ದೇವನಹಳ್ಳಿ ತಾಪಂಗೆ ಆಯ್ಕೆ
ದೇವನಹಳ್ಳಿ: ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಧಿಕಾ ತ್ಯಾಗರಾಜ್ ಹಾಗೂ ಉಪಾಧ್ಯಕ್ಷ ಪಟಾಲಪ್ಪ ಅವರ ಅವಧಿ ಮುಕ್ತಾಯವಾದ ಕಾರಣ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿದ್ದ ಬಿದಲೂರು ನರಸಿಂಹಮೂರ್ತಿ ಪ್ರಭಾರ ಅಧ್ಯಕ್ಷರಾಗಿ ಶನಿವಾರ ಅಧಿಕಾರ ಸ್ವೀಕಾರ ಮಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಪಿಳ್ಳಮುನಿಶಾಮಪ್ಪ ವಹಿಸಿ ಇದುವರೆವಿಗೂ ಅಧ್ಯಕ್ಷರಾಗಿದ್ದ ರಾಧಿಕಾ ತ್ಯಾಗರಾಜು ಮತ್ತು ಉಪಾಧ್ಯಕ್ಷರಾಗಿದ್ದ ಪಟಾಲಪ್ಪ ಅಧಿಕಾರಿಗಳ ಮತ್ತು ಎಲ್ಲ ಸದಸ್ಯರ ಸಹಕಾರ ಪಡೆದು ಪ್ರಾಮಾಣಿಕವಾಗಿ ಕೆಲಸ ಮಾಡಿರುವುದಕ್ಕೆ ಅಭಿನಂದಿಸಿದರು. ರಾಧಿಕಾ ತ್ಯಾಗರಾಜು ಹಾಗೂ ಪಟಾಲಪ್ಪ ಅವರು ಮಾತನಾಡಿ, ಪ್ರಾಮಾಣಿಕವಾಗಿ ಕೆಲಸ ಮಾಡಿರುವುದಕ್ಕೆ ನಮಗೆ ಸಮಾಧಾನ ಇದೆ ಎಂದರಲ್ಲದೆ ಯಾವುದೇ ಅಧಿಕಾರಿ (ಕುಂದಾಣ ವೈದ್ಯರಾದ ಡಾ.ಚೇತನ್) ಪ್ರಾಮಾಣಿಕವಾಗಿ ಕೆಲಸ ಮಾಡುವಾಗ ಅವರನ್ನು ಪ್ರೋತ್ಸಾಹಿಸಬೇಕೆ ಹೊರತು ಆರೋಪ ಹೊರಿಸಬಾರದು ಎಂದು ತಿಳಿಸಿದರು. ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಆರ್. ಮುನೇಗೌಡ, ಅಧ್ಯಕ್ಷ ಮುನಿಶಾಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಸಿ.ಮುನಿರಾಜು ಹಾಗೂ ತಾ.ಪಂ. ಸದಸ್ಯರು ಪುರಸಭಾ ಸದಸ್ಯರು ಬಮೂಲ್ ನಿರ್ದೇಶಕ ಶ್ರೀನಿವಾಸ್ ಉಪಸ್ಥಿತರಿದ್ದರು. ತಾ.ಪಂ. ಇಒ ಕೃಷ್ಣಪ್ಪ ಲೋಹಾರ್ ಸ್ವಾಗತ ಕೋರಿದರು.
ರೇಷ್ಮೆ ಮಾರುಕಟ್ಟೆಯಲ್ಲಿ ಜಗಳ
ಕನಕಪುರ: ಕನಕಪುರದ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಹರಾಜು ಸಂದರ್ಭದಲ್ಲಿ ರೀಲರ್ಸ್ಗಳ ನಡುವ ಮಾತಿನ ಚಕಮಕಿ ತೀವ್ರಗೊಂಡು ಘರ್ಷಣೆಯ ಹಂತಕ್ಕೆ ತಲುಪಿತು. ಸ್ಥಳೀಯ ರೀಲರ್ಗಳು ರೇಷ್ಮೆ ಕೃಷಿ ಅಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು. ಇದರಿಂದಾಗಿ ಹಲವಾರು ಗಂಟೆಗಳ ಕಾಲ ಗೂಡಿನ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಸ್ಥಗಿತಗೊಂಡು ರೇಷ್ಮೆಗೂಡು ಬೆಳೆದ ರೈತರು ಆತಂಕದಿಂದ ಪರಿತಪಿಸಬೇಕಾಯಿತು. ಬೇರೆ ಊರಿನ ರೇಷ್ಮೆ ಗೂಡಿನ ಮಾರುಕಟ್ಟೆಗಳಿಗಿಂತಾ ಕನಕಪುರದಲ್ಲಿ ರೇಷ್ಮೆ ಧಾರಣೆ ಕಡಿಮೆ ಇರುವ ಕಾರಣದಿಂದಾಗಿ ಪರ ಊರುಗಳು ರೀಲರ್ಸ್ಗಳು ಇಲ್ಲಿಗೆ ಆಗಮಿಸಿ ಬೀಟ್ನಲ್ಲಿ ಪಾಲ್ಗೊಂಡು ಹೆಚ್ಚಿನ ಮೊತ್ತಕ್ಕೆ ಖರೀದಿಸಲು ಮುಂದಾದಾಗ ಸ್ಥಳೀಯ ರೀಲರ್ಸ್ಗಳು ಅಸಮಧಾನದಿಂದ ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದರು. ಘಟನೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಪೊಲೀಸರ ಮಧ್ಯಪ್ರವೇಶದಿಂದ ಪ್ರಕರಣ ಅಂತ್ಯಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

