ವ್ಯಕ್ತಿ ಅಗಲಿದಾಗ ಅವರ ಗುಣ ಗಮನ ಸೆಳೆಯುತ್ತೆ: ಬೈರಮಂಗಲ
ಕ.ಪ್ರ.ವಾರ್ತೆ , ರಾಮನಗರ , ಜ.15
ಇತ್ತೀಚೆಗೆ ನಿಧನ ಹೊಂದಿದ ಶಿಕ್ಷಕ, ಹಾಡುಗಾರ, ಪತ್ರಕರ್ತ ಸಿ.ಎ.ಶಾಂತಕುಮಾರ್ ಅವರಿಗೆ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳಿಂದ ನಗರದ ಸ್ಫೂರ್ತಿ ಭವನದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಸಾಹಿತಿ ಡಾ.ಬೈರಮಂಗಲ ಮಾತನಾಡಿ, ವ್ಯಕ್ತಿಯೊಬ್ಬರು ನಮ್ಮನ್ನು ಅಗಲಿದಾಗ ಅವರ ಗುಣ ವಿಶೇಷಗಳು ಗಮನ ಸೆಳೆಯುತ್ತವೆ, ಅದೇ ವ್ಯಕ್ತಿ ನಮ್ಮೊಡನೆ ಇದ್ದಾಗ ಯಾವುದೇ ವಿಶೇಷತೆ ಕಾಣುವುದಿಲ್ಲ. ನಮ್ಮನ್ನಗಲಿರುವ ಶಾಂತಕುಮಾರ್ ಅವರು ವಿಶಿಷ್ಟ ಪ್ರತಿಭೆ ಹೊಂದಿದ್ದರು ಎಂದು ಹೇಳಿದರು.
ಶಾಂತಕುಮಾರ್ ನನ್ನ ಶಿಷ್ಯನಾಗಿದ್ದ ಸಂದರ್ಭದಲ್ಲಿ ಅವರೊಳಗಿನ ಗಾಯಕನ ಪರಿಚಯವಾಗಿರಲಿಲ್ಲ, ಆದರೆ ಅವಿರತ ಪ್ರಯತ್ನದಿಂದ ಒಬ್ಬ ಉತ್ತಮ ಗಾಯಕರಾಗಿ ರೂಪುಗೊಂಡು ಇಡೀ ಜಿಲ್ಲೆಯ ಗಮನ ಸೆಳೆದಿದ್ದರು. ಸದಾ ಕ್ರೀಯಾಶೀಲ ವ್ಯಕ್ತಿಯಾಗಿದ್ದ ಶಾಂತಕುಮಾರ್ ಅವರು ಕೇವಲ 47 ವರ್ಷಗಳಿಗೆ ಆಕಸ್ಮಿಕ ಸಾವಿಗೆ ತುತ್ತಾಗಿರುವುದು ನೋವಿನ ಸಂಗತಿಯಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಅನೇಕ ಕನ್ನಡಪರ ಸಂಘಟನೆಗಳಲ್ಲಿ ಶಾಂತ್ಕುಮಾರ್ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಇವರ ನೆನಪು ಚಿರಾಯುವಾಗಿ ಉಳಿದುಕೊಳ್ಳಲು ಪ್ರತಿ ವರ್ಷ ಪದವಿ ತರಗತಿಯಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಅವರ ಸ್ಮರಣಾರ್ಥ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ನೌಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ಜಯರಾಂ, ಕಾಂಗ್ರೆಸ್ ಮುಖಂಡ ಮರಿದೇವರು, ಸ್ನೇಹ ಕೂಟದ ಅಧ್ಯಕ್ಷ ಎಚ್.ಪಿ. ನಂಜೇಗೌಡ, ಆರ್ಟ್ ಆಫ್ ಲಿವಿಂಗ್ನ ರವಿಕುಮಾರ್ ಗೌಡ, ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ತಿಮ್ಮೇಗೌಡ, ವಕೀಲ ಪಾಷಾ, ಸಾಹಿತಿ ಖಂಡಪರಶು, ಕೂ.ಗಿ.ಗಿರಿಯಪ್ಪ, ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಪಿ. ಮಹಾಲಿಂಗಯ್ಯ ಮತ್ತಿತರರು ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಸಂಗೀತ ವಿದ್ವಾನ್ ಶಿವಾಜಿರಾವ್, ರಂಗಭೂಮಿ ಕಲಾವಿದ ಎಚ್.ಶಿವರಾಮಯ್ಯ, ಗಾಯಕ ಹೊನ್ನಿಗಾನಹಳ್ಳಿ ಸಿದ್ಧರಾಜು, ಲಿಂಗರಾಜು ಸೇರಿದಂತೆ ಅನೇಕ ಮಿತ್ರರು ನುಡಿ ನಮನ ಅರ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

