ರಾಷ್ಟ್ರೀಯ ಭಾವೈಕ್ಯತೆ, ಕೋಮು ಸಾಮರಸ್ಯ ನಾಣ್ಯದ ಎರಡು ಮುಖಗಳಂತೆ
ಕ.ಪ್ರ. ವಾರ್ತೆ, ಆನೇಕಲ್ಲು, ಜ.5
ಭಾರತ ದೇಶ ಹಲವು ಧರ್ಮಗಳು, ನೂರು ಭಾಷೆಗಳು ಹಾಗೂ ಸಹಸ್ರ ಜಾತಿಗಳಿಂದ ಕೂಡಿದೆ. ಎಲ್ಲ ಧರ್ಮೀಯರೂ ನನ್ನ ದೇಶ ನನ್ನ ಭೂಮಿ ಎಂಬ ಪವಿತ್ರ ಭಾವನೆಯಿಂದ ಸಂವಿಧಾನದ ಆಶಯವನ್ನು ಎತ್ತಿಹಿಡಿಯಬೇಕೆಂದು ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖಾ ನಿರ್ದೇಶಕ ವಿಕಾಸ್ ಕುಮಾರ್ ವಿಕಾಸ್ ಕರೆ ನೀಡಿದ್ದಾರೆ.
ಅವರು ಚಂದಾಪುರದ ಚಿನ್ಮಯ ಸೇವಾ ಸಂಸ್ಥೆ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸಾಮರಸ್ಯ ಕಾಪಾಡುವಲ್ಲಿ ಯುವ ಜನರ ಪಾತ್ರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ ಆರೋಗ್ಯ ಮತ್ತು ಶಿಕ್ಷಣವನ್ನು ಸರ್ಕಾರ ನೀಡಿದರೇ ಸಂಸ್ಕಾರ ಮತ್ತು ಸಂಪ್ರದಾಯ ಪಾಲನೆಯನ್ನು ತಾನು ನಂಬಿರುವ ಧರ್ಮ ನೀಡುತ್ತದೆ ಎಂದರು. ಮಾಜಿ ಸಂಸದ ಹಾಗೂ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಮಾತನಾಡಿ ಸ್ವತಂತ್ರ ಬಂದು 6 ದಶಕಗಳೇ ಕಳೆದರೂ ಸಮಾನತೆಯನ್ನು ಸಾಧಿಸಲಾಗಲಿಲ್ಲ ಎಂದರು. ನಿವೃತ್ತ ಡಿವೈಎಸ್ಪಿ ಶಂಕರಪ್ಪ ಮಾತನಾಡಿದರು.
ನೆಹರು ಯುವ ಕೇಂದ್ರದ ನಿರ್ದೇಶಕ ಆರ್. ನಟರಾಜನ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ನಾರಾಯಣಸ್ವಾಮಿ, ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಸಿ. ರಾಮಚಂದ್ರ, ಡಾ. ರಮೇಶ್, ಶ್ರೀನಿವಾಸ ಪ್ರಸಾದ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಚಿನ್ಮಯ ಸೇವಾ ಸಂಸ್ಥಾಪಕ ಡಾ. ಚಿನ್ನಪ್ಪ ವೈ ಚಿಕ್ಕಾಗಡೆ, ಜಿ.ಇ. ನಾರಾಯಣಗೌಡ, ಪತ್ರಕರ್ತರ ಸಂಘದ ಅಧ್ಯಕ್ಷ ರವಿಶಾಸ್ತ್ರಿ, ಪದವೀಧರ ಸಂಘದ ಅಧ್ಯಕ್ಷ ಆನಂದ್ ರಾಷ್ಟ್ರೀಯ ಭಾವೈಕ್ಯತೆ ಹಾಗೂ ಕೋಮು ಸೌಹಾರ್ದತೆ ಬಗ್ಗೆ ಯುವ ಜನತೆಗೆ ಪ್ರಮಾಣ ವಚನ ಬೋಧಿಸಿದರು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಹೇಶ್ ಸ್ವಾಗತ, ನಿರೂಪಣೆ ಮತ್ತು ವಂದನೆ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

