ಬೆಂಗಳೂರು ಗ್ರಾಮಾಂತರ

ಕಾನೂನು ಅರಿವು ಅಪರಾಧ ಚಟುವಟಿಕೆಗಳ ಕಡಿವಾಣಕ್ಕೆ ಸಹಕಾರಿ: ಹರೀಂದ್ರ ಅಭಿಮತ

Published On :

ಸೂಲಿಬೆಲೆ: ಗ್ರಾಮೀಣ ಭಾಗದಲ್ಲಿರುವ ಜನರು ಕಾಲ ಕಾಲಕ್ಕೆ ಬದಲಾಗುತ್ತಿರುವ ಕಾನೂನುಗಳ ಬಗ್ಗೆ ಸೂಕ್ತ ತಿಳುವಳಿಕೆಯನ್ನು ಹೊಂದಿದರೇ ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಜನರಿಗೆ ಕಾನೂನು ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಹೊಸಕೋಟೆ ತಾ.ನಲ್ಲಿ 7 ದಿನಗಳ ಕಾಲ ಕಾನೂನು ಸಾಕ್ಷಾರತ ಸಪ್ತಾಹ ರಥ ಸಂಚರಿಸಲಿದೆ ಎಂದು ಹೊಸಕೋಟೆ ತಾ.ವಕೀಲರ ಸಂಘದ ಅಧ್ಯಕ್ಷ ಹರೀಂದ್ರ  ಹೇಳಿದ್ದಾರೆ.
ಸೂಲಿಬೆಲೆ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಹೊಸಕೋಟೆ ವಕೀಲರ ಸಂಘ, ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ ಕಾನೂನು ಅರಿವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸೂ.ರಂ ರಾಮಯ್ಯ ಮಾತನಾಡಿ, ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಅಪರಾಧ ಕೃತ್ಯಗಳು ಹೆಚ್ಚಳವಾಗುತ್ತಿದ್ದು, ಯುವ ಸಮೂಹ ಇಂಥ ಚಟುವಟಿಕೆಯಲ್ಲಿ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಭಾರತ ಸಂಸ್ಕೃತ ಮತ್ತು ಸಂಪ್ರಾದಾಯ ಬದ್ಧ ರಾಷ್ಟ್ರವಾಗಿದ್ದು, ಯುವಕರು ಹಾದಿ ತಪ್ಪದೇ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಬೇಕು ಎಂದರು. ಹಿರಿಯ ವಕೀಲ ರಾಮಚಂದ್ರಪ್ಪ ಮಾತನಾಡಿ,ಮುರ್ಖರ ಪಟ್ಟಿಗೆ (ಟಿವಿ)ಯಿಂದ ಯುವ ಸಮೂಹ ದೂರವಿರಬೇಕು. ಟಿಆರ್ಪಿ ಹಾಗೂ ಸ್ವಾರ್ಥ ಹಿತಕ್ಕಾಗಿ ವಿಕೃತ ಮನೋಭಾವವನ್ನು ಸೃಷ್ಟಿಸುವಂತ ಕೆಟ್ಟ ಕಾರ್ಯಕ್ರಮಗಳು ಮೂರ್ಖರ ಪಟ್ಟಿಗೆಯಿಂದ ಪ್ರಸಾರವಾಗುತ್ತಿದ್ದು, ಇದರಿಂದ ಸಮಾಜ ಉದ್ಧಾರವಾಗುವದಕ್ಕಿಂತ ಹಾಳಾಗುತ್ತಿದೆ. ಇದರ ಬಗ್ಗೆ ಯುವ ಸಮೂಹ ಎಚ್ಚರಿಕೆ ವಹಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಚಂದ್ರಶೇಖರ್, ಕಾನೂನು ಅರಿವು ಶಿಬಿರದಲ್ಲಿ ಸಿಕ್ಕ ಅಮೂಲ್ಯ ವಿಷಯಗಳನ್ನು ವಿದ್ಯಾರ್ಥಿಗಳು ಅರಿತು ಅಪರಾಧ ಚಟುವಟಿಕೆಗಳಿಂದ ದೂರವಿರಬೇಕು ಎಂದರು. ವಕೀಲೆ ಜೆ.ಶಾಂತ ವಿವಾಹ ನೋಂದಾವಣಿ, ಬಿ.ಎಂ ಪ್ರಭಾಕರ್ ಜನನ ಮತ್ತು ಮರಣ ಪ್ರಮಾಣದ ಮಹತ್ವ, ಸರ್ಕಾರಿ ಸಹಾಯಕ ಅಭಿಯೋಜಕ ವೆಂಕಟಗಿರಿಯ್ಯ ಲೈಂಗಿಕ ದೌಜನ್ಯ ವಿಷಯದ ಬಗ್ಗೆ ಮಾಹಿತಿ ನೀಡಿದರು. ವಕೀಲ ಸಂಘದ ಪದಾಧಿಕಾರಿಗಳು, ಕಾಲೇಜು ಅಧ್ಯಾಪಕ ವರ್ಗದವರು ಹಾಜರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.