ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಕೆ.ಎನ್.ಎಂ. ರಾಮು ನಿಧನ
ದೊಡ್ಡಬಳ್ಳಾಪುರ: ಇಲ್ಲಿನ ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಕೆ.ಎನ್.ಎಂ. ರಾಮು ನಿಧನರಾಗಿದ್ದಾರೆ.
ಅವರಿಗೆ 75 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ. ಕಳೆದ 45 ವರ್ಷಗಳಿಂದ ಛಾಯಾಗ್ರಹಣ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ಅವರು ರಾಜ್ಯ ಮಟ್ಟದ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದರು. ಅನೇಕ ಛಾಯಾಗ್ರಹಣ ಸ್ಪರ್ಧೆಗಳಲ್ಲಿ ಬಹುಮಾನಿತರಾಗಿದ್ದರು. ರಾಜ್ಯದ ಅನೇಕ ನಿಯತಕಾಲಿಕಗಳು, ಕನ್ನಡ ಮತ್ತು ತೆಲುಗು ದಿನಪತ್ರಿಕೆಗಳಲ್ಲಿ ಅವರ ಸೃಜನಶೀಲ ಛಾಯಾಚಿತ್ರಗಳು ಪ್ರಕಟಗೊಂಡು ಗಮನ ಸೆಳೆದಿವೆ. ಅದೇ ರೀತಿ ಬರೆಹಗಾರರಾಗಿಯೂ ಗುರುತಿಸಿಕೊಂಡಿದ್ದ ಅವರು, ಮಕ್ಕಳ ಕಥೆ, ಕವನ, ಲೇಖನಗಳನ್ನು ಬರೆಯುವ ಮೂಲಕ ಅನೇಕ ಯುವ ಬರೆಹಗಾರರಿಗೆ ಸ್ಫೂರ್ತಿ ನೀಡಿದ್ದರು.
ಸ್ಥಳೀಯ ಸಮಸ್ಯೆಗಳ ಕುರಿತು ದಿನಪತ್ರಿಕೆಗಳಲ್ಲಿ ಬರೆಯುವ ಮೂಲಕ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹರಿಸುವಲ್ಲಿ ಗಣನೀಯ ಪಾತ್ರ ವಹಿಸಿದ್ದರು. ಕೇವಲ 6ನೇ ತರಗತಿ ಓದಿದ್ದ ಅವರು, ಉತ್ತಮ ಬರೆಹ ಸಾಮರ್ಥ್ಯ ಹೊಂದಿದ್ದು ಇತರರಿಗೆ ಮಾದರಿಯಾಗಿದ್ದರು. ಅವರು ಕೆಲ ವರ್ಷಗಳಿಂದ ಅನಾರೋಗ್ಯಕ್ಕೀಡಾಗಿದ್ದರು.
ಸಂತಾಪ: ಮೃತರ ನಿಧನಕ್ಕೆ ಇಲ್ಲಿನ ಅನೇಕ ಸಂಘ-ಸಂಸ್ಥೆಗಳು ಕಂಬನಿ ಮಿಡಿದಿವೆ. ಕನ್ನಡ ಜಾಗೃತ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಭುವನೇಶ್ವರಿ ಕನ್ನಡ ಸಂಘ, ಯದ್ಲಳ್ಳಿ ಪಾಪಣ್ಣನವರ ಭಾಗವತ ಯಕ್ಷಗಾನ ಮಂಡಲಿ, ಪತ್ರಕರ್ತರ ಸಂಘ, ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಫೋಟೋ ಮತ್ತು ವೀಡಿಯೋ ಛಾಯಾಗ್ರಾಹಕರ ಸಂಘ, ಸಂಸ್ಕೃತಿ ಟ್ರಸ್ಟ್ ಸೇರಿದಂತೆ ಅನೇಕ ಸಂಘಟನೆಗಳು ಸಂತಾಪ ಸೂಚಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

