ಜನಪ್ರತಿನಿಧಿಗಳಲ್ಲದ ರಾಜಕಾರಣಿಗಳನ್ನು ವೇದಿಕೆಯಿಂದ ಕೆಳಗಿಳಿಸಿದ ಸಚಿವ ಡಿಕೆಶಿ
ರಾಮನಗರ: ಈ ಜಿಲ್ಲೆಯಲ್ಲಿ ಶಿಷ್ಟಾಚಾರ ಗಾಳಿಗೆ ತೂರಿಕೊಂಡೇ ಬರಲಾಗಿದೆ. ಗಣರಾಜ್ಯೋತ್ಸವ ಸಮಾರಂಭದಲ್ಲಿ ಜನಪ್ರತಿನಿಧಿಗಳಲ್ಲದ ರಾಜಕಾರಣಿಗಳನ್ನು ವೇದಿಕೆಯಿಂದ ಕೆಳಗಿಳಿಸುವ ಮೂಲಕ ಶಿಷ್ಟಾಚಾರ ಪಾಲನೆಗೆ ಇಂಧನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಪ್ರಾಮಾಣಿಕ ಪ್ರಯತ್ನವನ್ನಂತೂ ಮಾಡಿದ್ದಾರೆ.
ಸರ್ಕಾರದ ಯಾವುದೇ ಸಭೆ, ಸಮಾರಂಭ, ರಾಷ್ಟ್ರೀಯ ಹಬ್ಬದ ಕಾರ್ಯಕ್ರಮವೇ ಆಗಲಿ ಅಧಿಕಾರಸ್ಥ ರಾಜಕಾರಣಿಯ ಬೆಂಬಲಿಗರು, ಹಿಂಬಾಲಕರು ವೇದಿಕೆಯಲ್ಲಿರುವ ಆಸನಗಳನ್ನು ಆವರಿಸಿಕೊಳ್ಳುವ ಚಾಳಿ ರಾಮನಗರದಲ್ಲಿ ಮುಂದುವರೆದುಕೊಂಡು ಬಂದಿದೆ. ಗಣ ರಾಜ್ಯೋತ್ಸವದಲ್ಲೂ ಅದು ಪುನರಾವರ್ತನೆ ಆಯಿತು.
ವೇದಿಕೆ ತುಂಬೆಲ್ಲಾ ಕಾಂಗ್ರೆಸ್ ಮುಖಂಡರೇ ಆವರಿಸಿದ್ದರ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಮಾಲೋಚಿಸಿದರು. ಬಳಿಕ ಜನಪ್ರತಿನಿಧಿ ಅಲ್ಲ ರಾಜಕಾರಣಿಗಳನ್ನು ಕೆಳಗಿಳಿಸಲು ಡಿಕೆಶಿ ನಿರ್ದೇಶನ ನೀಡಿದರು. ಆ ಮೇರೆಗೆ ಕೆಪಿಸಿಸಿ ಸದಸ್ಯ ಎ. ಮಂಜುನಾಥ್, ಎಲ್. ಚಂದ್ರಶೇಖರ್, ಹಸನಬ್ಬ ಸಹಿತ ಹಲವರು ನಿರ್ಗಮಿಸಿದರು. ಮರಿದೇವರು ಮಾತ್ರ ವೇದಿಕೆಯಲ್ಲೇ ಉಳಿದರು.
ಶಿಷ್ಟಾಚಾರದ ಬಗ್ಗೆ ಇದುವರೆಗೆ ಯಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿಯೂ ಗಮನ ಹರಿಸಿರಲಿಲ್ಲ. ಡಿಕೆಶಿ ಅವರಾದರೂ ಈ ವಿಷಯದಲ್ಲಿ ಕಾಳಜಿ ವಹಿಸಿದ್ದು ಮಾತ್ರ ಮೆಚ್ಚುವಂಥದ್ದೇ. ಆದರೆ, ಉಸ್ತುವಾರಿ ಸಚಿವರು ಧ್ವಜಾರೋಹಣ ಮಾಡುವ ವೇಳೆ ಧ್ವಜಕಟ್ಟೆ ಮೇಲೆ ಶಿಷ್ಟಾಚಾರ ಉಲ್ಲಂಘನೆ ಆದದ್ದು ವಿಪರ್ಯಾಸದ ಸಂಗತಿ.
ಗೈರಾದವರೇ ಹೆಚ್ಚು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ಗೈರಾದರು. ಆಹ್ವಾನ ಪತ್ರಿಕೆಯಲ್ಲಿ ಹೆಸರಿದ್ದ ಸಾಕಷ್ಟು ಜನಪ್ರತಿನಿಧಿಗಳು, ಗಣ್ಯರು ಬೆನ್ನು ತೋರಿದರು. ಜಿಲ್ಲಾಡಳಿತ ಎಷ್ಟೇ ಎಚ್ಚರಿಕೆ ನೀಡಿದ್ದಾಗ್ಯೂ ಅಧಿಕಾರಿಗಳು ಕಾರ್ಯಕ್ರಮ ಮರೆತು ರಜೆಯ ಮಜ ಅನುಭವಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

