ಬೆಂಗಳೂರು ಗ್ರಾಮಾಂತರ

ಸಾವಿತ್ರಿ ಬಾಯಿ ಫುಲೆಗೆ ಕೃತಜ್ಞತೆ ಸಲ್ಲಲೇಬೇಕು: ಬಂಜಗೆರೆ ಜಯಪ್ರಕಾಶ್

Published On :

ಕನಕಪುರ: ಶೂದ್ರಾತಿ ಶೂದ್ರರ ನಾಲಿಗೆಯ ಮೇಲೆ ಮೊಟ್ಟ ಮೊದಲು  ಅ ಕಾರ ಬರೆದವರು ಮಾತೆ ಸಾವಿತ್ರಿ ಬಾಯಿ ಫುಲೆ. ಅವರ ಜನ್ಮದಿನವನ್ನು ನಾವೆಲ್ಲರೂ ಕೃತಜ್ಞತೆಯಿಂದ ಸ್ಮರಿಸಬೇಕು ಎಂದು ಚಿಂತಕ  ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದ್ದಾರೆ.
 ಅವರು ಕನಕಪುರದ ಧಮ್ಮದೀವಿಗೆ ಟ್ರಸ್ಟ್ ವತಿಯಿಂದ ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸಾವಿತ್ರಿ ಬಾಯಿ ಫುಲೆ ಜನ್ಮದಿನಾಚರಣೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸಮಾರಂಭದ ದಿವ್ಯಸಾನ್ನಿಧ್ಯ ವನ್ನು  ಬೀದರ್‌ನ ಧಮ್ಮದರ್ಶನ ಭೂಮಿಯ ಬಂತೇಜಿ ವರಜ್ಯೋತಿ ಯವರು ವಹಿಸಿ ವಹಿಸಿದ್ದರು.
ಬಿಎಸ್ಪಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಮಾತನಾಡಿ ಸಾವಿತ್ರಿಬಾಯಿಫುಲೆಯವರ ಜನ್ಮದಿನವನ್ನು ಸರ್ಕಾರ ರಾಷ್ಟ್ರೀಯ ಶಿಕ್ಷಕಿಯರ ದಿನಾಚರಣೆಯನ್ನಾಗಿ ಆಚರಿಸಬೇಕು ಎಂದು ಆಗ್ರಹಿಸಿದರು.
ಕಾರ್ಯಕ್ರಮದ ಅಂಗವಾಗಿ ಬೇಬಿ ಖಯಾದು 8ನೇ ಜನ್ಮದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರೋಗ್ಯಅಧೀಕ್ಷಕ ಡಾ.ವಿಜಯನಾರಸಿಂಹ, ನೀನಾಸಂ ಕಲಾವಿದ ಎಂ.ಸಿ.ನಾಗರಾಜು, ಸಂಪಂಗಿರಾಮಯ್ಯ, ಬಸವರಾಜು, ಶಿವಮಾದು, ಕೃಷ್ಣಪ್ಪ, ಮುನಿರಾಜು ಪಾಲ್ಗೊಂಡಿದ್ದರು.  ಸಂಗೀತ ಜಂಗಮ ಹನಸೋಗಿ ಸೋಮಶೇಖರ್, ಜಾನಪದ ಗಾಯಕ ಜೋಗಿಲ ಸಿದ್ಧರಾಜು ತಂಡದವರಿಂದ ಗೀತಗಾಯನ ಮತ್ತು ಕ್ರಾಂತಿಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.