ಬೆಂಗಳೂರು ಗ್ರಾಮಾಂತರ

ಅರಣ್ಯ ಒತ್ತುವರಿ ಲೋಕಾತನಿಖೆಯಾಗಲಿ: ಶಿವಪ್ಪ

Published On :

ದೇವನಹಳ್ಳಿ: ತಾಲೂಕಿನ ರಾಯಸಂದ್ರ, ಭೂವನಹಳ್ಳಿ ಮತ್ತು ಚಿಕ್ಕಸಣ್ಣೆ ಗ್ರಾಮಗಳ ಬಳಿ ಅರಣ್ಯ ಇಲಾಖೆಗೆ ಸೇರಿದ ಸುಮಾರು 378 ಎಕರೆ ಜಮೀನಿದ್ದು ಇದರಲ್ಲಿ ಸುಮಾರು 120 ಎಕೆರೆಯಷ್ಟು ಖಾಸಗಿಯವರು ಒತ್ತುವರಿ ಮಾಡಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಕೆ.ಶಿವಪ್ಪ ಆರೋಪಿಸಿದರು.ಈ ಪ್ರಕರಣ ಲೋಕಾಯುಕ್ತ ತನಿಖೆಗೊಳಪಡಬೇಕು, ಅಲ್ಲದೆ ಕೋಟ್ಯಂತರ ರು. ಬೆಲೆ ಬಾಳುವ ಜಮೀನು ಅರಣ್ಯ ಇಲಾಖೆಯಲ್ಲೇ ಉಳಿಯಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.  ರಾಯಸಂದ್ರ ಗ್ರಾಮದ ಸರ್ವೆ ನಂ.44 ಮತ್ತು 45 ರಲ್ಲಿ ರಲ್ಲಿ 315 ಎಕರೆ, ರಾಷ್ಟ್ರೀಯ ಹೆದ್ದಾರಿಗೆ ಸೇರಿದ ಬೂವನಹಳ್ಳಿ ಗ್ರಾಮದ ಸರ್ವೆ ನಂ 29, 30 ಹಾಗೂ ಚಿಕ್ಕಸಣ್ಣೆ ಗ್ರಾಮಕ್ಕೆ ಸೇರಿದ ಸರ್ವೆ ನಂ. 68 ಮತ್ತು 69 ರಲ್ಲಿ ಒಟ್ಟು 63 ಎಕರೆ ಪ್ರದೇಶವಿದ್ದು ಇದರಲ್ಲಿ ಸುಮಾರು 120 ಎಕರೆಯಷ್ಟು ಖಾಸಗಿಯವರು ಬಡಾವಣೆಗಳನ್ನು ನಿರ್ಮಿಸುತ್ತಿದ್ದಾರೆ. ಇದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಹ ಶಾಮೀಲಾಗಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ, ಆದ್ದರಿಂದ ಈ ಪ್ರಕರಣಗಳ ಬಗ್ಗೆ ಲೋಕಾಯುಕ್ತ ತನಿಖೆಯಾಗಬೇಕು ಮತ್ತು ಒತ್ತುವರಿಯಾಗಿರುವ ಜಮೀನು ಮತ್ತೆ ಅರಣ್ಯ ಇಲಾಖೆಗೆ ಸೇರುವಂತಾಗಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.