ಬೆಂಗಳೂರು ಗ್ರಾಮಾಂತರ

ಕೆಐಎಡಿಬಿ, ಬಿಪಿಎಲ್ ವಿರುದ್ಧ ಕುಮಾರಸ್ವಾಮಿ ಕಿಡಿ

Published On :

ನೆಲಮಂಗಲ: ರೈತರ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪಿಸುವ ಸಲುವಾಗಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿಯಿಂದ ಭೂಸ್ವಾಧೀನಪಡಿಸಿಕೊಂಡು ರೈತರ ಹಿತ ಕಾಯದೇ ಕಾರ್ಖಾನೆ ಮಾಲೀಕರಿಗೆ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಅವರು ಸೋಮವಾರ ತಾಲೂಕಿನ ದಾಬಸ್ಪೇಟೆಯ ಬಿಪಿಎಲ್ ವೃತ್ತದಲ್ಲಿ ಕೆ.ಐ.ಎ.ಡಿ.ಬಿ ಮತ್ತು ಬಿಪಿಎಲ್ ಕಾರ್ಖಾನೆ ವಿರುದ್ಧ ಬೃಹತ್ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ 1993ರಲ್ಲಿ ಸುಮಾರು 200 ಎಕರೆಯನ್ನು ಕೈಗಾರಿಕೆಗೋಸ್ಕರ ರೈತರ ಜಮೀನನ್ನು ಸ್ವಾದೀನಪಡಿಸಿಕೊಂಡಿದ್ದು ಅದರಲ್ಲಿ 140.5 ಎಕರೆ ಜಮೀನನ್ನು ಕೇವಲ ಒಂದು ಲಕ್ಷದ ಹತ್ತು ಸಾವಿರಗಳನ್ನು ನೀಡಿ ಕೈತೊಳೆದುಕೊಂಡಿತ್ತು. ಆದರೆ ಸ್ವಾಧೀನಕ್ಕೊಳಗಾದ ಜಮೀನಿನಲ್ಲಿ ಬಿಪಿಎಲ್ ಕಾರ್ಖಾನೆಯು ಕೇವಲ 3 ಎಕರೆ ಮಾತ್ರ ಕಾರ್ಖಾನೆಗೆ ಬಳಸಿದ್ದು ಉಳಿದ ಜಮೀನನ್ನು ಯಾವುದೇ ರೀತಿಯ ಕಾರ್ಖಾನೆ ಉದ್ದೇಶಕ್ಕೆ ಬಳಸದೇ ಹಾಗೆಯೇ ಇಟ್ಟುಕೊಂಡಿದ್ದು ಈಗ ಜಿಂದಾಲ್, ಮಾರುತಿ ಸುಜುಕಿ ಕಾರ್ಖಾನೆಗಳಿಗೆ 1 ಕೋಟಿ 80 ಲಕ್ಷಕ್ಕೆ ಜಮೀನನ್ನು ಮಾರಾಟ ಮಾಡುತ್ತಿದ್ದಾರೆ 1993ರಲ್ಲಿ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ 5 ಲಕ್ಷಕ್ಕೆ 1 ಎಕರೆ ಜಮೀನಿಗೆ ನಿಗದಿ ಮಾಡಿದ್ದರೂ ಕೆ.ಐ.ಎ.ಡಿ.ಬಿ ಅಧಿಕಾರಿಗಳು ರೈತರ ಹಿತವನ್ನು ಕಾಯದೇ ಕೇವಲ 1 ಲಕ್ಷ 10 ಸಾವಿರ ರು.ಗಳಿಗೆ ನಿಗದಿಗೊಳಿಸಿ ಬಡ ರೈತನಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂಷಿಸಿದರು.
ಸರ್ಕಾರವು ಯಾವುದೇ ಜಮೀನನ್ನು ಸ್ವಾಧೀನ ಮಾಡಬೇಕಾದರೆ ಜಮೀನು ರೈತರ ಹೆಸರಲ್ಲೇ ಇದ್ದು ಕಾರ್ಖಾನೆಗಳಿಗೆ ನೀಡಬೇಕಾದರೆ 25-30 ವರ್ಷ ಗುತ್ತಿಗೆ ನೀಡಿ ವಾರ್ಷಿಕವಾಗಿ ಎಕರೆಗೆ 2-3 ಲಕ್ಷ ನೀಡಿದಾಗ ಮಾತ್ರ ರೈತರ ಹಿತಕಾಯಬಹುದು. ಹಾಗೆಯೇ ಬಿಪಿಎಲ್ ಕಾರ್ಖಾನೆ ಮಾರಾಟ ಮಾಡಿರುವ ಹಣವನ್ನು ಮುಟ್ಟುಗೋಲು ಹಾಕಿಗೊಂಡು ರೈತರಿಗೆ ಸಮಾನ ರೀತಿಯಲ್ಲಿ ಹಂಚಬೇಕೆಂದು ಆಗ್ರಹಿಸಿದರು.
ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡಿ ರೈತರನ್ನು ಒಕ್ಕಲೆಬ್ಬಿಸುವ ಸಾಹಸಕ್ಕೆ ಸರ್ಕಾರ ಎಂದಿಗೂ ಮುಂದಾಗಬಾರದು. ಈ ಹಿಂದೆ ಇಲ್ಲಿ ರೈತರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸದೇ ಇದ್ದರೆ ನಮ್ಮ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಶಾಸಕರಾದ ಜಮೀರ್ ಅಹಮದ್, ಚಲುವರಾಯಸ್ವಾಮಿ, ಮಾಜಿ ಸಚಿವ ಚನ್ನಿಗಪ್ಪ ಹಾಗೂ ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು, ಗ್ರಾ.ಪಂ.ಸದಸ್ಯರು ಮತ್ತು ಸಾವಿರಾರು ರೈತರು ಇದ್ದರು.

ವಿಜಯಾ ಬ್ಯಾಂಕ್ನ ರೈತ ವಿರೋಧಿ ನೀತಿ ಖಂಡಿಸಿ ನಾಳೆ ಪ್ರತಿಭಟನೆ

ಚನ್ನಪಟ್ಟಣ: ಪಟ್ಟಣದ ವಿಜಯಾ ಬ್ಯಾಂಕ್ನ ರೈತ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯ ರೈತ ಸಂಘದ ತಾಲೂಕು ಶಾಖೆ ಬ್ಯಾಂಕ್ ಕಚೇರಿ ಎದುರು ಬುಧವಾರ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಕಾರ್ಯದರ್ಶಿ ಕೆ.ಎನ್.ರಾಜು ವಿಜಯಾ ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು ಬ್ಯಾಂಕ್ನ ಅರ್ಜಿ ನಮೂನೆ ಮತ್ತು ಇನ್ನಿತರ ಮಾಹಿತಿಗಳು ಕನ್ನಡದಲ್ಲಿಲ್ಲದ ಕಾರಣ ಗ್ರಾಕಹರು ಕಿರುಕುಳ ಅನುಭವಿಸುವಂತಾಗಿದೆ ಎಂದು ಕಿಡಿಕಾರಿದರು.
 ತಾಲೂಕಿನ ಮಂಕುಂದ ಗ್ರಾಮದ ಜಯಮ್ಮ ಎಂಬುವರು ಪಡೆದಿದ್ದ ಸಾಲ ಕೇಂದ್ರ ಸರ್ಕಾರದ ಸಾಲ ಮನ್ನಾ ಯೋಜನೆಯಡಿ ಮನ್ನಾ ಆಗಿದೆಯಾದರೂ ಬ್ಯಾಂಕ್ ಅಧಿಕಾರಿಗಳು ಇಲ್ಲ ಸಲ್ಲದ ನೊಟೀಸ್ ಜಾರಿ ಮಾಡಿ ರೈತರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಈ ಎಲ್ಲಾ ಅವ್ಯವಸ್ಥೆಯನ್ನು ಖಂಡಿಸಿ ರೈತಸಂಘ ಬ್ಯಾಂಕ್ ಕಚೇರಿ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.


ಗಣೇಶ್ಗೆ ದ್ವಿತೀಯ ಸ್ಥಾನ
ಮಾಗಡಿ:  ರಾಜ್ಯ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಡಬಲ್ ಬ್ಯಾಡ್ಮಿಂಟನ್  ಪಂದ್ಯಾವಳಿಯಲ್ಲಿ ವೈಯಕ್ತಿಕ ವಿಭಾಗದಲ್ಲಿ  ಪಟ್ಟಣದ ಪುರಸಭೆ ಪ್ರಥಮ ದರ್ಜೆಯ ನೌಕರ  ಗಣೇಶ್ ಸ್ಪರ್ಧಿಸಿ ದ್ವಿತೀಯ ಸ್ಥಾನಗಳಿಸಿದ್ದಾರೆ. ದ್ವಿತೀಯ ಸ್ಥಾನಗಳಿಸಿದ ನೌಕರ ಗಣೇಶ್  ಅವರನ್ನು ಪುರಸಭೆ ಮುಖ್ಯಾಧಿಕಾರಿ ಕೆ.ಕೆ. ಮುತ್ತಪ್ಪ ಮತ್ತು ಪೌರ ನೌಕರರ ಸಂಘದ ಅಧ್ಯಕ್ಷ ರಾಮಕೃಷ್ಣಯ್ಯ ಹಾಗೂ  ಪದಾಧಿಕಾರಿಗಳು, ಪೌರನೌಕರರು ಅಭಿನಂದಿಸಿ ರಾಷ್ಟ್ರ ಮಟ್ಟದಲ್ಲಿಯೂ ಭಾಗವಹಿಸಿ ಪ್ರಥಮ ಸ್ಥಾನಗಳಿಸಲೆಂದು ಹಾರೈಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.