ಬೆಂಗಳೂರು ಗ್ರಾಮಾಂತರ

ನಿಸರ್ಗ ವಿನಾಶದ ಅಂಚಿನಲ್ಲಿ

Published On :

ಚನ್ನಪಟ್ಟಣ: ಪರಿಸರದ ಬಗ್ಗೆ ಹಿಂದಿನಿಂದ ನಾವು ತಾಳಿದ ಉದಾಸೀನ ಧೋರಣೆಯಿಂದಾಗಿ ಇಂದು ನಮ್ಮೆಲ್ಲ
ಅಗತ್ಯಗಳನ್ನು ಪೂರೈಸುತ್ತಿರುವ ನಿಸರ್ಗ ವಿನಾಶದ ಅಂಚಿನಲ್ಲಿದೆ. ಇನ್ನಾದರೂ ನಾವು ಎಚ್ಚೆತ್ತು ಕೊಳ್ಳದಿದ್ದರೆ ಭವಿಷ್ಯದಲ್ಲಿ ಮನುಕುಲಕ್ಕೆ ಬಹುದೊಡ್ಡ ವಿಪತ್ತು ಎದುರಾಗುವುದು ನಿಶ್ಚಿತ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶ ಕಿರಣ್ ಕಿಣಿ ಎಚ್ಚರಿಸಿದರು.
ತಾಲೂಕಿನ ಕೆಂಗಲ್ ಬಳಿಯ ಟ್ರೀಪಾರ್ಕ್ ನಲ್ಲಿ ಹಮ್ಮಿ ಕೊಳ್ಳಲಾಗಿದ್ದ ವಿಶ್ವಪರಿಸರ ದಿನಾಚರಣೆಯ ಕಾರ್ಯಕ್ರಮಕ್ಕೆ ಗಿಡನೆಡುವ ಮೂಲಕ ಚಾಲನೆ ನೀಡಿ ಮಾತನಾಡಿ, ವಿಶ್ವದಲ್ಲಿ 7 ಬಿಲಿಯನ್‌ಗಿಂತಲೂ ಹೆಚ್ಚಿನ ಜನರು, ಅಸಂಖ್ಯಾತ ಜೀವರಾಶಿಯನ್ನು ಸಲಹುತ್ತಿರುವ ಪರಿಸರವನ್ನು ಕೆಲವೇ ಕೆಲವು ಮಂದಿ ಸ್ವಹಿತಕ್ಕಾಗಿ ಹಾನಿಮಾಡುತ್ತಿದ್ದಾರೆ. ಇವರ ತಪ್ಪಿಗೆ ಇಡೀ ಜೀವ ಸಂಕುಲವೇ ಶಿಕ್ಷೆ ಅನುಭವಿಸುವಂತಾಗಿದೆ ಎಂದರು.
ವರ್ಷದಿಂದ ವರ್ಷಕ್ಕೆ ಅರಣ್ಯ ಪ್ರದೇಶ ಕಡಿಮೆಯಾಗುತ್ತಾ ಬರುತ್ತಿದೆ. ಅರಣ್ಯದಲ್ಲಿ ಮಾನವನ ಚಟುವಟಿಕೆ ಆರಂಭಗೊಂಡಿದ್ದು ಇದರಿಂದಾಗಿ ಕಾಡಿನ ಮರ ಮುಟ್ಟುಗಳು, ವನ್ಯಜೀವಿಗಳು ಅಪಾಯದ ಅಂಚಿನಲ್ಲಿವೆ. ಪರಿಸರ ಉಳಿವಿಗಾಗಿ ನಾವೆಲ್ಲ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದರು.
ಅಭಿವೃದ್ಧಿಯ ಹೆಸರಿನಲ್ಲಿ ಪರಿಸರದ ಮೇಲೆ ಅವ್ಯಾಹತವಾಗಿ ದೌರ್ಜನ್ಯ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಮೂಲ ಸ್ವರೂಪವೇ ಬದಲಾಗುತ್ತಿದ್ದು ಮುಂದಿನ ಪೀಳಿಗೆ ಆತಂಕದಲ್ಲಿ ದಿನದೂಡುವಂತಾಗಿದೆ.
ಇನ್ನಾದರೂ ಪ್ರತಿಯೊಬ್ಬ ವ್ಯಕ್ತಿ ವರ್ಷಕ್ಕೊಂದು ಮರ ನೆಟ್ಟು ಬೆಳೆಸುವ ಪ್ರಯತ್ನ ಮಾಡಬೇಕಿದೆ ಎಂದರು.
 ಸಿವಿಲ್ ನ್ಯಾಯಾಧೀಶ ನಾಗೇಶ್ ಮೂರ್ತಿ, ಪರಿಸರದ ಬಗ್ಗೆ ಶಾಲಾಮಕ್ಕಳಲ್ಲಿ ಕಾಳಜಿ ಮೂಡಿಸುವ ಮೂಲಕ ಭವಿಷ್ಯದಲ್ಲಿ ಅವರನ್ನು ಪರಿಸರ ರಕ್ಷಕರಾಗಿ ರೂಪಿಸಬೇಕಿದೆ. ಇದಕ್ಕಾಗಿ ಪರಿಸರದ ಬಗ್ಗೆ ಶಾಲಾ ಪಠ್ಯಪುಸ್ತಕದಲ್ಲಿ ಪೂರಕ ಮಾಹಿತಿ ನೀಡುವ ಜತೆಗೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿಯೂ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಬೇಕಿದೆ ಎಂದರು.
 ಭೌಗೋಳಿಕ ಸಂಪತ್ತು ಈದೇಶದ ಆಸ್ತಿ ಇದನ್ನು ಕಾಪಾಡುವುದು ಸರ್ಕಾರದ ಜಬ್ದಾರಿಯಾಗಿದ್ದು, ಭೌಗೋಳಿಕ ಆಸ್ತಿಯನ್ನು ರಕ್ಷಿಸುವ ಹೊಣೆಯನ್ನು ನಮ್ಮ ದೇಶದ ಸಂವಿಧಾನ ಕೇಂದ್ರಸರ್ಕಾರಕ್ಕೆ ವಹಿಸಿದ್ದು, ಪರಿಸರದ ಸೂಕ್ಷ್ಮತೆಗೆ ಅಡ್ಡಿತರುವ ಪ್ರಯತ್ನಗಳನ್ನು ನಿಗ್ರಹಿಸಲು ಸರ್ಕಾರ ಬಲವಾದ ಕಾನೂನು ಜಾರಿಗೆ ತಂದಿದೆ ಎಂದು ತಿಳಿಸಿದರು.


ಪ್ರಕೃತಿ ನಾಶ, ಕುಡಿಯುವ ನೀರಿಗಾಗಿ ಪರದಾಟ
ಚನ್ನಪಟ್ಟಣ: ಜಗತ್ತಿನಲ್ಲಿ 2 ಬಿಲಿಯನ್‌ಗೂ ಹೆಚ್ಚು ಮಂದಿ ಕುಡಿಯುವ ನೀರಿಗಾಗಿ ಪರಿತಪಿಸುತ್ತಿದ್ದಾರೆ. ಪರಿಸರದ ಬಗ್ಗೆ ನಾವು ಇಷ್ಟು ದಿನ ನಿರ್ಲಕ್ಷ್ಯ ತೋರುತ್ತಾ ಬಂದಿರುವುದಕ್ಕೆ ಇಂದು ನಾವು ಸರಿಯಾದ ಬೆಲೆಯನ್ನೇ ತೆರ
ಬೇಕಿದೆ ಎಂದು ಕೇಂಬ್ರಿಡ್ಜ್ ವಿದ್ಯಾಸಂಸ್ಥೆಯ ಸಂಸ್ಥಾಪಕ ಧರ್ಮದರ್ಶಿ ಎಸ್. ಲಿಂಗೇಶ್‌ಕುಮಾರ್ ಅಭಿಪಾಯಪಟ್ಟರು.
ತಮ್ಮ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ  ಮಕ್ಕಳಿಗೆ ಗಿಡ ವಿತರಿಸಿ ಮಾತನಾಡಿ, ಮರಗಿಡಗಳನ್ನ ನಾವೆಲ್ಲ ನಾಶಮಾಡುತ್ತಾ ಬಂದ ಪರಿಣಾಮ ಇಂದು ಮಳೆ ಇಲ್ಲದೆ ಅಂತರ ಜಲ ಬತ್ತಿಹೋಗಿ ಜನಜೀವನ ಸಂಕಷ್ಟದಲ್ಲಿ ದಿನದೂಡುವಂತಾಗಿದೆ. ಕುಡಿಯುವ ನೀರಿಗಾಗಿ ನಮ್ಮ ತಾಲೂಕಿನ ಸಾಕಷ್ಟು ಗ್ರಾಮಗಳ ಜನತೆ ಪರದಾಡುವಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಟ್ರಸ್ಟಿ ಚಿತ್ರಾ ಲಿಂಗೇಶ್‌ಕುಮಾರ್, ಪ್ರಾಂಶುಪಾಲ ನಿಂಗೇಗೌಡ, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲೆ ಇಂದ್ರಾಣಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.