ಎ.ಜಿ ಕಚೇರಿಯ ಕ್ರಮ ಸಾಧುವಲ್ಲ
ಚನ್ನಪಟ್ಟಣ: 2013ರ ಬಳಿಕ ನಿವೃತ್ತರಾದ ದಿನಗೂಲಿ ನೌಕರರ ಪಿಂಚಣಿಯನ್ನು ಜಿ.ಪಂ ಮಟ್ಟದಲ್ಲಿ ಬಗೆಹರಿಸಿ ಕೊಳ್ಳುವಂತೆ ಸೂಚಿಸಿ ಕಡತವನ್ನು ಹಿಂದಿರುಗಿಸಿರುವ ಎ.ಜಿ ಕಚೇರಿಯ ಕ್ರಮ ಸಾಧುವಲ್ಲ ಎಂದು ದಿನಗೂಲಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ಅಬ್ಬೂರು ರಾಜಮುಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 1989 ರಲ್ಲಿ 10 ವರ್ಷಗಳ ಕಾಲ ಜಿ.ಪಂ, ಲೋಕೋಪಯೋಗಿ, ರೇಷ್ಮೆ, ಕೃಷಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೇವೆಸಲ್ಲಿಸುತ್ತಿರುವ ದಿನಗೂಲಿ ನೌಕರರನ್ನು ಕಾಯಂ ಮಾಡಿಕೊಳ್ಳುವಂತೆ ನ್ಯಾಯಾಲಯ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ 63 ಸಾವಿರ ನೌಕರರನ್ನು ಖಾಯಂ ಮಾಡಿಕೊಳ್ಳಲಾಗಿದೆ. ಇವರಲ್ಲಿ ಅರ್ಧದಷ್ಟು ನೌಕರರು ನಿವೃತ್ತರಾಗಿದ್ದಾರೆ. 2013 ರನಂತರ ನಿವೃತ್ತರಾಗುವ ನೌಕರರ ಪಿಂಚಣಿಯನ್ನು ಜಿ.ಪಂ ಮಟ್ಟದಲ್ಲಿ ಬಗೆಹರಿಸಿಕೊಳ್ಳಿ ಎಂದು ಸರ್ಕಾರ ಹೊಡಿಸಿರುವ ಆದೇಶ ಸಾಕಷ್ಟು ಗೊಂದಲ ಮೂಡಿಸಿದೆ ಎಂದು ತಿಳಿಸಿದ್ದಾರೆ. ಕೆಲ ನೌಕರರನ್ನು ಜಿ.ಪಂ ನೇಮಕ ಮಾಡಿಕೊಂಡಿದ್ದರೆ ಮತ್ತೆ ಕೆಲ ನೌಕರರನ್ನು ನೇರವಾಗಿ ಸಚಿವಾಲಯ ನೇಮಕ ಮಾಡಿಕೊಂಡಿದೆ. ಜಿ.ಪಂ ನಲ್ಲಿ ಪಿಂಚಣಿ ಬಗೆಹರಿಸಿಕೊಳ್ಳಿ ಎಂದಾದಲ್ಲಿ ಈ ಎರಡೂ ರೀತಿ ನೇಮಕ ಗೊಂಡಿರುವ ನೌಕರರ ಪಿಂಚಣಿ ನಿಗದಿಗೆ ಸಮಸ್ಯೆಯಾಗುತ್ತದೆ. ಕೂಡಲೇ ಸರ್ಕಾರ ತನ್ನ ಆದೇಶವನ್ನು ಹಿಂದಕ್ಕೆ ಪಡೆದು ದಿನಗೂಲಿ ನೌಕರರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

