ನಿಷ್ಠೆ, ಪ್ರಾಮಾಣಿಕತೆಯಿಂದ ದೇಶದ ಉನ್ನತಿ: ಶಿವಣ್ಣ
ಆನೇಕಲ್ಲು: ವಿಶ್ವದಲ್ಲೇ ಶ್ರೇಷ್ಠವಾದ ಪ್ರಜಾಪ್ರಭುತ್ವ ಸಂವಿದಾನ ಹೊಂದಿರುವ ಭಾರತ ಎಲ್ಲ ಧರ್ಮಗಳ ಜನರನ್ನು ಒಗ್ಗೂಡಿಸಿಕೊಂಡು ಉತ್ತಮ ಆಡಳಿತ ನೀಡುತ್ತಿದೆ. ದೇಶವಾಸಿಗಳು ನಿಷ್ಠೆ ಹಾಗೂ ಪ್ರಾಮಾಣಿಕತೆ ಮೆರೆಯುವ ಮೂಲಕ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸುವ ಸಂಕಲ್ಪ ಮಾಡಬೇಕೆಂದು ಆನೇಕಲ್ ಶಾಸಕ ಬಿ. ಶಿವಣ್ಣ ಕರೆ ನೀಡಿದ್ದಾರೆ.
ಅವರು ನಾಡಹಬ್ಬಗಳ ಸಮಿತಿ ವತಿಯಿಂದ ಏರ್ಪಡಿಸಿದ್ದ ಗಣರಾಜ್ಯೋತ್ಸವದಂದು ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ ಉಚಿತ ಆರೋಗ್ಯ ಹಾಗೂ ಶಿಕ್ಷಣವನ್ನು ಸರ್ಕಾರ ನೀಡುತ್ತಿದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ತಂತ್ರಜ್ಞಾನದ ಅಧ್ಯಯನ ಮೂಲಕ ನೆರೆಯ ರಾಷ್ಟ್ರಗಳಿಗೆ ಸೆಡ್ಡ ಹೊಡೆಯುವಂತೆ ಶ್ರೇಷ್ಠತೆ ಮೆರೆಯಬೇಕೆಂದರು.
ತಹಸೀಲ್ದಾರ್ ಮಲ್ಲಿಕಾರ್ಜುನ್ ಸಂದೇಶ ವಾಚನ ಮಾಡಿ ದೇಶವನ್ನು ಬಡತನ ಹಾಗೂ ಭಯೋತ್ಪಾದನೆ ಎಂಬ ಭೂತಗಳು ಕಾಡುತ್ತಿದ್ದು ಇದರ ಶಾಶ್ವತ ನಿರ್ಮೂಲನೆಗೆ ವಿದ್ಯಾರ್ಥಿಗಳು ಪಣತೊಡಬೇಕೆಂದು ಮನವಿ ಮಾಡಿದರು. ದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧಿನೆ ಮಾಡಿದ ಮಹನೀಯರಿಗೆ ಪದ್ಮ ಪ್ರಶಸ್ತಿ ನೀಡುತ್ತಿದ್ದು
ಕರ್ನಾಟಕದ 7 ದಿಗ್ಗಜರು ಪ್ರಶಸ್ತಿ ಪಡೆಯುವ ಮೂಲಕ ಹೆಮ್ಮೆಯ ಪುತ್ರರಾಗಿದ್ದಾರೆ. ಪ್ರತಿ ಹಳ್ಳಿಯಿಂದ ಒಬ್ಬ ವಿಜ್ಞಾನಿ ತಯಾರಾಗಬೇಕೆಂಬ ಕಲಾಂ ಅವರ ಕನಸನ್ನು ಸಾಕಾರ ಮಾಡಬೇಕೆಂದರು. ವಿವಿಧ ಶಾಲಾ ಮಕ್ಕಳು ದೇಶಪ್ರೇಮವನ್ನು ಮೆರೆಯುವ ನೃತ್ಯ ಪ್ರದರ್ಶನ ಮಾಡಿದರು. ಎಪಿಎಸ್ ಶಾಲೆಯ ಮಕ್ಕಳು ಒಡೆಯರ್, ಜಿಎಸ್ಎಸ್ ಹಾಗೂ ಇತ್ತೀಚೆಗೆ ಮೃತ ಪಟ್ಟ ಬಂಡೆ ಅವರ ಸ್ತಬ್ಧ ಚಿತ್ರಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಅರ್ಥಪೂರ್ಣ ಆಚರಣೆ ನಡೆಸಿದರು. ತಾಪಂ ಅಧ್ಯಕ್ಷ ಮುರಳಿಕೃಷ್ಣ, ಪುರಸಭಾ ಸದಸ್ಯರು, ವಿವಿಧ ಇಲಾಖಾ ಅಧಿಕಾರಿಗಳು ವೇದಿಕೆಯಲ್ಲಿದ್ದರು. ಶಾಲಾ ಮಕ್ಕಳಿಗೆ ಸಿಹಿ ನಂತರ ಉಪಹಾರ ವ್ಯವಸ್ಥೆ ಏರ್ಪಡಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

