ಬೆಂಗಳೂರು ಗ್ರಾಮಾಂತರ

ಪರಿಸರ ಉಳಿದರೆ ನಮ್ಮ ಉಳಿವು

Published On :

ದೊಡ್ಡಬಳ್ಳಾಪುರ: ತಾಲೂಕಿನ ಕನಸವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಪ್ರಾಂಶುಪಾಲ ಎಚ್.ಎಸ್.ರಾಜಶೇಖರಯ್ಯ ಕಾರ್ಯಕ್ರಮ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಭೋಗ ಜೀವನದಿಂದ ಪರಿಸರ ವಿನಾಶವಾಗುತ್ತಿದೆ. ಪರಿಸರ ಉಳಿಯದಿದ್ದರೆ ಮಾನವ ಜೀವನ ಅಸ್ತವ್ಯಸ್ಥವಾಗಲಿದೆ. ಜೀವರಾಶಿಗಳಿಗೂ ವಿನಾಶ ತಪ್ಪಿದ್ದಲ್ಲ ಎಂಬ ಎಚ್ಚರಿಕೆ ಇರಬೇಕು ಎಂದರು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕ ಕಂಬಣ್ಣ ಮಾತನಾಡಿದರು. ಉಪನ್ಯಾಸಕಿ ಎಸ್.ಪಿ. ವೃಂದಮ್ಮ, ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಪ್ರತಿಜ್ಞಾವಿಧಿ ಬೋಧಿಸಿದರು. ಎಸ್.ಕೆ. ಹನುಮೇಗೌಡ, ಕೆ.ಪಿ.ಮಂಗಳ, ರಾಜಶ್ರೀ, ಉಪೇಂದ್ರ, ಮಂಜುಳ, ಬಸವರಾಜು ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



'ಪರಿಸರ ಉಳಿಸಿ ಬೆಳೆಸುವಲ್ಲಿ  ಇಚ್ಛಾಶಕ್ತಿ ತೋರಬೇಕು'
ಸೂಲಿಬೆಲೆ: ವಿದ್ಯಾರ್ಥಿಗಳು ಬರೀ ಕಲಿಕೆಯತ್ತ ಮಾತ್ರ ಆಸಕ್ತಿ ತೋರದೆ ಸಮಾಜದ ಪ್ರಗತಿಗೆ ತಮ್ಮ ಕೈಲಾದ ಸಹಾಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು.ಮಾನವನ ಅತಿಯಾದ ಸ್ವಾರ್ಥಕ್ಕೆ ಪರಿಸರ ನಾಶವಾಗುತ್ತಿದ್ದು,ಇದನ್ನು ಉಳಿಸಿ ಬೆಳೆಸಲು ವಿದ್ಯಾರ್ಥಿಗಳು ಇಚ್ಚಾ ಶಕ್ತಿಯನ್ನು ತೋರಬೇಕಿದೆ ಎಂದು ಶಾಸಕ ಎನ್.ನಾಗರಾಜ್ ಕಿವಿ ಮಾತು ಹೇಳಿದ್ದಾರೆ.
ಸೂಲಿಬೆಲೆಯ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುಕೋ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣಿ ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿ ಸಸಿ ನೆಟ್ಟು ಮಾತನಾಡಿದರು.ಪಠ್ಯದ ಜೋತೆಗೆ ಪರಿಸರ ಕಾಳಜಿಯನ್ನು ಬೆಳೆಸಿಕೊಳ್ಳಬೇಕಿರುವ ವಿದ್ಯಾರ್ಥಿಗಳು ತಮ್ಮ ಮನೆಯ ಸುತ್ತಮುತ್ತ ಒಂದೊಂದು ಸಸಿ ನೆಡಬೇಕು. ಅಕ್ಕಪಕ್ಕದ ನಿವಾಸಿಗಳಿಗೆ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.     ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರು, ಸೈಕಲ್ ಸ್ಟ್ಯಾಂಡ್ ಹಾಗೂ ಸಮಾರಂಭಗಳನ್ನು ನಡೆಸಲು ವಿದ್ಯಾರ್ಥಿಗಳಿಗೆ ಸಭಾಂಗಣದ ಕೊರತೆಯಿದೆ ಎಂದು ಉಪನ್ಯಾಸಕ ಹನುಮಂತರಾಯಪ್ಪ ಅವರ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಇನ್ನೂ ಮೂರು ದಿನದಲ್ಲಿ ಕಾಲೇಜು ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಅನುಕೂಲವಾಗುವಂತೆ ಕೊಳವೆ ಬಾವಿಯೊಂದನ್ನು ಕೊರೆಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.



ಬಯಲು ಬಂಧಿಖಾನೆ: ಪರಿಸರ ದಿನ
ದೇವನಹಳ್ಳಿ:  ದೇವನಹಳ್ಳಿ ತಾಲೂಕು ಆವತಿ ಸಮೀಪವಿರುವ ಕೋರಮಂಗಲ ಬಯಲು ಬಂಧಿಖಾನೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಗುರುವಾರ ಸಂಜೆ ಸಹಾಯಕ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಆವತಿ ಗ್ರಾಮಾಂತರ ಪ್ರೌಢಶಾಲೆ, ಪರಿಸರವಾದಿಗಳು ಸಂಯುಕ್ತವಾಗಿ ಆಯೋಜಿಸಿದ್ದರು. ರಸ್ತೆ ಸುರಕ್ಷತೆ ಹಾಗೂ ಸಾರಿಗೆ ಆಯುಕ್ತ ಕೆ.ಅಮರನಾರಾಯಣ ಅವರು ಬಯಲು ಬಂಧೀಖಾನೆಯಲ್ಲಿ ಹಲವಾರು ತೇಗದ ಸಸಿಗಳನ್ನು ನೆಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.