ತಾಪಂ, ಗ್ರಾಪಂ ಸದಸ್ಯರ ವಾಕ್ಸಮರ
ಮಾಗಡಿ: ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ ವೇಳೆ ತಾಪಂ ಮತ್ತು ಗ್ರಾಪಂ ಸದಸ್ಯರ ನಡುವೆ ವಾಕ್ಸಮರ ನಡೆದ ಘಟನೆ ಸೀಗೇಕುಪ್ಪೆ ಗ್ರಾಪಂನಲ್ಲಿ ನಡೆಯಿತು.
ತಾಲೂಕಿನ ಸೀಗೇಕುಪ್ಪೆ ಗ್ರಾಪಂನಲ್ಲಿ ಶುಕ್ರವಾರ ನರೇಗಾ ಯೋಜನೆಯ ವಿವಿಧ ಸವಲತ್ತುಗಳ ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ ಕಾರ್ಯಕ್ರಮವಿತ್ತು. ಸೀಗೇಕುಪ್ಪೆ ಗ್ರಾಪಂ ಅಧ್ಯಕ್ಷೆ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಹುತೇಕ ಗ್ರಾಪಂ ಸದಸ್ಯರು ಹಾಗೂ ತಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯರಾದ ಎಸ್.ಕಾಂತರಾಜು, ಬಿ.ಟಿ.ವೆಂಕಟೇಶ್ ಹಾಜರಿದ್ದರು.
ಅರ್ಹ ಪಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆಯಾಯಿತು. ಆ ವೇಳೆ ಬಹುತೇಕ ಪಲಾನುಭವಿಗಳು ಗೈರಿದ್ದರು. ಪಲಾನುಭವಿಗಳ ಆದೇಶ ಪತ್ರಗಳನ್ನು ಸಂಬಂಧಪಟ್ಟ ಆಯಾ ಪಂಚಾಯ್ತಿ ವ್ಯಾಪ್ತಿಯ ಸದಸ್ಯರು ಪಡೆದುಕೊಳ್ಳುತ್ತಿದ್ದರು. ಕೆಲ ಪತ್ರಗಳನ್ನು ತಾಪಂ ಸದಸ್ಯರು ತೆಗೆದಿಟ್ಟುಕೊಂಡರು. ಇದರಿಂದ ಕುಪಿತರಾದ ಗ್ರಾಪಂ ಸದಸ್ಯರು, ತಾಪಂ ಸದಸ್ಯರಾದ ಕಾಂತರಾಜು, ವೆಂಕಟೇಶ್ ವಿರುದ್ಧ ವಾಕ್ಸಮರಕ್ಕಿಳಿದರು. ಫಲಾನುಭವಿಗಳ ಆಯ್ಕೆಯಲ್ಲಿ ನಾವು ಶ್ರಮಿಸಿದ್ದೇವೆ. ನೀವು ಪಡೆಯುವಂತಿಲ್ಲ ಎಂದು ಫಲಾನುಭವಿಗಳ ನಡುವೆಯೇ ವಾಕ್ಸಮರಕ್ಕಿಳಿದರು. ನಾವೂ ಚುನಾಯಿತ ಪ್ರತಿನಿಧಿಗಳೇ, ನಾವು ಜನರಿಂದಲೇ ಆಯ್ಕೆಯಾಗಿರುವುದು ಎಂದು ಕಾಂತರಾಜು ಕೂಗಾಡತೊಡಗಿದಾಗ, ಕೆಲ ಸದಸ್ಯರು ತಾಪಂ ಅನುದಾನ ಗ್ರಾಪಂಗೆ ನೀಡಿಲ್ಲ ಎಂದು ಎದುರುತ್ತರ ನೀಡಿದರು.
ಇದಕ್ಕೆ ಕಾಂತರಾಜು, ವೆಂಕಟೇಶ್ ಇಬ್ಬರು, ಗ್ರಾಪಂಗೆ ಆಯ್ಕೆಯಾಗಿರುವುದು ಹೆಂಗಸರು. ಅವರ ಬದಲಾಗಿ ಗಂಡಂದಿರು ಅಧಿಕಾರ ಚಲಾಯಿಸಲು ಬರಬೇಡಿ. ಸಭೆ ಸಮಾರಂಭಗಳಿಗೆ ಚುನಾಯಿತ ಪ್ರತಿನಿಧಿಗಳು ಮಾತ್ರ ಹಾಜರಿರಬೇಕು. ಅದು ಬಿಟ್ಟು ಗಂಡಂದಿರು ಸಭೆಗಳಲ್ಲಿ ತುಳಿತು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಅನರ್ಹರಿಗೆ ಆದೇಶ ಪತ್ರ ನೀಡುವುದು ಸರಿಯಲ್ಲ ಎಂದು ಗ್ರಾಪಂ ಸದಸ್ಯರ ಗಂಡಂದಿರನ್ನು ತರಾಟೆಗೆ ತೆಗೆದುಕೊಂಡರು. ಇದು ಕೆಲ ಕಾಲ ಫಲಾನುಭವಿಗಳಿಗೆ ಬಿಟ್ಟಿ ಮನೋರಂಜನೆ ಒದಗಿಸಿತು. ಗ್ರಾಪಂ ಸದಸ್ಯ ಬೆಂಕಿ ಮಹದೇವ್, ಬೆಳಗವಾಡಿ ರಂಗಸ್ವಾಮಿ, ಪಿಡಿಒ ನಾಗರಾಜು, ಕಾರ್ಯದರ್ಶಿ ಹೊಂಬೇಗೌಡ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

