ಮಹದೇಶ್ವರ ರಕ್ಷಿತಾರಣ್ಯದ ಒತ್ತುವರಿ ತೆರವುಗೊಳಿಸಲು ಸರ್ವೆ ಆರಂಭ
ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸೇರಿದ ಮಹದೇಶ್ವರ ರಕ್ಷಿತಾರಣ್ಯದ ಒತ್ತುವರಿ ಜಮೀನಿನ ತೆರವುಗೊಳಿಸುವ ಸಂಬಂಧ ಜಂಟಿ ಸರ್ವೆ ಕಾರ್ಯ ಪ್ರಾರಂಭವಾಗಿದ್ದು ಎರಡು ಮೂರು ದಿನಗಳಲ್ಲಿ ಗ್ರಾಮ ಹಾಗೂ ಗ್ರಾಮದ ಜಮೀನುಗಳ ಗಡಿ ಗುರುತಿಸುವ ಕಾರ್ಯ ಪೂರ್ಣಗೊಳಿಸುವುದು ಎಂದು ವಲಯ ಅರಣ್ಯಧಿಕಾರಿ ನಾಗಭೂಷಣ್ ತಿಳಿಸಿದರು.
ತಮ್ಮನಾಯಕನಹಳ್ಳಿ ಗ್ರಾಮದ ಸರ್ವೆ ನಂ.80,81,95,96 ಜಮೀನಿನ ಜೊತೆಗೆ ಮಜರೆ ಗ್ರಾಮವಾದ ಚೂಡಹಳ್ಳಿ ಬಳಿಯ ಜಮೀನನ್ನು ಅಳತೆ ಮಾಡಲಾಗುತ್ತಿದೆ. ಬಗ್ಗನ ದೊಡ್ಡಿಯ ಸರ್ವೆ ನಂ.96ರ ಜಮೀನಿನ ಅಳತೆ ಮಾಡಲಾಗುತ್ತಿದೆ. ಹಳ್ಳಿಯ ಹಾಗೂ ಪಟ್ಟಾ ಜಮೀನು ಅಳತೆ ಮಾಡಿ ನಿಗದಿಯಾದ ಉಳಿಕೆ ಜಮೀನು ಅರಣ್ಯ ಜಮೀನಾಗುತ್ತದೆ. ಗ್ರಾಮಸ್ಥರು ಸಹಕಾರ ನೀಡಬೇಕೆಂದು ಕೋರಿದರು.
ಆತ್ಮಹತ್ಯೆಯೇ ದಾರಿ: ಕಳೆದ ಕೆಲ ತಲೆಮಾರುಗಳಿಂದ ನಾವು ಈ ಜಮೀನಿನಲ್ಲಿ ಬದುಕು ಕಟ್ಟಿಕೊಂಡಿದ್ದೇವೆ. ಸರ್ಕಾರ ಗೋಮಾಳ ಜಮೀನು ಎಂದು ಗುರುತಿಸಿ ಹಕ್ಕುಪತ್ರ ನೀಡಿದೆ. ಅರಣ್ಯ ಇಲಾಖೆಯವರು ಒಕ್ಕಲೆಬ್ಬಿಸುವ ತಂತ್ರ ಮಾಡಿದರೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಗ್ರಾಮಸ್ತರು ತಮ್ಮ ನಿರ್ಧಾರವನ್ನು ತಿಳಿಸಿದರು. ಮಹಿಳೆಯರು ಸಹಾ ಸೀಮೆ ಎಣ್ಣೆ ಸುರಿದುಕೊಳ್ಳುವುದಾಗಿ ತಿಳಿಸಿ ವಿಷ ಸೇವಿಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಧರಣಿ ಕುಳಿತರು.
ಸಂಧಾನ: ಡಿವೈಎಸ್ಪಿ ಬಲರಾಮೇಗೌಡ ಹಾಗೂ ವೃತ್ತ ನಿರೀಕ್ಷಕ ಕಿಶೋರ್ ಅವರು ಧರಣಿ ನಿರತರ ಮನವೊಲಿಸುವ ಪ್ರಯತ್ನ ಮಾಡಿ ನ್ಯಾಯ ಬದ್ಧ ಹೋರಾಟಕ್ಕೆ ಕಾನೂನಿನ ನೆರವು ಪಡೆಯಿರಿ. ಧರಣಿಯಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು. ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಗ ಮಾಡಿಕೊಳ್ಳಲಾಯಿತು. ಸ್ಥಳಕ್ಕೆ ಆಗಮಿಸಿದ ಶಾಸಕ ಬಿ. ಶಿವಣ್ಣ ಅಧಿಕಾರಿಗಳು ಹಾಗೂ ಗ್ರಾಮಸ್ಥರ ಜೊತೆ ಪ್ರತ್ಯೇಕ ಮಾತುಕತೆ ನಡೆಸಿ ಮೊದಲು ಗ್ರಾಮದ ಎಲ್ಲೆ ಹಾಗೂ ಜಮೀನಿನ ಎಲ್ಲೆಯನ್ನು ಕ್ರಮ ಬದ್ಧಗೊಳಿಸಿ ನಂತರ ಅರಣ್ಯ ಜಮೀನಿಗೆ ಬೇಲಿ ಹಾಕಿಕೊಳ್ಳಿ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

