ಬೆಂಗಳೂರು ಗ್ರಾಮಾಂತರ

ಕನಕಪುರದಲ್ಲಿ ಆಂಧ್ರ ಬ್ಯಾಂಕ್ ನೂತನ ಶಾಖೆ ಉದ್ಘಾಟನೆ

Published On :

ಕನಕಪುರ: ಕೇಂದ್ರ ಸರ್ಕಾರಿ ಸ್ವಾಮ್ಯದ ಆಂಧ್ರ ಬ್ಯಾಂಕ್ ಕರ್ನಾಟಕ ರಾಜ್ಯದಲ್ಲಿ 105 ಶಾಖೆಗಳನ್ನು ಹೊಂದಿದ್ದು, ದೇಶದಾದ್ಯಂತ 25 ರಾಜ್ಯಗಳಲ್ಲಿ 2 ಲಕ್ಷದ 35 ಸಾವಿರ ಕೋಟಿ ವಾಹಿವಾಟು ನಡೆಸುತ್ತಿದೆ. 1900 ಶಾಖೆಗಳನ್ನು ಹೊಂದಿದೆ ಎಂದು ಜನರಲ್ ಮ್ಯಾನೇಜರ್ ಸುಬ್ಬಾರಾವ್ ಹೇಳಿದ್ದಾರೆ.
ಅವರು ಕನಕಪುರದ ಬೂದಿಕೇರಿ ರಸ್ತೆಯಲ್ಲಿನ ಮಹಾಲಿಂಗೇಶ್ವರ ಕಾಂಪ್ಲೆಕ್ಸ್‌ನಲ್ಲಿ ನೂತನ ಶಾಖೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಕನಕಪುರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು.
ಆಂಧ್ರ ಬ್ಯಾಂಕಿನ ಉಪಪ್ರಧಾನ ವ್ಯವಸ್ಥಾಪಕ ಕೆ. ರಾಮಕೃಷ್ಣರಾಜು ಮಾತನಾಡಿ ವ್ಯವಸಾಯ, ವಾಣಿಜ್ಯ, ಕೈಗಾರಿಕೆ ಹಾಗೂ ಸಣ್ಣಪ್ರಮಾಣದ ವ್ಯಾಪಾರಗಳಿಗೆ, ಉದ್ದಿಮೆಗಳಿಗೆ ಆದ್ಯತೆ ನೀಡುತ್ತಿದ್ದು, ಕೃಷಿ, ಆಭರಣ ಸಾಲಗಳನ್ನು ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎಟಿಎಂ ಪ್ರಾರಂಭಿಸಿ ಎಲ್ಲ ಕಾಲದಲ್ಲಿಯೂ ಉತ್ತಮ ಸೇವೆ ಸಲ್ಲಿಸಲು ಗಮನಹರಿಸಿದ್ದೇವೆ ಎಂದು ಹೇಳಿದರು.
ಶಾಖಾ ವ್ಯವಸ್ಥಾಪಕ ಬಿಶ್ವಭೂಷಣ ಮೊಹಾಂತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಕೆ.ಪಿ.ಗಣೇಶಯ್ಯ, ಮುರಡಿ ಗಿರೀಶ್, ಕೆಂಪಾಚಾರ್, ಬ್ಯಾಂಕಿನ ಮುಖ್ಯ ವ್ಯವಸ್ಥಾಪಕ ದಿಲೀಪ್, ಗೋಪಾಲರಾವ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.