ಬೆಂಗಳೂರು ಗ್ರಾಮಾಂತರ

ಗೋದಾಮಿಗೆ ಬೆಂಕಿ 30 ಕೋಟಿ ನಷ್ಟ

Published On :

ಕ.ಪ್ರ. ವಾರ್ತೆ ಟಿ ಆನೇಕಲ್ಲು ಟಿ ಜ.30
ಆನೇಕಲ್ ಠಾಣಾ ವ್ಯಾಪ್ತಿಯ ಇಂಡ್ಲವಾಡಿ ಸಮೀಪದ ಗೋದಾಮಿಗೆ ಆಕಸ್ಮಿಕ ಬೆಂಕಿ ಬಿದ್ದು ಅಂದಾಜು ರು. 30 ಕೋಟಿಗೂ ಹೆಚ್ಚು ಬೆಲೆ ಬಾಳುವ ಸಿದ್ಧ ಉಡುಪುಗಳು, ಎಲೆಕ್ಟ್ರಿಕ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು, ಗೃಹ ಬಳಕೆ ವಸ್ತುಗಳು ಹಾಗೂ ಪೀಠೋಪಕರಣಗಳು ಭಸ್ಮವಾಗಿರುವ ಘಟನೆ ನಡೆದಿದೆ.
ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಗೋದಾಮಿನಲ್ಲಿ ಬೆಂಕಿ ಹಾಗೂ ಹೊಗೆ ಕಾಣಿಸಿಕೊಂಡಾಗ 250ಕ್ಕೂ ಹೆಚ್ಚು ಕಾರ್ಮಿಕರು ಹೊರಗೆ ಓಡಿ ಬಂದರು. ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ 5 ಎಕರೆ ವಿಶಾಲ ಪ್ರದೇಶದ ಗೋದಾಮಿಗೆ ಹೊತ್ತಿಕೊಂಡಿತು. ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಾಚಿದ್ದು 5 ಕಿ.ಮೀ. ದೂರದ ವ್ಯಾಪ್ತಿಗೂ ಕಾಣುವಂತಿತ್ತು.
ಸಮೀಪದ ಸಿಡಿಹೊಸಕೋಟೆಯ ಅಗ್ನಿಶಾಮಕ ವಾಹನಗಳು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಬಂದವು. ಸತತ 3 ಗಂಟೆಗಳ ಪ್ರಯತ್ನದಿಂದ ಬೆಂಕಿಯ ಜ್ವಾಲೆಯನ್ನು ಹತೋಟಿಗೆ ತರಲಾಯಿತಾದರೂ ಯಾವುದೇ ವಸ್ತುಗಳನ್ನು ರಕ್ಷಿಸಲಾಗಲಿಲ್ಲ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಬಾನೋಟ್, ಡಿವೈಎಸ್ಪಿ ಬಲರಾಮೇಗೌಡ ಭೇಟಿ ನೀಡಿ ಪರಿಶೀಲಿಸಿದರು. ಗೋದಾಮಿನ ಮಾಲಿಕ ಅಜೀಮ್ ಘಟನೆಯಿಂದ ಭೀತರಾಗಿದ್ದು ಘಟನೆ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ. ಎಸ್ಪಿ ರಮೇಶ್ ಬಾನೊಟ್ ಅವರು ಮಾತನಾಡಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರೂ ಅಂದಾಜು 30 ರಿಂದ 40 ಕೋಟಿ ರು. ಗಳ ಉಪಕರಣಗಳು ಹಾಗೂ ವಸ್ತುಗಳು ಭಸ್ಮವಾಗಿರಬಹುದೆಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.