ಬೆಂಗಳೂರು ಗ್ರಾಮಾಂತರ

11ರಿಂದ ಎಲ್ಲ ಸರಕು ಸಾಗಣೆ ವಾಹನ ಸಂಚಾರ ನಿಲುಗಡೆ: ಷಣ್ಮುಗಪ್ಪ

Published On :

ದೇವನಹಳ್ಳಿ: ರಾಜ್ಯದಲ್ಲಿ ಈಗಾಗಲೇ ಮರಳು ಲಾರಿಗಳ ಮಾಲೀಕರು ಹಾಗೂ ಚಾಲಕರು ಕಳೆದ 14 ದಿನಗಳಿಂದ  ಮುಷ್ಕರ ನಡೆಸುತ್ತಿದ್ದು ಕಾಂಗ್ರೆಸ್ ಸರ್ಕಾರಕ್ಕೆ ಕಿವಿ ಕಣ್ಣು ಎರಡೂ ಇಲ್ಲದಂತಾಗಿದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದರು.
ಇಲ್ಲಿನ ದೇವನಹಳ್ಳಿ ಬೈಪಾಸ್ ರಸ್ತೆಯ ಬಳಿ ನೂರಕ್ಕೂ ಹೆಚ್ಚು ಮರಳು ಲಾರಿಗಳು ನಿಂತಿದ್ದು ಚಾಲಕರು ಮತ್ತು ಮಾಲೀಕರು ಮುಷ್ಕರದಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ  ಸ್ಥಳಕ್ಕೆ ಆಗಮಿಸಿದ ಷಣ್ಮುಗಪ್ಪ ಅವರು ತಮ್ಮ
ರಾಜ್ಯ ಸರ್ಕಾರದ ಮರಳು ನೀತಿಯಿಂದಾಗಿ ಮರಳು ಸಾಗಣೆಗೆ ಅನೇಕ ಇಲಾಖೆ ಅಧಿಕಾರಿಗಳು ಅಲ್ಲದೆ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ. ನಾವು ಯಾವ ತಪ್ಪು ಮಾಡಿದ್ದೇವೆ ಅಂತ ಜೈಲಿಗೆ ಕಳುಹಿಸುತ್ತೀರಿ, ಚಾಲಕರಿಗೆ ಮತ್ತು ಮಾಲೀಕರಿಗೆ ರಕ್ಷಣೆಯೇ ಇಲ್ಲವಾಗಿದೆ. ಹಿಂದೆ ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದ ಸಂಧರ್ಭದಲ್ಲಿ ಮರಳು ಲಾರಿ ಮಾಲೀಕರಿಗೆ ಯಾವುದೇ
ತೊಂದರೆ ಇರಲಿಲ್ಲ. ಈಗ ಕಾಂಗ್ರೆಸ್ ಸರ್ಕಾರ ಬಂದಮೇಲೆ ಎಲ್ಲ ಅಧಿಕಾರಿಗಳಿಂದ ತೊಂದರೆಯಾಗಿದೆ. ಈ ಮುಷ್ಕರದಿಂದಾಗಿ ಸಾವಿರಾರು ಕುಟುಂಬಗಳು ಬೀದಿಪಾಲಾಗಿವೆ. ಜೊತೆಗೆ ಎಲ್ಲ  ಸರ್ಕಾರಿ ಮತ್ತು ಖಾಸಗೀ ಕಟ್ಟಡಗಳ ಕಾಮಗಾರಿಗಳು ನಿಂತೇಹೋಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಎಲ್ಲ ಮರಳು ಸಾಗಣೆ ಮಾಡುವ ಲಾರಿಗಳಿಗೆ ಮಾಸಿಕ ಪರ್ಮಿಟ್ ಕೊಡಲೇ ಬೇಕು. ಜೊತೆಗೆ ಅಧಿಕಾರಿಗಳ ಕಿರುಕುಳ ತಪ್ಪಬೇಕು ಎಂದರು.
ನಮ್ಮ ಬೇಡಿಕೆಗಳನ್ನು ಸರ್ಕಾರ ಪರಿಗಣಿಸದೇ ಇದ್ದಲ್ಲಿ ಜ.11 ಮಧ್ಯರಾತ್ರಿಯಿಂದ ಎಲ್ಲ ಸರಕು ಸಾಗಣೆ ಲಾರಿಗಳು ಮ್ಯಾಕ್ಸಿ ಕ್ಯಾಬ್‌ಗಳು ಅಲ್ಲದೆ ಹೊರ ರಾಜ್ಯಗಳಿಂದ ಬರುವ ಎಲ್ಲ ಲಾರಿಗಳ ಸಂಚಾರ ನಿಲ್ಲಲಿದೆ. ಹೊರ ರಾಜ್ಯದ ಲಾರಿ ಮಾಲೀಕರ ಸಂಘದವರು  ನಮಗೆ ಬೆಂಬಲ ಸೂಚಿಸಿದ್ದರೆ ಎಂದು ಷಣ್ಮುಖಪ್ಪ ತಿಳಿಸಿ ಜ.11 ರಿಂದ ಸಾರ್ವಜನಿಕರಿಗೆ ಆಗುವ ತೊಂದರೆಗೆ ಸರ್ಕಾರವೇ ಹೊಣೆಯಾಗಿರುತ್ತದೆ ಎಂದರು.
ಪ್ರತಿಭಟನಾ ಸಭೆಯಲ್ಲಿ ರಾಜ್ಯ ಸಂಘದ ಮುಖಂಡರಾದ ಕೆಂಪರಾಜು, ನಾರಾಯಣಪ್ಪ, ದೇವನಹಳ್ಳಿ ತಾಲೂಕು ಲಾರಿ ಮಾಲೀಕರ ಸಂಘದ ಅಧ್ಯಕ್ಷ ನಾಗೇಶ್ ಹಾಗೂ ಮನಾವರ್ ಪಾಷ, ಪುರಸಭಾ ಸದಸ್ಯ ಗೋಪಾಲಕೃಷ್ಣ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.