ಬೆಂಗಳೂರು ಗ್ರಾಮಾಂತರ

ಗಂಜಾರ್ಲಹಳ್ಳಿ ದಿನ್ನೆ ಗ್ರಾಮದಲ್ಲಿ ಸ್ತ್ರೀ ಶಕ್ತಿ ಮಹಿಳೆಯರಿಂದ ಶ್ರಮದಾನ

Published On :

ಸೂಲಿಬೆಲೆ: ಸಂಪೂರ್ಣ ಸ್ವಚ್ಛತೆಯನ್ನು ಸಾಧಿಸಲು ಗ್ರಾಪಂಗಳನ್ನು ನಂಬಿ ಕುಳಿತರೇ ಸಾಲದು. ಸಮಾಜದ ಪ್ರಗತಿಗೆ ಸ್ತ್ರೀಶಕ್ತಿ ಮಹಿಳೆಯರ ಪಾತ್ರ ಮುಖ್ಯ ಎಂಬುದನ್ನು ಅರಿತ ನಂದಗುಡಿ ಹೋಬಳಿಯ  ಸುಮಂಗಲಿ, ಪಾರ್ವತಿ, ಕಾವೇರಿ ಸಂಘದ ಮಹಿಳೆಯರು ಶ್ರಮದಾನದ ಮೂಲಕ ಗ್ರಾಮಸ್ವಚ್ಛತೆಗೆ ಮುಂದಾಗಿ ಇತರರಿಗೆ ಮಾದರಿಯಾಗಿದ್ದಾರೆ.
ಹೊಸಕೋಟೆ ತಾ.ನಂದಗುಡಿ ಹೋಬಳಿಯಲ್ಲಿರುವ ಶಿವನಾಪುರ ಗ್ರಾಮದ ವ್ಯಾಪ್ತಿಗೆ ಸೇರುವ ಗಂಜಾರ್ಲಹಳ್ಳಿ ದಿನ್ನೆ ಗ್ರಾಮದಲ್ಲಿ ಕೊಳಕು ಎದ್ದು ಕಾಣುತಿತ್ತು. ಅಂಗನವಾಡಿ, ಶಾಲೆ, ಮುಖ್ಯ ರಸ್ತೆ ಮೊದಲಾದ ಕಡೆಯಲ್ಲಿ ಚರಂಡಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿದ ಸ್ತ್ರೀಶಕ್ತಿ ಮಹಿಳೆಯರು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಐ.ಆರ್. ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ಬೀದಿಗೆ ಇಳಿದು ಸ್ವಚ್ಛತೆಯಲ್ಲಿ ತೊಡಗಿದರು. ಒಂದೇ ರೀತಿಯ ಸಮವಸ್ತ್ರವನ್ನು ತೊಟ್ಟ ಹತ್ತಾರು ಮಹಿಳೆಯರು ಚರಂಡಿಗೆ ಇಳಿದು ಕೆಸರು ಮೇಲಕ್ಕೆ ಎತ್ತಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಪಂ ಮಾಜಿ ಸದಸ್ಯ ಶಿವನಾಪುರ ಕಲ್ಲಪ್ಪ ಮಹಿಳೆಯರ ಶ್ರಮದಾನವನ್ನು ಮೆಚ್ಚಿ ದೇಶದ ಪ್ರಗತಿಗೆ ಮಹಿಳೆಯರ ಪಾತ್ರ ಮತ್ತು ಸ್ವಾರ್ಥ ರಹಿತ ಚಿಂತನೆ ಬಹುಮುಖ್ಯವಾಗಿದೆ ಎಂದರು. ದಸಸಂ ಜಿಲ್ಲಾ ಸಂಚಾಲಕ ಜಿ.ಕೆ ನಾರಾಯಣಸ್ವಾಮಿ, ಮಹಿಳೆಯರ ಶ್ರಮದಾನ ಗ್ರಾಮಕ್ಕೆ ಮಾದರಿಯಾಗಿದೆ. ಗ್ರಾಪಂ ಅಧಿಕಾರಿಗಳೇ ಗ್ರಾಮ ಸ್ವಚ್ಛತೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಕಾಯದೇ ತಮ್ಮ ಶ್ರಮವೂ ಸಮಾಜಕ್ಕೆ ಇರಲಿ ಎಂದು ಶ್ರಮದಾನಕ್ಕೆ ಇಳಿದಿದ್ದು ಉತ್ತಮ ಬೆಳವಣಿಗೆಯಾಗಿದೆ. ಇವರ ರೀತಿ  ಪ್ರತಿ ಗ್ರಾಮದಲ್ಲಿ ಮಹಿಳೆಯರು ಶ್ರಮದಾನದ ಮೂಲಕ ಗ್ರಾಮಸ್ವಚ್ಛತೆಗೆ ಮುಂದಾಗಿ ಸಮಾಜ ಪ್ರಗತಿಗೆ ಕಾರಣರಾಗಬೇಕು ಎಂದರು. ಅಂಗನವಾಡಿ ಕಾರ್ಯಕರ್ತ ಸುಂದರಮ್ಮ, ಮಹಿಳಾ ಸಂಘದ ಸದಸ್ಯರಾದ ನಾಗಮ್ಮ ನಾರಾಯಣಮ್ಮ,ನಾರಾಯಣಸ್ವಾಮಿ, ನರಸಿಂಹಮೂರ್ತಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.