ಪ್ರತಿಷ್ಠೆಗಳಿಂದ ದಿಕ್ಕು ತಪ್ಪುತ್ತಿರುವ ಕಜಾಪ:ಆರೋಪ
ದೊಡ್ಡಬಳ್ಳಾಪುರ: ಇಲ್ಲಿನ ಕನ್ನಡ ಜಾಗೃತ ಪರಿಷತ್ತು ಇತ್ತೀಚಿನ ದಿನಗಳಲ್ಲಿ ದಿಕ್ಕುತಪ್ಪುತ್ತಿದೆ. ಕೆಲವೇ ವ್ಯಕ್ತಿಗಳ ಪ್ರತಿಷ್ಠೆಯ ವೈಭವೀಕರಣಕ್ಕೆ ವೇದಿಕೆಯಾಗಿದೆ ಎಂದು ಕನ್ನಡ ಜಾಗೃತ ಪರಿಷತ್ತಿನ ಮಾಜಿ ಅಧ್ಯಕ್ಷ ಬಿ.ಜಿ. ಅಮರನಾಥ್, ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ವಿ. ವೆಂಕಟೇಶಮೂರ್ತಿ, ಸಾ.ಲ. ಕಮಲನಾಥ್ ಮತ್ತಿತರರು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಕಜಾಪ ವತಿಯಿಂದ ಫೆ.2ರಂದು ಕರೆಯಲಾಗಿರುವ ಸರ್ವಸದಸ್ಯರ ಸಭೆ ವಿಚಾರದಲ್ಲಿ ಸಂಸ್ಥೆಯ ಬೈಲಾ ಸ್ಪಷ್ಟವಾಗಿ ಉಲ್ಲಂಘನೆಯಾಗಿದ್ದು, ಸಭೆ ಅಸಿಂಧು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಜಾಪ ಅಧ್ಯಕ್ಷರಾಗಿ ಕಳೆದ ಒಂದೂವರೆ ವರ್ಷಗಳ ಹಿಂದೆ ಡಾ. ವೆಂಕಟರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತ.ನ. ಪ್ರಭುದೇವ್ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಡಾ. ವೆಂಕಟರೆಡ್ಡಿ ಅವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಬೇರೆ ಯಾರೂ ಆಯ್ಕೆಯಾಗಿಲ್ಲ. ನಿಯಮದಂತೆ ಪ್ರಧಾನ ಕಾರ್ಯದರ್ಶಿಗೆ ಸರ್ವಸದಸ್ಯರ ಸಭೆ ಕರೆಯುವ ಅಧಿಕಾರ ಇದೆ. ಆದರೆ ಈಗ ಮಾಜಿ ಅಧ್ಯಕ್ಷರು, ಮಾಜಿ ಪ್ರಧಾನ ಕಾರ್ಯದರ್ಶಿಗಳು ಸಭೆ ಕರೆದಿದ್ದಾರೆ. ಇದು ಅಸಿಂಧು ಎಂದು ವಿವರಿಸಿದರು.
ಸಂಘದ ಉಪನಿಯಮಗಳ ಗಾಳಿಗೆ ತೂರಲಾಗಿದ್ದು, ಬೇಕಾಬಿಟ್ಟಿ ಸಭೆಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಅವರು, ಕೆಲವರ ಧೋರಣೆ ಪರಿಷತ್ತಿನ ಮೂಲ ಆಶಯಕ್ಕೆ ಧಕ್ಕೆ ತರುವಂತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

