ಸೌಲತ್ತು ಪಡೆಯಲು ಅರಿವು ಮೂಡಿಸಿ
ಮಾಗಡಿ: ವಿವಿಧ ಇಲಾಖೆ ಸೌಲತ್ತುಗಳನ್ನು ರೈತರು ಪಡೆಯಲು ಅನುವುಗಾರರು ರೈತರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಂ.ಕೆ.ಧನಂಜಯ ತಿಳಿಸಿದರು.
ತಾಲೂಕಿನ ತಿಪ್ಪಸಂದ್ರ ತಾ.ಪಂ. ಸಭಾಂಗಣದಲ್ಲಿ ಏರ್ಪಡಿಸಿದ್ದ 2014-15ನೇ ಸಾಲಿನ 2ನೇ ಹಂತದ ಹೋಬಳಿ ಮಟ್ಟದ ಭೂಚೇತನ ಯೋಜನೆಯ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ರೈತರಿಗೆ ಸಿಗಬೇಕಾದ ಸೌಲತ್ತುಗಳು ಮಧ್ಯವರ್ತಿಗಳ ಪಾಲಾಗಬಾರದು. ಸೌಲತ್ತು ನೀಡಲು ತಾರತಮ್ಯ ಬೇಡ,
ಅನುವುಗಾರರು ಕೃಷಿ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ರೈತರಿಗೆ ಮಟ್ಟಿಸಬೇಕು. ರೈತರು ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳನ್ನು ಪಡೆಯುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟದ ಹಾಲು ಪೂರೈಕೆಯಲ್ಲಿ ಮಾಗಡಿ ತಾಲೂಕು ರಾಜ್ಯಕ್ಕೆ ಮಾದರಿಯಾಗಿದೆ. ಇದೇ ರೀತಿ ಕೃಷಿ ಬೇಸಾಯದಲ್ಲೂ
ತಾಂತ್ರಿಕತೆ ಅಳವಡಿಸಿಕೊಂಡು ಬೆಳೆಯಲ್ಲಿ ಹೆಚ್ಚಿನ ಇಳುವರಿ ಮತ್ತು ಗುಣಮಟ್ಟ ಕಾಪಾಡಿಕೊಂಡು ಬರುವ ಮೂಲಕ ಮಾಗಡಿ ತಾಲೂಕಿನ ರೈತರು ರಾಜ್ಯಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
ಕೇವಲ ರೈತರಿಗೆ ಭೂಚೇತನ ಯೋಜನೆಯ ಕಾರ್ಯಗಾರ ಅರಿವು ಮೂಡಿಸಿದರೆ ಸಾಲದು, ಸರ್ಕಾರದ ಯೋಜನೆಗಳು ಉಪಯೋಗವಾಗಬೇಕಾದರೆ, ಮೊದಲು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ನೀರಾವರಿ ಯೋಜನೆಯನ್ನು ಸಹ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸಲು ಯೋಜನೆ ರೂಪಿಸಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳ ನಡೆ ರೈತರ ಜಮೀನಿನ ಕಡೆ ಆಗಬೇಕಿದೆ ಎಂದರು.
ರೈತರಿಗೆ ನಷ್ಟ: ಈಗಾಗಲೇ ರೈತರು ಆಹಾರ ಉತ್ಪಾದನೆಯಲ್ಲಿ ಮುಂದಿದ್ದಾರೆ. ಆದರೆ ಸರಿಯಾದ ಬೆಲೆ ಸಿಗದ ಕಾರಣ ರೈತರು ನಷ್ಟ ಅನುಭವಿಸುತ್ತಿದ್ದು, ಗ್ರಾಮೀಣ ಪ್ರದೇಶಗಳು ವೃದ್ಧಾಶ್ರಮಗಳಾಗುತ್ತಿವೆ ಎಂದು ಆಂತಕ ವ್ಯಕ್ತಪಡಿಸಿದ ಬಗಿನಗೆರೆ ರಾಮಣ್ಣ, ದೇಶದ ಆರ್ಥಿಕ ಸುಧಾರಣೆಗೆ ಕೃಷಿಗೆ ಬೆಂಬಲ ಬೆಲೆ ನಿಗದಿಯಾಬೇಕು.
ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ಕೃಷಿ ಬೇಸಾಯ ಉಳಿದರೆ ಮಾತ್ರ ಆಹಾರ ಉತ್ಪಾದನೆಯಲ್ಲಿ ದೇಶ ಪ್ರಗತಿ ಸಾಧಿಸಲು ಸಾಧ್ಯವಿದೆ ಎಂದು ಅವರು ತಿಳಿಸಿದರು.
ತಾ.ಪಂ. ಮಾಜಿ ಅಧ್ಯಕ್ಷ ಜಿ.ವಿ. ರಾಮಣ್ಣ ಮಾತನಾಡಿ ಗ್ರಾಮೀಣ ಪ್ರದೇಶದ ಯುವ ಶಕ್ತಿಗಳು ನಗರ ಪ್ರದೇಶದತ್ತ ವಲಸೆ ಹೋಗುವುದನ್ನು ನಿಲ್ಲಿಸಲು ಸರ್ಕಾರ ಅನೇಕ ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಆದರೂ ಅರ್ಹ ಪಲಾನುಭವಿಗಳಿಗೆ ಸೌಲತ್ತು ದೊರಕದೆ, ಮಧ್ಯವರ್ತಿಗಳ ಪಾಲಾಗತ್ತಿರುವುದರಿಂದ ಕೃಷಿ ಚಟುವಟಿಕೆ ಕುಂಠಿತವಾಗುತ್ತಿದೆ. ಯುವಕರನ್ನು ಆಕರ್ಷಿಸುವ ಯೋಜನೆಗಳು ಜಾರಿಯಾಗಲಿ ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಎಚ್.ಸಿ. ಕೃಷ್ಣಪ್ಪ ಭೂಚೇತನ ಯೋಜನೆಯ ಕಾರ್ಯಗಾರ ಕುರಿತು ಪ್ರಾಸ್ತಾವಿಕವಾಗಿ ತಿಳಿಸಿಕೊಟ್ಟರು. ತಿಪ್ಪಸಂದ್ರ ಗ್ರಾ.ಪಂ. ಅಧ್ಯಕ್ಷ ಕೆಂಪಣ್ಣ ಅಧ್ಯಕ್ಷತೆ ವಹಿಸಿದ್ದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್, ರೇಷ್ಮೆ ಇಲಾಖೆಯ ಮಾಧವರಾವ್, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಆರ್. ಶಂಕರ್ ಇಲಾಖೆ ಯೋಜಯನೆ ಮಹತ್ವ ಮತ್ತು ಸೌಲತ್ತುಗಳನ್ನು ಕುರಿತು ವಿವರಿಸಿದರು. ಕೃಷಿ ಪ್ರಭಾರಿ ಅಧಿಕಾರಿ ಎಸ್. ಆನಂದ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

