ಬೆಂಗಳೂರು ಗ್ರಾಮಾಂತರ

ಫುಟ್ಪಾತ್ ವ್ಯಾಪಾರ ತೆರವು ಕಾರ್ಯಾಚರಣೆ: ಹೈಡ್ರಾಮಾ

Published On :

ಚನ್ನಪಟ್ಟಣ: ಪಟ್ಟಣದ ಫುಟ್ಪಾತ್ ವ್ಯಾಪಾರ ತೆರವು ಕಾರ್ಯಾಚರಣೆ ಕೆಲ ನಗರಸಭಾ ಸದಸ್ಯರ ಹಸ್ತಕ್ಷೇಪದಿಂದ  ಹೈಡ್ರಾಮವಾಗಿ ಪರಿಣಮಿಸಿತು.
ಶನಿವಾರ ಫುಟ್ಪಾತ್ ತೆರವು ಗೊಳಿಸಲಾಗಿತ್ತಾದರೂ, ನಗರಸಭೆ ಸಿಬ್ಬಂದಿ ಮಾತಿಗೆ ಕವಡೆಕಾಸಿನ ಕಿಮ್ಮತ್ತು ನೀಡದ ರಸ್ತೆಬದಿ ವ್ಯಾಪಾರಿಗಳು ಎಂದಿನಂತೆ ವ್ಯಪಾರ ಮಾಡಲು ಮುಂದಾದರು. ಇದರಿಂದ ಕೆರಳಿದ ನಗರಸಭಾ ಸದಸ್ಯರು ಪೌರಾಯುಕ್ತರಿಗೆ ಮುತ್ತಿಗೆಹಾಕಿ ತೆರವು ಕಾರ್ಯಾಚರಣೆ ಮುಂದುವರೆಸುವಂತೆ ಪಟ್ಟುಹಿಡಿದರು.
ಸದಸ್ಯರ ಒತ್ತಡಕ್ಕೆ ಮಣಿದ ಪೌರಾಯುಕ್ತ ಜಗದೀಶ್ ನಗರಸಭಾ ಸಿಬ್ಬಂದಿಗೆ ಫುಟ್ಪಾತ್ ತೆರವುಗೊಳಿಸುವಂತೆ ಸೂಚಿಸಿದರು. ನಗರಸಭಾ ಸದಸ್ಯರ ಸೂಚನೆಯ ಮೇರೆಗೆ ಡಿ.ಟಿ.ರಾಮು ಸರ್ಕಲ್ ಬಳಿ ತೆರವು ಗೊಳಿಸಲು ಸಿಬ್ಬಂದಿ ಮುಂದಾದಾಗ ಹೊಸ ಹೈಡ್ರಾಮಾ ಆರಂಭ ಗೊಂಡಿತು. ಕೆಲವೇ ಕೆಲವು ನಗರಸಭಾ ಸದಸ್ಯರು ವ್ಯಾಪಾರಿಗಳ ಪರ ನಿಂತು ತೆರವು ಗೊಳಿಸದಂತೆ ಪಟ್ಟು ಹಿಡಿದರು.
 ಕೆಲ ವ್ಯಾಪಾರಿಗಳನ್ನು ನಗರಸಭಾ ಸದಸ್ಯರೇ ರಸ್ತೆಯಲ್ಲಿ ಧರಣಿಗೆ ಕೂರಿಸಿದರಲ್ಲದೆ ತೆರವು ಮಾಡಲು ಮುಂದಾದ ಸಿಬ್ಬಂದಿಗೆ ಧಮಕಿ ಹಾಕುವ ಮೂಲಕ ಕಾರ್ಯಾಚರಣೆ ನಡೆಸದಂತೆ ಅಡ್ಡಿಪಡಿಸಿದರು. ಈ ಬೆಳವಣಿಗೆಯಿಂದ ಕುಪಿತಗೊಂಡ ನಗರಸಭಾ ಸಿಬ್ಬಂದಿ ನಮಗೆ ರಕ್ಷಣೆ ನೀಡುವವರೆಗೂ ಕೆಲಸ ಮಾಡುವುದಿಲ್ಲ ಎಂದು ಧರಣಿಗೆ ಕುಳಿತರು.
ಇತ್ತ ನಗರಸಭೆಗೆ ಮುತ್ತಿಗೆ ಹಾಕಿದ ಪುಟ್ಪಾತ್ ವ್ಯಾಪಾರಿಗಳು  ನಮಗೆ ಅನುಮತಿ ನೀಡುವವರೆಗೆ ನಗರಸಭೆಗೆ ಹೋಗಲು ಬಿಡುವುದಿಲ್ಲ ಎಂದು ಮುತ್ತಿಗೆ ಹಾಕಿದರು. ಇದರಿಂದಾಗಿ ಕೆಲಕಾಲ ನಗರಸಭೆಯಂಗಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ ಗೊಂಡಿತು.
ಸದಸ್ಯರ ಸಭೆ: ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯರು ಸಭೆ ಸೇರಿ ಪುಟ್ಪಾತ್ ವ್ಯಾಪಾರಿಗಳ ತೆರವಿಗೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ನಡೆಸಿ ವ್ಯಾಪಾರಿಗಳಿಗೆ ಕರಲಬಲ ಮೈದಾನದಲ್ಲಿ ಅವಕಾಶ ನೀಡುವಂತೆ ನಿರ್ಣಯ ಕೈಗೊಳ್ಳುವುದರೊಂದಿಗೆ ಹೈಡ್ರಾಮಾಗೆ ತಾತ್ಕಾಲಿಕವಾಗಿ ತೆರೆ ಎಳೆದರು.


ಚುಂಚಿ ಜಲಪಾತಕ್ಕೆ ಆಗಮಿಸಿದ್ದ ಯುವಕ ನೀರುಪಾಲು
ಕನಕಪುರ: ವಿಹಾರಕ್ಕಾಗಿ ಕನಕಪುರ ತಾಲೂಕಿನ ಪ್ರಸಿದ್ಧ ಚುಂಚಿ ಜಲಪಾತಕ್ಕೆ ಆಗಮಿಸಿದ್ದ ಯುವಕರ ತಂಡದಲ್ಲಿ ಒಬ್ಬ  ನೀರುಪಾಲಾದ ಘಟನೆ ನಡೆದಿದೆ. ನತದೃಷ್ಟನನ್ನು ಬೆಂಗಳೂರಿನ ಕಾಕ್ಸ್ಟೌನ್ ನಿವಾಸಿ ಮೈಖೇಲ್ (20) ಎಂದು ಗುರುತಿಸಲಾಗಿದೆ.  ತನ್ನ ಮೂವರು ಸ್ನೇಹಿತರೊಂದಿಗೆ ವಿಹಾರಕ್ಕೆ ಚುಂಚಿಗೆ ಆಗಮಿಸಿದ್ದ ಮೈಖೇಲ್ ಇಲ್ಲಿನ ಒಂಟುಗುಂದ ಮರಮಡು ಎಂಬ ಪ್ರದೇಶದಲ್ಲಿ ಈಜಾಡಲು ಇಳಿದಿದ್ದು ನೀರಿನ ಸೆಳೆತ ಹಾಗೂ ಹರಿವುಗಳನ್ನು ಅರಿಯದೆ ಕೊಚ್ಚಿಹೋಗಿದ್ದಾನೆ. ಸಾತನೂರು ಠಾಣೆಯಲ್ಲಿ ದೂರು ದಾಖಲಾಗಿದ್ದು ಆರಕ್ಷಕ ಉಪನಿರೀಕ್ಷಕ ಜಯರಾಮು ತನಿಖೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸುನೀಲ್ಕುಮಾರ್ ನೇತೃತ್ವದಲ್ಲಿ ಶವಕ್ಕಾಗಿ ಶೋಧ ನಡೆಸಿ ಕಳೇಬರವನ್ನು ಪತ್ತೆಹಚ್ಚಿ ಮೃತರ ಕುಟುಂಬದವರಿಗೆ ಒಪ್ಪಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.