ಬೆಂಗಳೂರು ಗ್ರಾಮಾಂತರ

ದೇಹ ದಾನದ ಬಗ್ಗೆ ಜಾಗೃತಿಗಾಗಿ ಫೆ.2ರಂದು ಮಿನಿ ಮ್ಯಾರಥಾನ್

Published On :

ರಾಮನಗರ: ಮನುಷ್ಯನ ಮರಣಾನಂತರ ದೇಹವನ್ನು ದಾನ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಫೆ.2ರಂದು ನಗರದಲ್ಲಿ ಮಿನಿ ಮ್ಯಾರಥಾನ್ ಓಟ ಆಯೋಜಿಸಲಾಗಿದೆ ಎಂದು ಯೆಲ್ಲೋ ಅಂಡ್ ರೆಡ್ ಫೌಂಡೇಷನ್ನ ಅಮಿತ್ರಾಜ್ ಶಿವ ತಿಳಿಸಿದರು. ರಾಮನಗರದಲ್ಲಿ ಇದೇ ಪ್ರಥಮ ಬಾರಿಗೆ ಈ ಬಗ್ಗೆ ಜಾಗೃತಿ ಮೂಡಿಸಲು ಮ್ಯಾರಥಾನ್ ಏರ್ಪಡಿಸಲಾಗಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ 300ಕ್ಕೂ ಹೆಚ್ಚು ಮಂದಿ ಈ ಮ್ಯಾರಥಾನ್ನಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. ಪ್ರತಿ ದಿನ 300ಕ್ಕೂ ಹೆಚ್ಚು ವಿವಿಧ ಅಂಗಾಂಗಗಳ ವೈಫಲ್ಯದಿಂದ ಸಾವನ್ನಪ್ಪುತ್ತಿದ್ದಾರೆ. ಮರಣಾನಂತರ ನೇತ್ರಗಳು ಮತ್ತು ಇತರೆ ಅಂಗಾಂಗ ದಾನ ಮಾಡುವುದರಿಂದ ಪ್ರತಿ ವರ್ಷ 1 ಲಕ್ಷಕ್ಕೂ ಅಧಿಕ ಜೀವ ಉಳಿಸಬಹುದು. 2 ಲಕ್ಷ ಕಿಡ್ನಿಗಳು, 50 ಸಾವಿರ ಯಕೃತ್ಗಳು, 50 ಸಾವಿರ ಹೃದಯದ ಕಸಿಗೆ ಬೇಡಿಕೆ ಇದೆ. ಆದರೆ ದಾನಿಗಳ ಸಂಖ್ಯೆ ಕೇವಲ ಶೇ.2ರಿಂದ 3ರಷ್ಟಿದೆ ಎಂದರು.  ಬ್ರೈನ್ಡೆಡ್ನಿಂದ ಸಾವನ್ನಪ್ಪಿದವರಿಂದ ಕಣ್ಣು ಸೇರಿದಂತೆ 37 ಅಂಗಾಂಗ ಉಪಯೋಗಕ್ಕೆ ಬರುತ್ತವೆ. ಕನಿಷ್ಠ 8 ಮಂದಿಯ ಜೀವ ಉಳಿಸಬಹುದು. ಅಂಗಾಂಗಗಳ ದಾನದ ಬಗ್ಗೆ ಸಮಾಜದಲ್ಲಿ ಅರಿವಿನ ಕೊರತೆ ಇದೆ. ಹೀಗಾಗಿಯೆ ನಮ್ಮ ಸಂಸೆ ಜಾಗೃತಿ ಓಟವನ್ನು ಹಮ್ಮಿಕೊಂಡಿದೆ ಎಂದರು. ಫೆ.2ರಂದು ನಗರದಲ್ಲಿ ನಡೆಯುವ ಮಿನಿ ಮ್ಯಾರಥಾನ್ನಲ್ಲಿ 5 ಕಿ.ಮೀ., 10 ಕಿ.ಮೀ. ಮತ್ತು ಹಿರಿಯರಿಗೆ 5 ಕಿ.ಮೀ. 3 ವಿಭಾಗದಲ್ಲಿ  ಓಟ ನಡೆಯಲಿದೆ. ಫೆ.2ರಂದು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಿಂದ ಬೆಳಗ್ಗೆ 6.30ಕ್ಕೆ ಮ್ಯಾರಥಾನ್ ಆರಂಭವಾಗಲಿದೆ. 5 ಮತ್ತು 10 ಕಿಮೀ ಓಟದ ಮಾರ್ಗ ಈಗಾಗಲೆ ಸೂಚಿತಗೊಂಡಿದೆ ಎಂದು ವಿವರಿಸಿದರು. ಗೋಷ್ಠಿಯಲ್ಲಿ ಸಂದೇಶ್ ಹನುಮೇಲಿಂಗು, ವಿಜಯ್ ಮುನಿರಾಜ್, ಜಯಕುಮಾರ್, ನಯನ, ನವೀನ್ ಹಾಜರಿದ್ದರು.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.