ಬೆಂಗಳೂರು ಗ್ರಾಮಾಂತರ

ಬಿರುಗಾಳಿ ಮಳೆ: ಮನೆಗೆ ನುಗ್ಗಿದ ಚರಂಡಿ ನೀರು

Published On :

ಸೂಲಿಬೆಲೆ: ಹೊಸಕೋಟೆ ತಾಲೂಕಿನ ನಾನಾ ಕಡೆ ಗುರುವಾರ ಮಧ್ಯ ರಾತ್ರಿಯಿಂದ ಬೆಳಗಿನ ಜಾವದವರೆಗೆ ಸುರಿದ ಬಿರುಗಾಳಿ ಸಹಿತ ಮಳೆ ಹಲವೆಡೆ ಅವಾಂತರ ಸೃಷ್ಟಿಸಿದೆ.
ಎಂದು ಬರುವದೋ ಮಳೆ ಎಂದು ಕಾದ ರೈತನಿಗೆ ಮಳೆ ಖುಷಿ ತಂದರೆ, ತಗ್ಗು ಪ್ರದೇಶದಲ್ಲಿರುವ ಮನೆಯವರಿಗೆ ಯಾಕಾದರೂ ಬಂತೋ ಮಳೆ ಎಂದು ಚುನಾಯಿತ ಪ್ರತಿನಿಧಿ, ಅಧಿಕಾರಿಗಳನ್ನು ಶಪಿಸಿಕೊಳ್ಳುವಂತೆ ಮಾಡಿದೆ. ಹೊಸಕೋಟೆ ತಾಲೂಕಿನ ಬೈಲುನರಸಾಪುರ ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜುಗಾಗಿ ಆಳವಡಿಸಿದ್ದ 25 ಕೆ.ವಿ ಟ್ರಾನ್ಸ್ಪಾರ್ಮರ್ಮೇಲೆ ಮರ ಬಿದ್ದು ಹಾನಿಯಾಗಿದೆ.ಹಡಕನಹಳ್ಳಿಯಲ್ಲಿ ಮರ ಬಿದ್ದು ಎರಡು ಕಂಬ,ಬೀಮಾಕನಹಳ್ಳಿಯಲ್ಲಿ ಮರಬಿದ್ದು ಎರಡು ಕಂಬ ಹಾಗೂ ಗುಳ್ಳಹಳ್ಳಿಯಲ್ಲಿ ಮರ ಬಿದ್ದು ಒಂದು ವಿದ್ಯುತ್ಕ್‌ಂಬ ಮುರಿದು ಬಿದ್ದಿದೆ.ಇದಲ್ಲದೆ ಗೊಟ್ಟಿಪುರದಲ್ಲಿ ಹಾಗೂ ಕೂರಳೂರು ಗ್ರಾಮದಲ್ಲಿ ವಿದ್ಯುತ್ಕ್‌ಂಬಗಳು ನೆಲಕ್ಕುರುಳಿವೆ.ಸೂಲಿಬೆಲೆ ಹೋಬಳಿಯಲ್ಲಿ ಗುರುವಾರ ರಾತ್ರಿ 32.5 ಮೀ ಮೀ ಮಳೆಯಾಗಿದೆ.
ಮನೆಗಳಿಗೆ ಕೊಳಚೆ ನೀರು-ಸೂಲಿಬೆಲೆ ಹೋಬಳಿಯ  ತಿಮ್ಮಸಂದ್ರ ಗ್ರಾಮದಲ್ಲಿನ ಕಾಲೋನಿಯಲ್ಲಿ ನರೇಗ ಯೋಜನೆಯಲ್ಲಿ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು,ಹಣ ಮಾತ್ರ ಪೂರ್ತಿ ಬಿಡುಗಡೆಯಾಗಿದೆ. ಅಪೂರ್ಣ ಕಾಮಗಾರಿ ನಡೆದ ಪ್ರದೇಶದಿಂದ ಹರಿದ ಬಂದ ನೀರು ಚರಂಡಿ ತುಂಬಿ ಕೊಳಚೆ ಸಮೇತ ಮನೆಗಳಿಗೆ ನುಗ್ಗಿದೆ. ಇಡಿ ರಾತ್ರಿ ಮನೆಯವರು ನಿದ್ದೆಯಿಲ್ಲದೆ ಕೊಳಚೆ ನೀರನ್ನು ಎತ್ತಿ ಹೊರ ಹಾಕಬೇಕಾಯಿತು. ಹಣ ಗುಳ್ಳುಂ ಮಾಡಿ ಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿರುವ ಅಧಿಕಾರಿಗಳು ಹಾಗೂ ಸ್ಥಳೀಯ ಚುನಾಯಿತ ಪ್ರತಿನಿಧಿಗಳನ್ನು ಜನರು ಶಪಿಸಿಕೊಳ್ಳುವಂತಾಯಿತು.ಮಳೆ ಬಂದಾಗಲೆಲ್ಲ ಇದೇ ಸಮಸ್ಯೆಯನ್ನು ಈ ಭಾಗದ ಜನರು ಎದುರಿಸುತ್ತಿದ್ದು, ಕೊಳಚೆ ನೀರು ಮನೆಗಳಿಗೆ ನುಗ್ಗಿ ರೋಗಗಳು ಹರಡಲು ಕಾರಣವಾಗುತ್ತಿದೆ. ಕೂಡಲೇ ಅಪೂರ್ಣಗೊಂಡ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.