ಬೆಂಗಳೂರು ಗ್ರಾಮಾಂತರ

ಮೌಢ್ಯ ಬಿತ್ತಿದರೆ ಬೆನ್ನಿಹಿನ್ ವಿರುದ್ಧ ಪ್ರತಿಭಟನೆ: ಎಚ್ಚರಿಕೆ

Published On :

ದೊಡ್ಡಬಳ್ಳಾಪುರ: ಭಾರತಕ್ಕೆ ಭೇಟಿ ನೀಡುತ್ತಿರುವ ಬೆನ್ನಿಹಿನ್ ಬಂದು ಹೋಗುವುದನ್ನು ಹೊರತು ಪಡಿಸಿ ಮಾಂತ್ರಿಕ ಶಕ್ತಿಯ ಮೌಢ್ಯ ಬಿತ್ತುವ ಪ್ರಯತ್ನ ಮಾಡುವುದು ಖಂಡನೀಯ. ವೈಚಾರಿಕ ಪ್ರಜ್ಞೆಯುಳ್ಳ ಎಲ್ಲರೂ ಪವಾಡ ಪುರುಷರ ಚಮತ್ಕಾರಗಳನ್ನು ವಿರೋಧಿಸುತ್ತಾರೆ ಎಂದು ಪವಾಡ ಭಂಜಕ ಹುಲಿಕಲ್ ನಟರಾಜ್ ಹೇಳಿದ್ದಾರೆ.
ಆತ ಇಲ್ಲಿ ಯಾವುದೇ ಚಮತ್ಕಾರಗಳನ್ನು ನಡೆಸದೇ ಇರುವುದೇ ಒಳಿತು. ಅದರ ಹೊರತಾಗಿ ಯಾವುದೇ ಬಗೆಯ ರೋಗ ಪರಿಹಾರ ನೀಡುತ್ತೇನೆ ಎಂದು ಹೇಳಿಕೊಂಡರೆ ಅದನ್ನು ನಾವು ಬಹಿರಂಗವಾಗಿ ವಿರೋಧಿಸುತ್ತಿವೆ. ಹಿಂದೆ ಆತ ಬಂದಿದ್ದಾಗಲೂ ಎಷ್ಟೋ ಮಂದಿ ಮೋಸ ಹೋಗಿದ್ದರು. ಅಸಹಾಯಕರು ಆತನನ್ನು ಸ್ಪರ್ಶಿಸಲು ಇಚ್ಛಿಸಿ ಸಭಾಂಗಣಕ್ಕೆ ಪ್ರಯತ್ನಪಟ್ಟರೂ ತಲುಪಲು ಸಾಧ್ಯವಾಗಲಿಲ್ಲ. ಬದಲಾಗಿ ಜನಕ್ಕೆ ದೊರೆತಿದ್ದು ವಿಕಲರಂತೆ ನಟಿಸುತ್ತಿದ್ದ ರೋಗದಿಂದ ಬಳಲುತ್ತಿದ್ದವರಂತೆ ಕಾಣುತ್ತಿದ್ದ ಸಂಘಟಕರೇ ಸಿದ್ಧಪಡಿಸಿಕೊಂಡು ಬಂದಿದ್ದ ಹುಸಿ ರೋಗಿಗಳು. ಬೆನ್ನಿಹಿನ್‌ಗೆ ಆ ಬಗೆಯ ದೈವೀ ಶಕ್ತಿ ಇದ್ದರೆ ಬೆಂಗಳೂರಿನ ಕಿದ್ವಾಯಿ, ಕ್ಯಾನ್ಸರ್ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗ ಗುಣಪಡಿಸಲಿ. ಕಣ್ಣು ಕಾಣದವರ ಅಂದತ್ವ ನೀಗಿಸಲಿ. ಅದನ್ನು ಬಿಟ್ಟು ಬಿಟ್ಟಿ ಪ್ರಚಾರ ಬಯಸಿ ಬಂದರೆ ಪ್ರತಿಭಟನೆ ಖಚಿತ ಎಂದಿದ್ದಾರೆ.
ಬೆನ್ನಿಹಿನ್ ಧರ್ಮ ಪ್ರಚಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ ಧರ್ಮದ ಹೆಸರಿನಲ್ಲಿ ಮೌಢ್ಯದ ಆಡಂಬರ ನಡೆಸಿದರೆ ಖಂಡನೀಯ. ಬೆನ್ನಿಹಿನ್ ಬರುವ ಜಾಗಕ್ಕೆ ನಾವೇ ರೋಗಿಗಳನ್ನು ಕರೆದುಕೊಂಡು ಹೋಗುತ್ತೇವೆ. ಸಾಧ್ಯವಿದ್ದರೆ ರೋಗನಿವಾರಿಸಲಿ. ಬೆನ್ನಿ ಕಾರ್ಯಕ್ರಮ ವಿರುದ್ಧ ವಿಕಲಚೇತನರ ಬೃಹತ್ ಸಂಘಟನೆ ನಡೆಸಿ ರಾಜ್ಯ ಎಲ್ಲರೂ ಪ್ರತಿಭಟಿಸಬೇಕಾದೀತು ಎಂದು ಅವರು ಹೇಳಿಕೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.