ಗ್ರಾಮೀಣ ಜಾನಪದ ಸೌರಭ ಕಾರ್ಯಕ್ರಮ
ನೆಲಮಂಗಲ: ತಾಲೂಕಿನ ದೇಗನಹಳ್ಳಿ ಗ್ರಾಮದಲ್ಲಿ ಮನೋಜ್ಞ ಹಾಗೂ ರಂಗಸ್ಫೂರ್ತಿ ಕೇಂದ್ರ ಸಂಯುಕ್ತಾಶ್ರಯದಲ್ಲಿ ಗ್ರಾಮೀಣ ಜಾನಪದ ಸೌರಭ ಕಾರ್ಯಕ್ರಮವನ್ನು ಫೆ. 22ರ ಶನಿವಾರದಂದು ಸಂಜೆ 3-30ಕ್ಕೆ ಏರ್ಪಡಿಸಲಾಗಿದೆ. ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉದ್ಘಾಟನೆಯನ್ನು ನೆರವೇರಿಸಲಿದ್ದು, ಜಿ.ಪಂ.ಸದಸ್ಯ ಬಿ.ಎಂ.ಎಲ್. ಕಾಂತರಾಜು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬೂದಿಹಾಲ್ ಗ್ರಾ.ಪಂ.ಅಧ್ಯಕ್ಷೆ ರಾಮನರಸಮ್ಮ, ಉಪಾಧ್ಯಕ್ಷೆ ಪುಟ್ಟನಂಜಮ್ಮ ತಿಮ್ಮರಾಯಪ್ಪ, ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ನಾಗರಾಜು, ಸಾಹಿತಿ ಬಿದಲೂರು ಸೋಮಣ್ಣ , ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯ ನಿರ್ದೇಶಕಿ ಸುಶೀಲಮ್ಮ ಆಗಮಿಸಲಿದ್ದಾರೆ ಎಂದು ಮನೋಜ್ಞ ಟ್ರಸ್ಟ್‌ನ ಅಧ್ಯಕ್ಷ ಟಿ.ಕೃಷ್ಣಪ್ಪ (ಬೂದಿಹಾಲ್ ಕಿಟ್ಟಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಿ.ವೆಂಕಟೇಶ್ ನೇಮಕ
ಆನೇಕಲ್: ಭಾರತೀಯ ಜನ ಸೇವಾ ಸಂಘಟನೆ ಸಂಸ್ಥಾಪಕ ಡಿ.ವೆಂಕಟೇಶ್ ಅವರನ್ನು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇಮಕ ಮಾಡಿದ್ದಾರೆ.
ಗುಟ್ಕಾ ಮಾರಾಟ ಅಂಗಡಿ ಮೇಲೆ ದಾಳಿ
ವಿಜಯಪುರ: ಪಟ್ಟಣದಲ್ಲಿ ಬಸ್ ನಿಲ್ದಾಣ ಹಾಗೂ ಗಾಂಧಿಚೌಕದ ಬಳಿ ಇರುವ ಅಂಗಡಿಗಳ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಕಲೀಲ್ ಅಹಮದ್ ನೇತೃತ್ವದಲ್ಲಿ ಗುಟ್ಕಾ ಮಾರಾಟ ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಗುಟ್ಕಾ ಪ್ಯಾಕೇಟ್‌ಗಳನ್ನು ವಶಪಡಿಸಿಕೊಂಡು ನಾಶಪಡಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಧಿಕಾರಿ ವಿ.ಶಂಕರ್ ಅವರ ಆದೇಶದ ಮೇರೆಗೆ ಈ ದಾಳಿ ನಡೆಸಲಾಗಿದೆ. ಸರ್ಕಾರದ ಗುಟ್ಕಾ ಮಾರಾಟ ನಿಷೇಧಿಸಿದ್ದರೂ ಕೆಲವು ಅಂಗಡಿಗಳಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ ಎಂದರು. ಇದೇ ರೀತಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸುಮಾರು 3 ಕೆಜಿಗೂ ಹೆಚ್ಚು ಪಾನ್ ಗುಟ್ಕಾ ವಶಪಡಿಸಿಕೊಂಡು ಬೆಂಕಿಯಿಂದ ನಾಶಪಡಿಸಲಾಯಿತು.ಪಟ್ಟಣದ 25 ರಿಂದ 30 ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ ಎಂದು ತಾಲೂಕು ಆರೋಗ್ಯ ಇಲಾಖೆಯ ನಾಗರಾಜು ತಿಳಿಸಿದ್ದಾರೆ. ಇಲಾಖೆ ಅಧಿಕಾರಿ ರವೀಂದ್ರ ಕಾರಂತ ಮತ್ತು ಮಂಜುನಾಥ್ ಇದ್ದರು.
ಡಿಕ್ಕಿ: ದ್ವಿಚಕ್ರ ವಾಹನ ಸವಾರ ತೀವ್ರ ಗಾಯ
ಕನಕಪುರ: ಕನಕಪುರದ ಬೂದಿಕೇರಿ ರಸ್ತೆಯಲ್ಲಿ ಸಾರಿಗೆ ಸಂಸ್ಥೆ ಬಸ್‌ಹಾಗೂ ದ್ವಿಚಕ್ರ ವಾಹನಗಳ ನಡುವ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ದ್ವಿಚಕ್ರ ವಾಹನ ಸವಾರ ತೀವ್ರವಾಗಿ ಗಾಯಗೊಂಡಿದ್ದಾನೆ. ಅಪಘಾತಕ್ಕೀಡಾದ ಅಲ್ಲಾಭಕ್ಷ್ (28) ತೊಪ್ಪಗನಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ವೃತ್ತಿಯಲ್ಲಿ ಟ್ರ್ಯಾಕ್ಟರ್ ಮೆಕಾನಿಕ್‌ಆಗಿ ಕಾರ್ಯ ನಿರ್ವಹಿಸುತ್ತಿದ್ದನು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕುಳುಹಿಸಲಾಗಿದೆ ಎಂದು ಹಿರಿಯ ಶಸ್ತ್ರಚಿಕಿತ್ಸಕ ಡಾ.ವಸೀಂ ಇಮ್ರಾನ್ ಹೇಳಿದ್ದಾರೆ. ಕನಕಪುರ ಟೌನ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಪಿಐ ಮಲ್ಲೇಶ್ ಹಾಗೂ ಶಿವಶಂಕರ್ ತನಿಖೆ ನಡೆಸಿದ್ದಾರೆ.
ಅರಸು ಸಮುದಾಯದ ಸಂಘಟನಾ ಸಭೆ
ಕನಕಪುರ: ಕನಕಪುರದ ರೋಟರಿ ಭವನದಲ್ಲಿ ಅರಸು ಸಮುದಾಯದ ಸಂಘಟನಾ ಸಭೆ ಎನ್.ರಾಜೇ ಅರಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭದ ಉದ್ಘಾಟನೆಯನ್ನು ಸಂಘದ ನೂತನ ಅಧ್ಯಕ್ಷ ಎನ್.ಆರ್.ದೇವರಾಜೇ ಅರಸು ನೆರವೇರಿಸಿದರು. ಮೈಸೂರು ಒಡೆಯರ ವಂಶಸ್ಥರು ಹಾಗೂ ಸಮುದಾಯದವರಾದ ಅರಸು ಜನಾಂಗದವರು ಇಂದಿಗೂ ಅಸಂಘಟಿತರಾಗಿದ್ದಾರೆ. ದೇವರಾಜ ಅರಸುರಂತಹಾ ಮುಖ್ಯಮಂತ್ರಿಯನ್ನು ನೀಡಿದ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿದ್ದು ಸಂಘಟನೆ, ಶಿಕ್ಷಣ ಮಾತ್ರ ಸಮುದಾಯವನ್ನು ಮುನ್ನಡೆಸಬಲ್ಲವು ಎಂದು ಅಧ್ಯಕ್ಷ ದೇವರಾಜೇ ಅರಸ್ ನುಡಿದರು. ಸಂಘದ ಗೌರವಾಧ್ಯಕ್ಷರಾಗಿ ಎನ್. ರಾಜೇ ಅರಸ್, ಅಧ್ಯಕ್ಷರಾಗಿ ಎನ್.ಆರ್.ದೇವರಾಜೇ ಅರಸು, ಉಪಾಧ್ಯಕ್ಷರಾಗಿ ಹೆಚ್.ಡಿ.ಸಿದ್ಧರಾಜೇ ಅರಸು, ಕಾರ್ಯದರ್ಶಿಯಾಗಿ ರಾಘವೇಂದ್ರ ರಾಜೇ ಅರಸು, ಕೋಶಾಧ್ಯಕ್ಷರಾಗಿ ಟಿ.ವಿ.ರಾಮರಾಜೇ ಅರಸು ಅವಿರೋಧವಾಗಿ ಆಯ್ಕೆಗೊಂಡರು. ಇತರೆ 10 ಮಂದಿ ನಿರ್ದೇಶಕರುಗಳಾಗಿ ನಾಮಕರಣಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

