ಎತ್ತಿನಹೊಳೆ ಯೋಜನೆಯಡಿ ನೆಲಮಂಗಲ ತಾಲೂಕಿಗೆ ನೀರು ಕೊಡಿ
ನೆಲಮಂಗಲ: ತಾಲೂಕು ಸಂಪೂರ್ಣ ಮಳೆ ಆಧಾರಿತ ಪ್ರದೇಶವಾಗಿದ್ದು ಕುಡಿಯುವ ನೀರಿಗೆ ಕೊಳವೆ ಬಾವಿಗಳೆ ಆಶ್ರಯವೇ ಮೂಲ ಆಧಾರವಾಗಿದೆ. ಈಗ ಎತ್ತಿನ ಹೊಳೆ ಯೋಜನೆಯಡಿ ನೀರನ್ನು ತಾಲೂಕಿಗೂ ನೀಡುವಂತೆ ಒತ್ತಾಯಿಸಲು ತಾಲೂಕಿನ ಸೋಂಪುರ ಹೋಬಳಿ ಶಾಶ್ವತ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಬೆಟ್ಟಸ್ವಾಮಿಗೌಡ ಒತ್ತಾಯಿಸಿದರು.
ಅವರು ಸೋಮವಾರ ದಾಬಸ್ಪೇಟೆಯ ಖಾಸಗಿ ಹೊಟೇಲ್ನಲ್ಲಿ ತಾಲೂಕಿನ ಸೋಂಪುರ ಹೋಬಳಿ ಶಾಶ್ವತ ಕುಡಿಯುವ ನೀರು ಮತ್ತು ಅಂತರ್ಜಲ ಅಭಿವೃದ್ದಿ ಸಮಿತಿಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಾಲ್ಲೂಕಿನ ಸೋಂಪುರ ಹೋಬಳಿಯಲ್ಲಿ 52 ಕೆರೆಗಳಿದ್ದು 2286 ಎಕ್ಕರೆ ಜಮೀನು ನೀರಾವರಿ ಪ್ರದೇಶವಾಗಬೇಕು. ಆದರೆ ಇತ್ತೀಚೆಗೆ ಮಳೆ ಕಡಿಮೆಯಾಗಿರುವುದರಿಂದ ಹೋಬಳಿಯ ಯಾವುದೇ ಕೆರೆ
ತುಂಬುತ್ತಿಲ್ಲ. ಇದರಿಂದ ಕುಡಿಯುವ ನೀರಿಗೂ ಬರ ಬಂದಿದೆ. ಇನ್ನು ವ್ಯವಸಾಯವನ್ನು ರೈತರು ಮರೆತು ಬಿಡುವಂತಾಗಿದೆ ಎಂದು ಹೋಬಳಿಯ ನೀರಿನ ಕುರಿತಾದ ಮಾಹಿತಿ ನೀಡಿದರು.
ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಬತ್ತಿಹೋಗಿವೆ. ನೀರು ಸಿಕ್ಕರೂ ಅದು 1500 ಅಡಿ ಆಳದಲ್ಲಿ ಸಿಗುತ್ತದೆ. ಅದು ಕೆಲ ದಿನಗಳು ಮಾತ್ರ ನೀರು ಹೆಚ್ಚು ಬಂದರೆ ಹೆಚ್ಚು ವಿಪರ್ಯಾಸವೆಂದರೆ ಹೋಬಳಿಯಲ್ಲಿ ಒಂದೆರಡು ಎಕರೆ ಜಮೀನಿರುವ ರೈತರೂ ಕನಿಷ್ಠವೆಂದರೂ ನಾಲ್ಕೈದು ಕೊಳವೆ ಕೊರೆಸಿ ಹಣ ಹಾಳು ಮಾಡಿಕೊಂಡು ಇಂದು ಕಾರ್ಖಾನೆಗಳಲ್ಲಿ ಎರಡು ಮೂರು ಸಾವಿರ ಸಂಬಳಕ್ಕೆ ಹೋಗುತ್ತಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದರೆ ಮುಂದೆ ಇಲ್ಲಿನ ಜನ ಕುಡಿಯುವ ನೀರಿಗಾಗಿ ಹತ್ತಾರು ಮೈಲಿ ಹೋಗಬೇಕು. ಈಗಾಗಲೇ ಇಲ್ಲಿನ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಕುಡಿಯುವ ನೀರಿಗಾಗಿ ಬೇರೆಡೆಯಿಂದ ಟ್ರ್ಯಾಕ್ಟರ್ ಮೂಲಕ ನೀರು ಸರಬರಾಜು ಮಾಡುತ್ತಿದ್ದಾರೆ. ಪರಿಸ್ಥಿತಿ ಅರಿವು ಸರ್ಕಾರಕ್ಕೆ ಇದ್ದರೂ ಶಾಶ್ವತ ನೀರು ಒದಗಿಸಲು ಮುಂದಾಗದಿರುವುದು ವಿಪರ್ಯಾಸವಾಗಿದೆ ಎಂದರು.
ಸ್ಥಳೀಯ ಸಂಸದರೂ ಶಾಸಕರು ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಪಕ್ಷ ಭೇದ ಮರೆತು ಶಾಶ್ವತ ನೀರಿಗಾಗಿ ಹೋರಾಟ ನಡೆಸಲು ಮುಂದಾಗಬೇಕು ಎಂದು ಕರೆ ನೀಡಿದರು. ಜ.25ರಂದು ಸೋಂಪುರದಲ್ಲಿ ಸಾರ್ವಜನಿಕ ಸಭೆಯನ್ನು ನಡೆಸಲಾಗುವುದಾಗಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಗೌರವಾಧ್ಯಕ್ಷ ಎಸ್.ರುದ್ರಯ್ಯ, ಉಪಾಧ್ಯಕ್ಷರಾದ ಶ್ರೀನಿವಾಸಯ್ಯ, ಉಮಾಶಂಕರ್, ಗಂಗಪ್ಪ, ಗೋಪಾಲಯ್ಯ, ಕಾರ್ಯದರ್ಶಿ ಲೋಕೇಶ್, ರಾಮಯ್ಯ, ನಟರಾಜು, ಮಂಗಳಮ್ಮ, ಸದಸ್ಯರಾದ ಹನುಮಂತರಾಜು, ಜಯರಾಜು, ನಾರಾಯಣಪ್ಪ, ನಂಜುಂಡಯ್ಯ ಮತ್ತು ಗೊಲ್ಲರಹಟ್ಟಿ ಗಂಗಣ್ಣ, ರಾಮಾಂಜನಯ್ಯ, ಶ್ರೀನಿವಾಸಮೂರ್ತಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

