ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತಕ್ಕೂ ಉತ್ತೇಜನ ನೀಡಬೇಕು: ವಡವಾಟಿ
ಕನಕಪುರ: ಗ್ರಾಮೀಣ ಪ್ರದೇಶಗಳಲ್ಲಿ ನಾಟಕ, ಜಾನಪದ ಕಲೆಗಳಿಗೆ ಸಿಗುತ್ತಿರುವ ಪ್ರೋತ್ಸಾಹದಂತೆಯೇ ಶಾಸ್ತ್ರೀಯ ಸಂಗೀತ, ವಾದ್ಯ ಸಂಗೀತಗಳಿಗೂ ಉತ್ತೇಜನ ನೀಡಬೇಕಾಗಿದೆ ಎಂದು ಅಂತರ ರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ವಾದಕ ಡಾ. ನರಸಿಂಹಲು ವಡವಾಟಿ ಹೇಳಿದ್ದಾರೆ.
ಅವರು ಕನಕಪುರದ ಡಾ. ರಾಜ್ ಬಯಲು ರಂಗಮಂದಿರದಲ್ಲಿ ಭಾರತ್ ಸಾಂಸ್ಕೃತಿಕ ಕಲಾಕೇಂದ್ರ ವತಿಯಿಂದ ನಾದಸ್ವರ ವಾದಕ ದಿ.ಕೆ.ವಿ. ಕೋದಂಡರಾಮು ಸ್ಮರಣಾರ್ಥ ಆಯೋಜಿಸಿದ್ದ ಮುಂಗಾರು ಮುನ್ನುಡಿಗೆ ಸಂಗೀತಸಂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸಂಸ್ಥೆಯ ಸಂಸ್ಥಾಪಕಿ, ಹಿಂದೂಸ್ಥಾನಿ ಗಾಯಕಿ ವಡವಾಟಿ ಶಾರದಾ ಭರತ್ ಅಧ್ಯಕ್ಷತೆ ವಹಿಸಿದ್ದರು.
ಇಂದು ಜಗತ್ತಿನಾದ್ಯಂತ ಅಶಾಂತಿ, ಕ್ರೌರ್ಯ, ಅಸಹನೆ, ದ್ವೇಷ ಅಸೂಯೆಗಳು ಮನೆಮಾಡಿದ್ದು ಸಂಗೀತ ಮಾಧ್ಯಮ ಮಾತ್ರ ಜನರಲ್ಲಿ ಎಂದೆಂದಿಗೂ ನೆಮ್ಮದಿ ಶಾಂತಿಗಳನ್ನು ತರಬಲ್ಲದು. ಗ್ರಾಮೀಣದ ಧಮನಿಗಳಲ್ಲಿ ಜಾನಪದ ರೂಪದಲ್ಲಿ ಸಂಗೀತ ಪ್ರವಹಿಸುತ್ತಿದೆ. ಇದರೊಂದಿಗೆ ಶಾಸ್ತ್ರೀಯವೂ ಕಲೆತರೆ ಕಲಾಮಾಧ್ಯಮ ಹೆಚ್ಚು ಸಶಕ್ತವಾಗುತ್ತದೆ ಎಂದು ಹಿರಿಯ ಕಲಾವಿದ ಡಾ. ನರಸಿಂಹಲು ವಡವಾಟಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಂಗವಾಗಿ ಸಾಹಿತ್ಯ ಪರಿಚಾರಕ, ವಚನ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಡಾ.ಎ.ಆರ್. ಗೋವಿಂದರಾಜು ಆಗಮಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಡಾ. ನರಸಿಂಹಲುವಡವಾಟಿ, ರಾಯಚೂರಿನ ವೆಂಕಟೇಶರಾಯ ವಡವಾಟಿ ಅವರಿಂದ ಶಾಸ್ತ್ರೀಯ ಕ್ಲಾರಿಯೋನೆಟ್ ವಾದನ ಕಾರ್ಯಕ್ರಮ, ಕು.ಸಂಜನಾ
ತಂಡದವರಿಂದ ಸುಗಮಸಂಗೀತ ಗಾಯನ ನಡೆಯಿತು. ಸಂಸ್ಥೆಯ ಕಾರ್ಯದರ್ಶಿ ಯೋಗರವೀಶ್
ಭಾರತ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕೂ.ಗಿ. ಗಿರಿಯಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

