ಎಸ್. ಮಂಜುನಾಥ್ ಅವಿರೋಧ ಆಯ್ಕೆ
ಮಾಗಡಿ: ತಾಲೂಕಿನ ಕನ್ನಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎಸ್. ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಂತರಮಾತನಾಡಿದ ಅವರು ಕನ್ನಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಜಿಲ್ಲೆಗೆ ಮಾದರಿ ಸಂಘವನ್ನಾಗಿ ಪರಿವರ್ತಿಸಲು ಶಕ್ತಿ ಮೀರಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಅಭಿನಂದನೆ: ಕನ್ನಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಗೋಪಾಲಕೃಷ್ಣ, ನಿರ್ದೇಶಕರಾದ ಹೊಸಳ್ಳಪ್ಪ, ಬೈರೇಗೌಡ, ಉಮೇಶ್, ಕುಮಾರ್, ಸಿದ್ದಲಿಂಗಯ್ಯ, ಕೆ. ಎಚ್. ಹನುಮಂತಯ್ಯ, ಕಾರ್ಯದರ್ಶಿ ಕೆ.ಎಸ್. ಸತೀಶ್, ಮಹದೇವಸ್ವಾಮಿ, ಮೃತ್ಯಂಜಯ, ಪರಮಶಿವಯ್ಯ ಸುರೇಶ್, ಚಂದ್ರಪ್ಪ, ಕೋಮಲ, ಜಯಲಕ್ಷ್ಮಮ್ಮ ಇತರರು ನೂತನ ಅಧ್ಯಕ್ಷ ಎಸ್.ಮಂಜುನಾಥ್ ಅವರನ್ನು ಅಭಿನಂದಿಸಿದರು. ರೇಣುಕಪ್ಪ,ಹರ್ತಿ ಶಿವಲಿಂಗಯ್ಯ, ರವಿ,ಸುರೇಶ್, ಕೆ.ಎಚ್. ಚಂದ್ರಶೇಖರ್, ಗೊರೂರು ಶ್ರೀನಿವಾಸ್, ಗ್ರಾಮಸ್ಥರು ಹಾಜರಿದ್ದರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

