರು.


ನಿತ್ಯಾ ಶಾಲೆ ಮುಚ್ಚುವ ಆದೇಶಕ್ಕೆ ತಡೆ
ಬೆಂಗಳೂರು:  ಬಿಡದಿಯ ನಿತ್ಯಾನಂದ ಆಶ್ರಮದಲ್ಲಿನ ಗುರುಕುಲ ಮುಚ್ಚುವಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ್ದ ನೋಟಿಸ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿ ನೀಡಿದ್ದ ನೋಟಿಸ್ ಪ್ರಶ್ನಿಸಿ ನಿತ್ಯಾನಂದನ ಗುರುಕುಲದ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆನಂದ ಭೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.  ಇತ್ತೀಚೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಶಿಕ್ಷಣ ಸಚಿವರು, ನಿತ್ಯಾನಂದನ ಆಶ್ರಮದಲ್ಲಿ ನಡೆಯುತ್ತಿರುವ ಗುರುಕುಲಕ್ಕೆ ಸರ್ಕಾರದ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಅದನ್ನು ಮುಚ್ಚಿಸುವಂತೆ ಆದೇಶ ನೀಡಿದ್ದರು. ಅದರಂತೆ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುಕುಲ ಮುಚ್ಚುವಂತೆ ಹಾಗೂ ಅಲ್ಲಿನ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ವರ್ಗಾಯಿಸುವಂತೆ ನೋಟಿಸ್ ಜಾರಿ ಮಾಡಿದ್ದರು.  ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ ಗುರುಕುಲದ ಆಡಳಿತ ಮಂಡಳಿ, ಗುರುಕುಲ ನಡೆಸಲು ಸರ್ಕಾರದ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಸಂವಿಧಾನದಲ್ಲಿ ಸ್ಪಷ್ಟಪಡಿಸಲಾಗಿದೆ. ಅಲ್ಲದೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವಿವರಣೆ ಕೇಳಿಲ್ಲ ಎಂದು ಆಕ್ಷೇಪಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.